ತಮ್ಮದೇ ಆದ ಅಭಿಮಾನಿ ಬಳಗವನ್ನು ಸಲ್ಮಾನ್ ಖಾನ್ ರವರ ಜೊತೆ ಯಾವುದೇ ಕಾರಣಕ್ಕೂ ನಟಿಸಲು ಒಪ್ಪದ ಟಾಪ್ 6 ನಟಿಯರು ಯಾರ್ಯಾರು ಗೊತ್ತೇ??

1,316

ನಮಸ್ಕಾರ ಸ್ನೇಹಿತರೇ ಸಲ್ಮಾನ್ ಖಾನ್ ರವರು ಬಾಲಿವುಡ್ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ದೊಡ್ಡ ಮಟ್ಟದ ಬೇಡಿಕೆ ಹಾಗೂ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಲಿವುಡ್ ಚಿತ್ರರಂಗದ ಬಹುತೇಕ ಪ್ರತಿಯೊಬ್ಬ ಸ್ಟಾರ್ ನಟಿಯ ಜೊತೆಗೆ ಸಲ್ಮಾನ್ ಖಾನ್ ರವರು ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೂ ಕೂಡ ಬಾಲಿವುಡ್ ಚಿತ್ರರಂಗದ ಈ 6 ನಟಿಯರು ನಟಿಸಲು ಹಿಂದೇಟು ಹಾಕುತ್ತಿದ್ದಾರಂತೆ. ಅವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಕಂಗನಾ ರಣಾವತ್; ಬಾಲಿವುಡ್ ಚಿತ್ರರಂಗದ ಕ್ವೀನ್ ಎನ್ನುವುದಾಗಿ ಕಂಗನಾ ರಣಾವತ್ ರವರನ್ನು ಕರೆಯುತ್ತಾರೆ. ಬಹುತೇಕ ಬಾಲಿವುಡ್ ಚಿತ್ರರಂಗದ ಎಲ್ಲಾ ಸೂಪರ್ ಸ್ಟಾರ್ ನಟರೊಂದಿಗೆ ನಟಿಸಿರುವ ಅನುಭವ ಇವರಿಗಿದೆ. ಆದರೆ ಇದುವರೆಗೂ ಸಲ್ಮಾನ್ ಖಾನ್ ರವರೊಂದಿಗೆ ನಟಿಸಿಲ್ಲ. ಸಲ್ಮಾನ್ ಖಾನ್ ರವರ ಸೂಪರ್ ಹಿಟ್ ಸಿನಿಮಾ ಸುಲ್ತಾನ್ ಸಿನಿಮಾಕ್ಕಾಗಿ ಆಫರ್ ಬಂದಿದ್ದರೂ ಕೂಡ ಅದನ್ನು ತಿರಸ್ಕರಿಸುತ್ತಾರೆ. ಇವರ ನಂತರವೇ ಅನುಷ್ಕಾ ಶರ್ಮಾ ರವರನ್ನು ಈ ಪಾತ್ರಕ್ಕಾಗಿ ಆಯ್ಕೆಮಾಡಲಾಗಿತ್ತು.

ಅಮೃತಾ ರಾವ್; ವಿವಾಹ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹವಾ ಸೃಷ್ಟಿಸಿಕೊಂಡಿರುವ ನಟಿ ಅಮೃತಾ ರಾವ್ ರವರಿಗೆ ಸಲ್ಮಾನ್ ಖಾನ್ ನಟನೆಯ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ಅವರ ತಂಗಿಯ ಪಾತ್ರಕ್ಕಾಗಿ ಆಹ್ವಾನಿಸಲಾಗಿತ್ತು. ಆದರೆ ಅಮೃತಾ ರಾವ್ ರವರು ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ನಂತರ ಈ ಪಾತ್ರದಲ್ಲಿ ಸ್ವರಾ ಭಾಸ್ಕರ್ ಅವರು ಕಾಣಿಸಿಕೊಂಡಿದ್ದಾರೆ.

