ಏಪ್ರಿಲ್ 29 ರಂದು ಶನಿಯ ಸ್ಥಾನ ಪಲ್ಲಟ, ಏಪ್ರಿಲ್ 30 ರಂದು ಅಮವಾಸೆ, ನೂರು ವರ್ಷಗಳಲ್ಲಿ ಮೊದಲ ಬಾರಿಗೆ ಶುಭ ಘಟನೆ. ಈ ದಿನದ ಮಹತ್ವವೇನು ಗೊತ್ತೇ??

181

ನಮಸ್ಕಾರ ಸ್ನೇಹಿತರೇ ಈ ಬಾರಿಯ ಜ್ಯೋತಿಷ್ಯಶಾಸ್ತ್ರ ಎನ್ನುವುದು ಸಾಕಷ್ಟು ವಿಶೇಷತೆಗಳಿಗೆ ಕಾರಣವಾಗಿದೆ. ಈ ಹೊಸ ಸಂವತ್ಸರದ ರಾಜ ನಾಗಿರುವ ಶನಿ 30 ವರ್ಷಗಳ ನಂತರ ತನ್ನದೇ ರಾಶಿಯಾಗಿರುವ ಕುಂಭ ರಾಶಿಗೆ ಪಾದಾರ್ಪಣೆ ಮಾಡಲಿದ್ದಾರೆ. ಹೊಸ ವರ್ಷದ ಆರಂಭ ಶನಿವಾರದಂದು ಆಗಿರುವುದರಿಂದಾಗಿ ಅಂತೂ ಕೂಡ ಶನಿವಾರದಂದು ಆಗುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಹೀಗಾಗಿ ಶನಿಯ ಪ್ರಭಾವ ತಿಂಗಳಿನ ಅಂತ್ಯದಿಂದ ಪ್ರಾರಂಭವಾಗಿ ಹಲವಾರು ರಾಶಿಯವರ ಮೇಲೆ ಬೀರಲಿದೆ.

ಶನಿಯ ಸಂಯೋಗ; ಏಪ್ರಿಲ್ ತಿಂಗಳಿನಲ್ಲಿ ಐದು ಶನಿವಾರದ ಜೊತೆಗೆ ಶನಿಯ ಪರಿವರ್ತನೆ ಕೂಡ ಆಗಲಿದೆ. ಸಂತನ ರಾಶಿ ಪರಿವರ್ತನೆಯನ್ನು ಮಾಡಿದ ಮಾರನೆಯದಿನವೇ ಶನೇಶ್ವರ ಅಮಾವಾಸ್ಯೆ ಮೂಡಿಬರಲಿದೆ. ನೂರು ವರ್ಷಗಳಲ್ಲಿಯೇ ಇದೇ ಮೊದಲು ಎನ್ನುವುದಾಗಿ ಕೂಡ ಇದು ಮತ್ತೊಂದು ವಿಶೇಷತೆಯನ್ನು ತೋರ್ಪಡಿಸುತ್ತದೆ‌. ಶನಿ ತನ್ನ ನಡೆಯನ್ನು ಬದಲಾಯಿಸುವುದರಿಂದ ಆಗಿ ಹಲವು ರಾಶಿಯವರಿಗೆ ಶುಭಕರ ಲಾಭಗಳು ಪರಿಣಮಿಸಲಿವೆ. ಈ ಸಂದರ್ಭದಲ್ಲಿ ಶನಿಯನ್ನು ಆರಾಧಿಸುವುದರಿಂದಾಗಿ ಸಾಡೇಸಾತಿ ಹಾಗೂ ದೈಯ್ಯಾ ಗಳು ನಿಮ್ಮನ್ನು ಬಿಟ್ಟು ತೊಲಗಲಿವೆ. ಈ ಸಂದರ್ಭದಲ್ಲಿ ಆಂಶಿಕ ಸೂರ್ಯಗ್ರಹಣ ಕೂಡ ನಡೆಯಲಿದೆ ಆದರೆ ಇದು ಭಾರತದಲ್ಲಿ ನಡೆಯುವುದಿಲ್ಲ ಹೀಗಾಗಿ ಇದರಲ್ಲಿ ಯಾವುದೇ ಧಾರ್ಮಿಕ ಮಹತ್ವ ಇರುವುದಿಲ್ಲ.

ಶನಿಯ ರಾಶಿ ಪರಿವರ್ತನೆ; ಇದೇ ಏಪ್ರಿಲ್ 29ರಂದು ಶನಿ ತನ್ನದೇ ರಾಶಿಯಾಗಿರುವ ಕುಂಭರಾಶಿಗೆ 30 ವರ್ಷಗಳ ನಂತರ ಮತ್ತೆ ಕಾಲಿಡಲಿದ್ದಾನೆ. ಶನಿ ಕುಂಭರಾಶಿಗೆ ಕಾಲು ಇಡುವುದರಿಂದಾಗಿ ಕರ್ಕ ಹಾಗೂ ವೃಶ್ಚಿಕ ರಾಶಿಯವರಿಗೆ ದೈಯ್ಯಾ ಇರುತ್ತದೆ. ಧನು ರಾಶಿಯವರ ಸಾಡೇಸಾತಿ ಮುಕ್ತವಾಗಲಿದೆ. ಈ ಸಂದರ್ಭದಲ್ಲಿ ಮಕರ ಕುಂಭ ಮೀನ ರಾಶಿಯವರ ಮೇಲೆ ಶನಿಯ ಸಾಡೇಸಾತೀ ಇರಲಿದೆ.

