ಬಾಲಿವುಡ್ ಅನ್ನು ಸೌತ್ ಸಿನಿಮಾಗಳು ಆವರಿಸುತ್ತಿವೆ ಎನ್ನುವ ಮಾತಿಗೆ ನಟ ನವಾಜುದ್ದೀನ್ ಸಿದ್ದಿಕಿ ನೀಡಿದ ಷಾಕಿಂಗ್ ಪ್ರತಿಕ್ರಿಯೆ ಏನು ಗೊತ್ತಾ??

60

ನಮಸ್ಕಾರ ಸ್ನೇಹಿತರೇ ಈಗಾಗಲೇ ಬಾಲಿವುಡ್ ಚಿತ್ರರಂಗದ ತುಂಬೆಲ್ಲ ಸೌತ್ ಸಿನಿಮಾಗಳು ತುಂಬಿದೆ ಎಂದರೆ ತಪ್ಪಾಗಲಾರದು. ಮೊದಲಿಗೆ ಬಾಹುಬಲಿ ಸರಣಿ ಚಿತ್ರಗಳು ಹಿಂದಿಯಲ್ಲಿ ತಮ್ಮದೇ ಆದಂತಹ ರಾಜ್ಯಭಾರವನ್ನು ಮಾಡಿದ್ದವು. ಅಲ್ಲಿಂದ ಪ್ರಾರಂಭವಾಗಿ ನಂತರ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಕೊಂಚಮಟ್ಟಿಗೆ ಸದ್ದು ಮಾಡಿತ್ತು. ಇದಾದ ನಂತರ ಬಂದಂತಹ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ಮೊದಲ ಭಾಗ ಬಾಲಿವುಡ್ನಲ್ಲಿ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಇದಾದ ನಂತರ ಬಂದಂತಹ ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಆರ್ ಆರ್ ಆರ್ ಚಿತ್ರ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಬಾಲಿವುಡ್ನಲ್ಲಿ 330 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಬಾಲಿವುಡ್ ಚಿತ್ರಗಳ ಹಿಡಿಯುತ್ತಿರುವ ಸಮಯದಲ್ಲಿ ಸೌತ್ ಸಿನಿಮಾಗಳು ಬಾಲಿವುಡ್ ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಹಾಗೂ ಪ್ರೇಕ್ಷಕರ ಮನ ಗೆಲ್ಲುತ್ತಿರುವುದು ನಿಜಕ್ಕೂ ಕೂಡ ಬಾಲಿವುಡ್ ನಟ ನಿರ್ದೇಶಕ ನಿರ್ಮಾಪಕರ ಮುಜುಗರಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಈ ಕುರಿತಂತೆ ಬಾಲಿವುಡ್ ಚಿತ್ರರಂಗದ ಖ್ಯಾತ ಪೋಷಕನಟ ಆಗಿರುವ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌತ್ ಸಿನಿಮಾಗಳು ಬಾಲಿವುಡ್ನಲ್ಲಿ ಮಿಂಚು ಹರಿಸುತ್ತಿರುವುದರಿಂದ ಆಗಿ ಬಾಲಿವುಡ್ ಮಂದಿ ಮುಜುಗರಕ್ಕೀಡಾಗಿದ್ದಾರೆ ಎಂದು ಅಂದುಕೊಳ್ಳುವುದು ತಪ್ಪು. ಸದ್ಯಕ್ಕೆ ಬಾಲಿವುಡ್ ಮಂದಿಗೆ ಸೌತ್ ಸಿನಿಮಾಗಳು ಇಷ್ಟವಾಗುತ್ತಿವೆ ಹೀಗಾಗಿ ಇದು ಒಂದು ಹಂತವಷ್ಟೆ, ಬಾಲಿವುಡ್ ಸಿನಿಮಾಗಳು ಕೂಡ ಚೆನ್ನಾಗಿ ಬಂದರೆ ಖಂಡಿತವಾಗಿ ಬಾಲಿವುಡ್ ಸಿನಿಮಾಗಳನ್ನು ಕೂಡ ಜನರು ಇಷ್ಟಪಡುತ್ತಾರೆ ಎಂಬುದಾಗಿ ಹೇಳಿದ್ದಾರೆ. ಇನ್ನು ಬಾಲಿವುಡ್ ಸಿನಿಮಾಗಳು ಸೌತ್ ಫಿಲಂ ಇಂಡಸ್ಟ್ರಿಯ ಸಿನಿಮಾಗಳನ್ನು ರಿಮೇಕ್ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಸ್ವಂತ ಕಥೆಗಳನ್ನು ಪ್ರೇಕ್ಷಕರ ಮುಂದೆ ತಂದಿರುವಂತಹ ಕೆಲಸ ಮಾಡಿದರೆ ಖಂಡಿತವಾಗಿ ಪ್ರೇಕ್ಷಕರು ನಮ್ಮ ಸಿನಿಮಾಗಳನ್ನು ಕೂಡ ಮೆಚ್ಚಿಸಿ ದೊಡ್ಡಮಟ್ಟದಲ್ಲಿ ಗೆಲ್ಲಿಸುತ್ತಾರೆ ಎಂಬುದಾಗಿ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. ನವಾಜುದ್ದೀನ್ ಸಿದ್ದಿಕಿ ರವರೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.