ಟ್ವಿಂಕಲ್ ಖನ್ನಾ; ಅಕ್ಷಯ್ ಕುಮಾರ್ ಅವರ ಪತ್ನಿಯಾಗಿರುವ ಟ್ವಿಂಕಲ್ ಖನ್ನಾ ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು. ಟ್ವಿಂಕಲ್ ಖನ್ನಾ ಹಾಗೂ ಸಲ್ಮಾನ್ ಖಾನ್ ಜೊತೆಯಾಗಿ ನಟಿಸಿರುವ ಜಬ್ ಪ್ಯಾರ್ ಕಿಸೀಸೆ ಹೋತಾ ಹೈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಈ ಸಿನಿಮಾ 1998 ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ಆದರೆ ಇದಾದ ಮೇಲೆ ಸಲ್ಮಾನ್ ಖಾನ್ ಅವರ ಜೊತೆಗೆ ನಟಿಸಲು ಟ್ವಿಂಕಲ್ ಖನ್ನ ಒಪ್ಪಿಕೊಂಡಿರಲಿಲ್ಲ.

ಸೋನಾಲಿ ಬೇಂದ್ರೆ; ನಟಿ ಸೋನಾಲಿ ಬೇಂದ್ರೆ ಅವರು ಸಲ್ಮಾನ್ ಖಾನ್ ನಟನೆಯ ಹಮ್ ಸಾತ್ ಸಾತ್ ಹೇ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು ಈ ಸಿನಿಮಾ ದೊಡ್ಡಮಟ್ಟದ ಯಶಸ್ಸನ್ನು ಕೂಡ ಪಡೆದುಕೊಂಡಿದ್ದು ಆದರೆ ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ರವರು ಜಿಂಕೆಯ ಪ್ರಕರಣ ದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದಾದ ನಂತರ ಮತ್ತೊಮ್ಮೆ ಸೋನಾಲಿ ಬೇಂದ್ರೆ ಅವರೊಂದಿಗೆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ.

ದೀಪಿಕಾ ಪಡುಕೋಣೆ; ಬಾಲಿವುಡ್ ಚಿತ್ರರಂಗದ ಟಾಪ್ ನಟಿಯಾಗಿರುವ ದೀಪಿಕಾ ಪಡುಕೋಣೆ ರವರು ಕೂಡ ಇದುವರೆಗೂ ಸಲ್ಮಾನ್ ಖಾನ್ ರವರೊಂದಿಗೆ ನಟಿಸಿಲ್ಲ. ಮೂಲಗಳ ಪ್ರಕಾರ ಸಲ್ಮಾನ್ ಖಾನ್ ರವರು ದೀಪಿಕಾ ಪಡುಕೋಣೆ ಅವರನ್ನು ತಾವೇ ಲಾಂಚ್ ಮಾಡುವ ವಿಚಾರವನ್ನು ಮಾಡಿದ್ದರಂತೆ. ಆದರೆ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ರವರ ಓಂ ಶಾಂತಿ ಓಂ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ.

ಜೂಹಿಚಾವ್ಲಾ; ಬಹುಭಾಷೆ ತಾರೆಯಾಗಿರುವ ಜೂಹಿಚಾವ್ಲಾ ರವರು ಕೂಡ ಸಲ್ಮಾನ್ ಖಾನ್ ಅವರ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಆದರೆ ಸಲ್ಮಾನ್ ಖಾನ್ ಜೂಹಿಚಾವ್ಲಾ ನಟನೆಯ ದಿವಾನ ಮಸ್ತಾನ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಹಲವಾರು ಬಾರಿ ಜೂಹಿಚಾವ್ಲಾ ಹಾಗೂ ಸಲ್ಮಾನ್ ಖಾನ್ ರವರನ್ನು ಜೊತೆಯಾಗಿ ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ನಿರ್ದೇಶಕರು ಓಡಾಡಿದರು ಕೂಡ ಇದಕ್ಕೆ ಜೂಹಿಚಾವ್ಲಾ ಒಪ್ಪಿರಲಿಲ್ಲ. ಇದನ್ನು ತಿಳಿದು ಸಲ್ಮಾನ್ ಖಾನ್ ರವರು ಜೂಹಿಚಾವ್ಲಾ ರವರ ಕುರಿತಂತೆ ಕೋಪವನ್ನು ಹೊಂದಿದ್ದರಂತೆ. ಇದಾದ ನಂತರ ಇಬ್ಬರು ಕೂಡ ಎಲ್ಲೂ ಪರಸ್ಪರ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ನಟಿಯರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.