ಫುಟ್ಬಾಲ್ ಜಗತ್ತಿನ ಸ್ಟಾರ್ ಆಟಗಾರ ಹ್ಯಾರಿ ಕೇನ್ ರವರ ನೆಚ್ಚಿನ ಐಪಿಎಲ್ ತಂಡದ ಕುರಿತು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಈ ಬಾರಿಯ ಐಪಿಎಲ್ ಎನ್ನುವುದು ಪ್ರಥಮಾರ್ಧವನ್ನು ಮುಗಿಸಿದೆ. ಈ ಬಾರಿ ಎಲ್ಲಾ ತಂಡಗಳು ಕೂಡ ಆಶ್ಚರ್ಯಕರ ಪ್ರದರ್ಶನವನ್ನು ನೀಡುತ್ತಿವೆ. ಹೀಗಾಗಿ ಪ್ರತಿಯೊಂದು ಪಂದ್ಯಗಳು ಕೂಡ ಪ್ರೇಕ್ಷಕರಿಗೆ ರೋಚಕತೆಯನ್ನು ನೀಡುತ್ತಿದೆ. ಅದರಲ್ಲೂ ಕೊನೆಯ ಓವರ್ ಹಾಗೂ ಕೊನೆಯ ಬಾಲ್ ಪಂದ್ಯಗಳು ದೊಡ್ಡ ಮಟ್ಟದಲ್ಲಿ ಜಾಗತಿಕವಾಗಿ ಸುದ್ದಿ ಮಾಡುತ್ತಿವೆ. ಅಷ್ಟಿಲ್ಲದೇ ನಮ್ಮ ಐಪಿಎಲ್ ಅನ್ನು ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನ್ನುತ್ತಾರಾ ನೀವೇ ಹೇಳಿ. ಅದರಲ್ಲೂ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ.
ಐಪಿಎಲ್ ನ ಚಾಂಪಿಯನ್ ತಂಡ ಗಳಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ನೀರಸ ಪ್ರದರ್ಶನ ನೀಡುತ್ತಿವೆ. ಈ ಬಾರಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಅತ್ಯಂತ ಕಷ್ಟಕರವಾಗಿದ್ದು ಬಹುತೇಕ ಎಲ್ಲಾ ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಹೊರತುಪಡಿಸಿ ಹಗ್ಗಜಗ್ಗಾಟದ ಕಾಂಪಿಟೇಶನ್ ನೀಡುತ್ತಿವೆ. ಅದರಲ್ಲೂ ನಮ್ಮ ಐಪಿಎಲ್ ಕುರಿತಂತೆ ವಿಶ್ವದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಆಗಿರುವ ಫುಟ್ಬಾಲ್ ನ ಹೆಸರಾಂತ ಸ್ಟಾರ್ ಆಟಗಾರನಾಗಿರುವ ಹ್ಯಾರಿ ಕೇನ್ ಕೂಡ ಐಪಿಎಲ್ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೊಟೆನ್ ಹ್ಯಾಮ್ ಹಾಟ್ಸ್ಪರ್ ತಂಡದ ಯಶಸ್ವಿ ಫಾರ್ವರ್ಡ್ ಆಟಗಾರನಾಗಿರುವ ಹ್ಯಾರಿ ಕೇನ್ ಐಪಿಎಲ್ನಲ್ಲಿ ತಮ್ಮ ನೆಚ್ಚಿನ ತಂಡ ಯಾವುದು ಹಾಗೂ ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ.

ಹಾಗಿದ್ದರೆ ಕ್ರಿಕೆಟ್ ಜಗತ್ತಿನ ತದ್ವಿರುದ್ಧ ಕ್ರೀಡಾ ಜಗತ್ತಿನಲ್ಲಿ ಇರುವ ಹ್ಯಾರಿ ಕೆನ್ ರವರ ಫೇವರೆಟ್ ಐಪಿಎಲ್ ತಂಡ ಯಾವುದು ಎಂದು ನೋಡುವುದಾದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಅದಕ್ಕೆ ಕಾರಣರಾಗಿರುವುದು ನಮ್ಮೆಲ್ಲರ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ. ಹೌದು ಗೆಳೆಯರೇ ವಿರಾಟ್ ಕೊಹ್ಲಿ ರವರನ್ನು ಹ್ಯಾರಿ ಕೇನ್ ಹಲವಾರು ಬಾರಿ ಭೇಟಿಯಾಗಿದ್ದಾರೆ. ಹೀಗಾಗಿ ಅವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದ್ದು ವಿರಾಟ್ ಕೊಹ್ಲಿ ರವರ ಕುರಿತಂತೆ ಹ್ಯಾರಿ ಕೇನ್ ಗುಣಗಾನ ಮಾಡಿದ್ದಾರೆ. ವಿರಾಟ್ ಕೊಹ್ಲಿ ಒಬ್ಬ ಡೌನ್ ಟು ಅರ್ಥ್ ವ್ಯಕ್ತಿ ಎಂಬುದಾಗಿ ಕೂಡ ಹೇಳಿದ್ದಾರೆ. ಸದ್ಯಕ್ಕೆ ವಿರಾಟ್ ಕೊಹ್ಲಿ ರವರು ಕೊಂಚಮಟ್ಟಿಗೆ ವಿಫಲ ಪ್ರದರ್ಶನವನ್ನು ನೀಡುತ್ತಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ.