ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ರವರ ಕುರಿತಂತೆ ಪ್ರತಿಕ್ರಿಯೆ ನೀಡಿ ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು ಗೊತ್ತಾ??

12

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 9 ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಗೆದ್ದು ನಾಲ್ಕು ಪಂದ್ಯಗಳಲ್ಲಿ ಸೋತು 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ನಿಂತಿದೆ. ಆರಂಭಿಕವಾಗಿ ಸತತ ಗೆಲುವನ್ನು ಸಾಧಿಸಿಕೊಂಡು ಬಂದಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಸತತವಾಗಿ ಸೋಲನ್ನು ಕಾಣುತ್ತಿರುವುದು ನಿಜಕ್ಕೂ ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ. ಕಳೆದಿಲ್ಲ ಬಾರಿಯ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಲು ಸಶಕ್ತವಾಗಿದೆ ಎಂದರೆ ತಪ್ಪಾಗಲಾರದು.

ಆದರೆ ಈ ಬಾರಿ ಬರುತ್ತ ಬರುತ್ತ ಕೊನೆಕೊನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನ ನೀಡುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ತಂಡದ ಕುರಿತಂತೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಮತ್ತೊಮ್ಮೆ ತಂಡ ಚೋಕ್ ಮಾಡುತ್ತಿರುವುದು ಚಿಂತೆಗೆ ಕಾರಣವಾಗಿದೆ. ತಂಡದ ಕೋಚ್ ಆಗಿರುವ ಸಂಜಯ್ ಬಂಗಾರ ರವರು ವಿರಾಟ್ ಕೊಹ್ಲಿ ರವರ ಕುರಿತಂತೆ ಸೇರಿದಂತೆ ತಂಡದ ಪ್ರದರ್ಶನ ಕುರಿತಂತೆ ತಮ್ಮ ಅಭಿಪ್ರಾಯವೇನು ಡ್ರೆಸ್ಸಿಂಗ್ ರೂಮ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಕುರಿತಂತೆ ಸಂಜಯ್ ಬಂಗಾರ್ ಏನು ಹೇಳಿದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ.

ಪ್ರಮುಖವಾಗಿ ರಾಜಸ್ತಾನ ರಾಯಲ್ಸ್ ವಿರುದ್ಧ ಪಂದ್ಯದ ಕುರಿತಂತೆ ಹೇಳುವುದಾದರೆ ಕೊನೆಯಲ್ಲಿ ಹರ್ಷಲ್ ಪಟೇಲ್ ರವರು 18 ರನ್ನುಗಳನ್ನು ಬಿಟ್ಟುಕೊಟ್ಟಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಾಯಕ ಡುಪ್ಲೆಸಿಸ್ ರವರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷೆಯಲ್ಲಿದ್ದೆವು ಆದರೆ ಅವರು ಕೂಡ ಕಡಿಮೆ ಮೊತ್ತಕ್ಕೆ ಔಟಾಗಿದ್ದಾರೆ. ವಿರಾಟ್ ಕೊಹ್ಲಿ ರವರು ಈ ಪಂದ್ಯದಲ್ಲಿ ಬೌನ್ಸರ್ ಗೆ ಔಟ್ ಆಗಿರಬಹುದು ಆದರೆ ನೆಕ್ಸ್ಟ್ ಪಂದ್ಯದಲ್ಲಿ ಬೌನ್ಸರ್ ಗೆ ಸಿಕ್ಸ್ ಹೊಡೆಯಲಿದ್ದಾರೆ ಎಂಬುದಾಗಿ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಕಳಪೆ ಫಾರ್ಮ್ ನಲ್ಲಿ ಇದ್ದರೂ ಕೂಡ ಅವರ ಕಂಬ್ಯಾಕ್ ಕುರಿತಂತೆ ಸಂಜೆ ಬಂಗಾರ ಆತ್ಮ ವಿಶ್ವಾಸವನ್ನು ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಮುಂದಿನ ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ಎದುರು ಪಂದ್ಯವನ್ನು ಆಡಲಿದೆ ಹೀಗಾಗಿ ವಿರಾಟ್ ಕೊಹ್ಲಿ ರವರು ಫಾರ್ಮ್ ಗೆ ವಾಪಸಾಗುವುದು ಅಗತ್ಯವಾಗಿದೆ ಎಂಬುದಾಗಿ ಹೇಳಿದ್ದಾರೆ. ತಂಡದಲ್ಲಿ ಶಾಬಾಜ್ ಅಹ್ಮದ್ ಸೇರಿದಂತೆ ಹಲವಾರು ಆಟಗಾರರ ಕುರಿತು ಗುಣಗಾನ ಮಾಡಿದ್ದಾರೆ ಆದರೆ ಅವರು ಪ್ರತಿಯೊಂದು ಪಂದ್ಯದಲ್ಲಿ ಕನ್ಸಿಸ್ಟೆಂಟ್ ಆಗಿ ಆಡಬೇಕಾಗಿರುವುದು ಅಗತ್ಯವಾಗಿದೆ ಎಂಬುದಾಗಿ ಹೇಳಿದ್ದಾರೆ.