ಶನೇಶ್ವರಿ ಅಮಾವಾಸ್ಯೆ; ಏಪ್ರಿಲ್ 30ರಂದು ಶನಿವಾರ ಅಮಾವಾಸ್ಯೆ ಇರುವ ಕಾರಣದಿಂದಾಗಿ ಈ ಅಮಾವಾಸ್ಯೆಯನ್ನು ಶನೇಶ್ವರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಆಲದಮರಕ್ಕೆ ಜಲಪ್ರೋಕ್ಷಣೆ ಮಾಡುವುದರಿಂದಾಗಿ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಹಾಗೂ ಅತ್ರಪ್ತ ಪಿತೃಗಳಿಗೆ ಸಮಾಧಾನ ಶಾಂತಿ ಸಿಗುತ್ತದೆ ಎಂಬುದಾಗಿ ಉಲ್ಲೇಖವಿದೆ. ಈ ಸಂದರ್ಭದಲ್ಲಿ ತೀರ್ಥ ಸ್ಥಾನ ಹಾಗೂ ದಾನ ಮಾಡುವುದನ್ನು ಕೂಡ ಮಾಡಬೇಕು ಎನ್ನುವುದಾಗಿ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ವರ್ಷದ ಮೊದಲ ಸೂರ್ಯಗ್ರಹಣ; ಏಪ್ರಿಲ್ 30ರಂದು ವೈಶಾಖ ತಿಂಗಳಿನ ಮೊದಲ ಅಮಾವಾಸ್ಯೆ ಹಾಗೂ ಮೊದಲ ಸೂರ್ಯಗ್ರಹಣ ಕೂಡ ನಡೆಯಲಿದೆ. ಇದು ಕೇವಲ ಆಂಶಿಕ ಸೂರ್ಯಗ್ರಹಣ ಆಗಿರುವ ಕಾರಣದಿಂದಾಗಿ ಹಾಗೂ ಭಾರತದಲ್ಲಿ ಸೂರ್ಯಗ್ರಹಣ ನಡೆಯದೆ ಇರುವ ಕಾರಣದಿಂದಾಗಿ ಅಷ್ಟೊಂದು ಧಾರ್ಮಿಕವಾಗಿ ಮಹತ್ವವನ್ನು ಪಡೆದಿಲ್ಲ. ಇದು ದಕ್ಷಿಣ ಅಮೆರಿಕ ಹಾಗೂ ಶಾಂತ ಮಹಾಸಾಗರ ಮತ್ತು ಅಂಟಾರ್ಟಿಕ ಸಾಗರಗಳಲ್ಲಿ ನಡೆಯುತ್ತಿದೆ. ಹೀಗಾಗಿ ಈ ಸೂರ್ಯ ಗ್ರಹಣ ಪ್ರಭಾವ ಅಲ್ಲಿ ಬೀರಲಿದೆ.

ಶನಿಯ ಆರಾಧನೆ; ಈ ಸಂದರ್ಭದಲ್ಲಿ ಶನಿದೇವನಿಗೆ ಸಾಸಿವೆ ಎಣ್ಣೆಯಿಂದ ಅಭಿಷೇಕ ಮಾಡಬೇಕಾಗಿದೆ. ಹಾಗೂ ಕಪ್ಪುಬಣ್ಣದ ಬಟ್ಟೆಗೆ ಬೊಟ್ಟನ್ನು ಇಟ್ಟು ಶನಿ ದೇವಸ್ಥಾನಕ್ಕೆ ದಾನವನ್ನು ಮಾಡಬೇಕಾಗುತ್ತದೆ. ಆಂಜನೇಯನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಅಲ್ಲಿಯೂ ಕೂಡ ದೀಪ ಹಚ್ಚಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀರಿನಲ್ಲಿ ಕಪ್ಪು ಬೊಟ್ಟನ್ನು ಇಟ್ಟು ಶಿವನಿಗೆ ಅಭಿಷೇಕ ಮಾಡಿ ಪೂಜೆಯನ್ನು ಮಾಡಬೇಕು. ಅಗತ್ಯ ಇರುವವರಿಗೆ ಹಾಗೂ ಬಡವರಿಗೆ ಊಟ ಬಟ್ಟೆ ಛತ್ರಿ ಅಥವಾ ಬೇರೆ ಅಗತ್ಯ ವಸ್ತುಗಳನ್ನು ದಾನ ಮಾಡುವ ಮೂಲಕ ನೀವು ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ.