ಮನೆಯ ನೇಮ್ ಪ್ಲೇಟ್ ಬದಲಾವಣೆ ಮಾಡಿದ ಶಾರುಖ್: ಅದಕ್ಕಾಗಿ ಖರ್ಚು ಮಾಡಿದ ಹಣ ಎಷ್ಟು ಗೊತ್ತೇ?? ಐಷಾರಾಮಿ ಕಾರು ತಗೊಳುವಷ್ಟು.

48

ನಮಸ್ಕಾರ ಸ್ನೇಹಿತರೇ ನಿಮಗೆ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದ ಕಿಂಗ್ ಆಗಿರುವ ಕಿಂಗ್ ಶಾರುಖ್ ಖಾನ್ ರವರು ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ನಟರ ಪೈಕಿ ಯಲ್ಲಿ ಮುಂಚೂಣಿ ಸ್ಥಾನದಲ್ಲಿ ಕಾಣಸಿಗುತ್ತಾರೆ. ಹಲವಾರು ವರ್ಷಗಳಿಂದ ಶಾರುಖ್ ಖಾನ್ ಅವರವರು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ ರವರು ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಸಿನಿಮಾ ಎಂದರೇ ಜೀರೋ. ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಜೀರೋ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ ಚಾಪ್ಟರ್ 1 ಚಿತ್ರದ ಎದುರು ಸೋತಿದೆ.

ಹೀಗಾಗಿ ಹಲವಾರು ವರ್ಷಗಳ ವಿರಾಮದ ನಂತರ ಪಠಾಣ್ ಚಿತ್ರದ ಮೂಲಕ ಶಾರುಖ್ ಖಾನ್ ರವರು ಮತ್ತೆ ಸಿನಿಮಾ ರಂಗಕ್ಕೆ ವಾಪಸಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇದಾದನಂತರ ರಾಜಕುಮಾರ್ ಹಿರಾನಿ ರವರ ನಿರ್ದೇಶನದಲ್ಲಿ ಡಂಕಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇದರ ಅಧಿಕೃತ ಘೋಷಣೆ ಕೂಡ ನಡೆದಿದೆ. ಇದಾದ ನಂತರ ಶಾರುಖ್ ಖಾನ್ ರವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಆಟ್ಲೀ ರವರ ನಿರ್ದೇಶನದ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಶಾರುಖಾನ್ ಅವರವರ ಮನೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಹೌದು ಗೆಳೆಯರೇ ಶಾರುಖಾನ್ ರವರ ಮನೆಯ ಹೆಸರು ಮನ್ನತ್ ಎನ್ನುವುದಾಗಿ. ಮನ್ನತ್ ಕುರಿತಂತೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಇನ್ನು ಈ ಮನೆಯ ನೇಮ್ ಪ್ಲೇಟ್ ಬದಲಾಯಿಸಿದ್ದು ಇದರ ಬೆಲೆ ಕೇಳಿದರೆ ಖಂಡಿತವಾಗಿ ನೀವು ಕೂಡ ಬೆರಗಾಗುತ್ತೀರಾ. ಶಾರುಖ್ ಖಾನ್ ರವರ ಪತ್ನಿಯಾಗಿರುವ ಗೌರಿ ಖಾನ್ ರವರು ಒಬ್ಬ ಇಂಟೀರಿಯರ್ ಡಿಸೈನರ್ ಆಗಿದ್ದು ಅವರೇ ಈ ಮನೆಯ ನೇಮ್ ಪ್ಲೇಟ್ ಅನ್ನು ಬದಲಾಯಿಸಿದ್ದಾರೆ. ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಆದಾಯವನ್ನು ಹೊಂದಿರುವ ಶಾರುಖ್ ಖಾನ್ ರವರಿಗೆ ಈ ದುಬಾರಿ ಬೆಲೆಯ ಮನೆಯ ಹೆಸರಿನ ಪ್ಲೇಟ್ ಅಷ್ಟೊಂದು ದೊಡ್ಡ ವಿಷಯ ಅಲ್ಲದಿದ್ದರೂ ಕೂಡ ಇದು ನಮಗೆ ಖಂಡಿತವಾಗಿ ದೊಡ್ಡ ವಿಚಾರವೇ ಸರಿ. ಹೌದು ಗೆಳೆಯರೇ ಈ ಮನೆಯ ನೇಮ್ ಪ್ಲೇಟ್ ಮೊತ್ತ ಬರೋಬ್ಬರಿ 20 ರಿಂದ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದುಬಾರಿ ಬೆಲೆಯ ನೇಮ್ ಪ್ಲೇಟ್ ಹಾಕುವ ಅಗತ್ಯ ಇತ್ತಾ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.