ಸಕತ್ ಆಗಿ ಬ್ಯಾಟಿಂಗ್ ಮಾಡುತ್ತಿರುವ ದಿನೇಶ್ ಕಾರ್ತಿಕ್ ರವರನ್ನು ಭಾರತ ತಂಡದಿಂದ ದೂರವಿಡಲು ಬಿಸಿಸಿಐ ಬಳಿ ಇರುವ ಕಾರಣವಾದರೂ ಏನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ದಿನೇಶ್ ಕಾರ್ತಿಕ್ ರವರು ಅಸಮಾನ್ಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ತಮ್ಮ ಫಿನಿಶರ್ ಜವಾಬ್ದಾರಿಯ ಮೂಲಕ ದಿನೇಶ್ ಕಾರ್ತಿಕ್ ರವರು ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ಪ್ರಭಾವವನ್ನು ಬೀರಿದ್ದಾರೆ ಎಂದು ಹೇಳಬಹುದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ವಂತಹ ಹಲವಾರು ಪಂದ್ಯಗಳನ್ನು ದಿನೇಶ್ ಕಾರ್ತಿಕ್ ರವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆಲ್ಲಿಸಿದ್ದಾರೆ ಎಂಬುದನ್ನು ಬಾರಿ ನೀವೇ ನೋಡಿದ್ದೀರಿ.

ಈ ಬಾರಿ ಅದ್ಭುತವಾಗಿ ದಿನೇಶ್ ಕಾರ್ತಿಕ್ ರವರು ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿರುವುದು ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ. ಈ ಮೊದಲು ಎಬಿ ಡಿವಿಲಿಯರ್ಸ್ ಅವರು ತಂಡದಲ್ಲಿ ಫಿನಿಶರ್ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಅವರ ಕಾರ್ಯವನ್ನು ನಿರ್ವಹಿಸಬಲ್ಲಂತಹ ಸಮರ್ಥ ಆಟಗಾರ ಯಾರು ಬರಬಹುದು ಎಂಬುದಾಗಿ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈಗ ದಿನೇಶ್ ಕಾರ್ತಿಕ್ ರವರು ತಂಡಕ್ಕೆ ಆಗಮಿಸಿ ಆ ಕಾರ್ಯವನ್ನು ಸಂಪೂರ್ಣ ಪರಿಪಕ್ವವಾಗಿ ನಿಭಾಯಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ಸಂತೋಷದ ವಿಚಾರ. ಈ ಮೂಲಕ ಅವರು ಈ ಬಾರಿಯ t20 ವರ್ಲ್ಡ್ ಕಪ್ ಗೆ ಸರಿಯಾದ ಆಟಗಾರ ಎನ್ನುವುದಾಗಿ ಹಲವಾರು ಲೆಜೆಂಡರಿ ಆಟಗಾರರು ಮತ್ತು ಮಾಜಿ ಕ್ರಿಕೆಟಿಗರು ದಿನೇಶ್ ಕಾರ್ತಿಕ್ ರವರ ಪರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಆದರೆ ಈ ಬಾರಿ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ರವರಿಗೆ ಬಿಸಿಸಿಐ ಪ್ರಕಾರ ತಂಡದಲ್ಲಿ ಅವಕಾಶ ಸಿಗುವುದು ಕಡಿಮೆ ಎನ್ನುವುದಾಗಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಕಾರಣವಾಗಿದೆ. ಇಷ್ಟೊಂದು ಚೆನ್ನಾಗಿ ದಿನೇಶ್ ಕಾರ್ತಿಕ್ ರವರು ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದರು ಕೂಡ ವರ್ಲ್ಡ್ ಕಪ್ ತಂಡಕ್ಕೆ ಹಾಕಿ ಆಗುವುದಕ್ಕೆ ಅವರ ವಯಸ್ಸಿನ ಅಡೆತಡೆ ಎದುರಾಗಬಹುದು ಎನ್ನುವ ಕಾರಣ ಬಲವಾಗಿ ಕೇಳಿ ಬರುತ್ತಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಯುವ ಆಟಗಾರರಿಂದ ತುಂಬಿದೆ. ಹೀಗಾಗಿ ಈಗಾಗಲೇ 36 ವರ್ಷವನ್ನು ಪೂರೈಸಿರುವ ದಿನೇಶ್ ಕಾರ್ತಿಕ್ ರವರಿಗೆ ವರ್ಲ್ಡ್ ಕಪ್ ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ ದಿನೇಶ್ ಕಾರ್ತಿಕ್ ರವರು ವಯಸ್ಸು ಕೇವಲ ನನಗೆ ಸಂಖ್ಯೆಯಷ್ಟೇ ದೇಶಕ್ಕಾಗಿ ಏನಾದರೂ ಸಾಧಿಸುವುದು ನನ್ನ ಗುರಿ ಎಂಬುದಾಗಿ ಈಗಾಗಲೇ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ‌. ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ವನ್ನು ಬಿಸಿಸಿಐ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.