ಆರ್ ಆರ್ ಆರ್ ಗೆದ್ದ ಖುಷಿಯಲ್ಲಿ ರಾಜಮೌಳಿ ಖರೀದಿಸಿದರು ಹೊಸ ಕಾರು ಯಾವ ಮಾಡೆಲ್ ಹಾಗೂ ಈ ಕಾರಿನ ಬೆಲೆ ಎಷ್ಟು ಗೊತ್ತಾ??

19

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ಚಿತ್ರರಂಗದಲ್ಲಿ ಭಾರತೀಯ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಯಾರು ಎಂದು ಹೇಳುವುದಾದರೆ ಕೇಳಿ ಬರುವಂತಹ ಒಂದೇ ಒಂದು ಹೆಸರೆಂದರೆ ಅದು ನಮ್ಮ ಹೆಮ್ಮೆಯ ಕನ್ನಡಿಗ ಹಾಗೂ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಹೆಸರು. ಬಾಹುಬಲಿ ಸರಣಿ ಚಿತ್ರಗಳು ಹಾಗೂ ಈಗ ಮತ್ತು ಆರ್ ಆರ್ ಆರ್ ಸಿನಿಮಾಗಳ ಮೂಲಕ ಇಡೀ ಜಾಗತಿಕ ಚಿತ್ರರಂಗದಲ್ಲಿಯೇ ತನ್ನ ಟ್ರೇಡ್ಮಾರ್ಕ್ ಅನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳುವ ರೀತಿಯಲ್ಲಿ ನಿರ್ದೇಶನದಲ್ಲಿ ಒಂದು ಹೊಸ ಕ್ರಾಂತಿಯನ್ನೇ ಕ್ರಿಯೇಟ್ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ರಾಜಮೌಳಿ ಅವರ ನಿರ್ದೇಶನದ ಸಿನಿಮಾಗಳಲ್ಲಿ ಇರುವಂತಹ ಅದ್ದೂರಿತನ ಯಾವುದೇ ಹಾಲಿವುಡ್ ಸಿನಿಮಾಗಳಲ್ಲಿ ಕೂಡ ಕಾಣಸಿಗುವುದಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಚಾರ. ಅವರಂತಹ ನಿರ್ದೇಶಕ ಭಾರತೀಯ ಚಿತ್ರರಂಗದಲ್ಲಿ ಇರುವ ಕಾರಣದಿಂದಲೇ ಭಾರತೀಯ ಚಿತ್ರರಂಗದ ಲುಕ್ ಹಾಗೂ ಮೇಕಿಂಗ್ ಶೈಲಿ ಎನ್ನುವುದು ಬದಲಾಗಿದ್ದು ಎಂದು ಹೇಳಬಹುದಾಗಿದೆ. ಇಂದು ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಬ್ಬ ನಿರ್ದೇಶಕ ಹಾಗೂ ನಿರ್ಮಾಪಕ ದೊಡ್ಡಮಟ್ಟದಲ್ಲಿ ಸಿನಿಮಾವನ್ನು ನಿರ್ಮಿಸಿ ಅದನ್ನು ಪ್ರಪಂಚದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಕೂಡ ತಲುಪಿಸುವಂತಹ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಅದು ರಾಜಮೌಳಿ ರವರು ಹಾಕಿ ಕೊಟ್ಟ ಬುನಾದಿ ಎಂದರೆ ತಪ್ಪಾಗಲಾರದು.

ಇನ್ನು ಇತ್ತೀಚಿನ ದಿನಗಳಲ್ಲಿ ರಾಜಮೌಳಿಯವರು ಖರೀದಿಸಿರುವ ಹೊಸ ಕಾರ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ವೇಗವಾಗಿ ಹಾಗೂ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಹೌದು ಗೆಳೆಯರೇ ಹಾಗಿದ್ದರೆ ರಾಜಮೌಳಿಯವರು ಆರ್ ಆರ್ ಆರ್ ಚಿತ್ರದ ಯಶಸ್ಸಿನ ನಂತರ ಖರೀದಿಸಿರುವ ಕಾರಿನ ಬ್ರಾಂಡ್ ಯಾವುದು ಹಾಗೂ ಅದರ ಬೆಲೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳುವ ಬನ್ನಿ. ಸುಖಾಸುಮ್ಮನೆ ರಾಜಮೌಳಿಯವರು ಯಾವುದೇ ವಸ್ತುವಿನ ಮೇಲೆ ದುಂದು ವೆಚ್ಚ ಮಾಡುವುದಿಲ್ಲ. ಇನ್ನು ರಾಜಮೌಳಿಯವರು ವೋಲ್ವೊ ಎಕ್ಸ್ ಸಿ 40 ಬ್ರಾಂಡ್ ಕಾರನ್ನು ಬರೋಬ್ಬರಿ 44 ಲಕ್ಷದ 50 ಸಾವಿರ ರೂಪಾಯಿಗೆ ಖರೀದಿಸಿದ್ದಾರೆ. ಸದ್ಯಕ್ಕೆ ರಾಜಮೌಳಿಯವರು ಆರ್ ಆರ್ ಆರ್ ಚಿತ್ರದ ಯಶಸ್ಸನ್ನು ಅನುಭವಿಸುತ್ತಿದ್ದು ಮುಂದಿನ ದಿನಗಳಲ್ಲಿ ಮಹೇಶ್ ಬಾಬು ರವರ ಜೊತೆಗೆ ಜಂಗಲ್ ಅಡ್ವೆಂಚರ್ ಮಾದರಿಯ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರ ಬರೋಬ್ಬರಿ ಎಂಟು ನೂರು ಕೋಟಿ ಬಜೆಟ್ ನಲ್ಲಿ ಮೂಡಿಬರುತ್ತಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.