ಕರೀನಾ ಕಪೂರ್ ರವರಿಗೆ ಮೊದಲ ಶಾಕ್, ಮಲಬಾರ್ ಸಂಸ್ಥೆಗೆ ಶಾಕ್ ನೀಡಲು ಮುಂದಾದ ಸಂಘಟನೆಗಳು. ನಡೆಯುತ್ತಿರುವುದಾದರೂ ಏನು ಗೊತ್ತೇ??

59

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಸೆಲೆಬ್ರಿಟಿಗಳು ಒಂದಲ್ಲ ಒಂದು ಕಾರಣಕ್ಕಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ವಿವಾದಗಳು ಅವರನ್ನು ಬಿಟ್ಟರೂ ಅವರು ವಿವಾದಗಳನ್ನು ಬಿಡುವುದಿಲ್ಲ ಎನ್ನುವಷ್ಟರಮಟ್ಟಿಗೆ ಗಾಸಿಪ್ ಗಳಿಗೆ ಹಚ್ಚಿಕೊಂಡವರು. ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಒಬ್ಬ ಬಾಲಿವುಡ್ ನಟಿಯ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ನಟಿ ಕರೀನಾ ಕಪೂರ್ ಖಾನ್ ಅವರ ಕುರಿತಂತೆ. ಕರೀನಾ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ಇಂದಿಗೂ ಕೂಡ ಬಹು ಬೇಡಿಕೆಯಲ್ಲಿರುವ ನಟಿ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಯುವ ಉದಯೋನ್ಮುಖ ನಟಿಯರು ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಇಷ್ಟೆಲ್ಲಾ ಸ್ಪರ್ಧೆಯ ನಡುವೆ ಕೂಡ ಕರೀನಾ ಕಪೂರ್ ಅವರು ಈ ವಯಸ್ಸಿನಲ್ಲಿ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಟಾಪ್ ನಟರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಸದ್ಯಕ್ಕೆ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅವರ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕರೀನಾ ಕಪೂರ್ ಖಾನ್ ಅವರು ಈಗ ಸದ್ದು ಮಾಡುತ್ತಿರುವುದು ತಮ್ಮ ಸಿನಿಮಾಗಳಿಂದಾಗಿ ಎಲ್ಲಾ ಬದಲಾಗಿ ಜಾಹೀರಾತಿನಿಂದ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಅವರು ಮಾಡಿಕೊಂಡಿರುವ ಎಡವಟ್ಟೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೀವು ಟಿವಿಯಲ್ಲಿ ಕರೀನಾ ಕಪೂರ್ ಅವರು ಮಲಬಾರ್ ಗೋಲ್ಡ್ ಸಂಸ್ಥೆಯ ಜಾಹೀರಾತಿನಲ್ಲಿ ಆಗಾಗ ಕಾಣಿಸಿಕೊಳ್ಳುವುದನ್ನು ನೋಡಿರುತ್ತೇವೆ. ಇತ್ತೀಚಿಗಷ್ಟೇ ಕರೀನಾ ಕಪೂರ್ ರವರು ಮಲಬಾರ್ ಸಂಸ್ಥೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಇಲ್ಲಿ ಹಣೆಯಲ್ಲಿ ಬಿಂದಿ ಅಥವಾ ಕುಂಕುಮವನ್ನು ಇಟ್ಟುಕೊಂಡಿಲ್ಲ ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಪ್ರತಿಯೊಬ್ಬರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಮಲಬಾರ್ ಸಂಸ್ಥೆಯನ್ನು ಈ ವಿಚಾರಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದು ಮಲಬಾರ ಸಂಸ್ಥೆಯ ಚಿನ್ನವನ್ನು ಖರೀದಿಸಬೇಡಿ ಎನ್ನುವುದಾಗಿ ಬಾಯ್ಕಾಟ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಇನ್ನು ಕರೀನಾ ಕಪೂರ್ ಅವರು ಉದ್ದೇಶಪೂರ್ವಕವಾಗಿಯೇ ಹಣೆಯಲ್ಲಿ ಕುಂಕುಮ ಅಥವಾ ಬಿಂದಿಯನ್ನು ಹಾಕಿಕೊಂಡಿಲ್ಲ ಎನ್ನುವುದಾಗಿ ಕೂಡ ಎಲ್ಲಾ ಕಡೆ ಬಿಂಬಿತವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮಲಬಾರ್ ಸಂಸ್ಥೆಯ ಆದಾಯದ ಮೇಲೆ ಪರಿಣಾಮ ಬೀರುವಂತಹ ಸಾಧ್ಯತೆ ಖಂಡಿತ ಇದೆ. ಈ ವಿಚಾರದ ಕುರಿತಂತೆ ಕರೀನಾ ಕಪೂರ್ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಸೈಫ್ ಆಲಿಖಾನ್ ರವರನ್ನು ಮದುವೆಯಾದರು ಕೂಡ ಕರೀನಾ ಕಪೂರ್ ಅವರು ದೊಡ್ಡಮಟ್ಟದಲ್ಲಿ ಟೀಕೆಯನ್ನು ಎದುರಿಸಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.