ಕೇವಲ ಐಪಿಎಲ್ ಪಂದ್ಯಗಳಲ್ಲಿ ಅಂಪೈರ್ಗಳು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಒಂದು ಪಂದ್ಯಕ್ಕೆ ಎಷ್ಟು ಲಕ್ಷ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಎನ್ನುವುದು ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿದೆ. ಹೀಗಾಗಿ ಇಲ್ಲಿ ಎಲ್ಲಾ ವಿಚಾರವೂ ಕೂಡ ಸಾಕಷ್ಟು ಅದ್ದೂರಿಯಾಗಿಯೇ ಇರುತ್ತದೆ. ಈ ಶ್ರೀಮಂತ ಕ್ರಿಕೆಟ್ ಲೀಗ್ ನಿಂದ ಬಿಸಿಸಿಐಗೆ ಹರಿದು ಬರುವ ಹಣದ ವಿಚಾರದಲ್ಲಿ ಕೂಡ ಅದ್ದೂರಿತನ ಇದೆ. ಇನ್ನು ಈ ಬಾರಿ ನಾವು ಮಾತನಾಡಲು ಹೊರಟಿರುವುದು ಕೇವಲ ಐಪಿಎಲ್ ಕುರಿತಂತೆ ಅಲ್ಲ ಬದಲಾಗಿ ಐಪಿಎಲ್ ನಲ್ಲಿ ಕಾರ್ಯನಿರ್ವಹಿಸುವಂತಹ ಅಂಪೈರ್ ಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.
ಐಪಿಎಲ್ ಅನ್ನು ಇಂಟರೆಸ್ಟಿಂಗ್ ಆಗಿ ಮಾಡುವುದು ಕೇವಲ ಆಟಗಾರರು ಮಾತ್ರವಲ್ಲ ಅಂಪೈರ್ ಗಳ ನಿರ್ಧಾರ ಹಾಗೂ ನಿರ್ಣಯಗಳು ಕೂಡ ಐಪಿಎಲ್ನ ಪಂದ್ಯಾಟಗಳನ್ನು ಸಾಕಷ್ಟು ರೋಚಕ ಹಂತವನ್ನು ತಲುಪುವಂತೆ ಮಾಡುತ್ತದೆ ಎಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ಡೆಲ್ಲಿ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ಅಂಪೈರ್ ನೋಬಾಲ್ ನಿರ್ಣಯವನ್ನು ತಪ್ಪಾಗಿ ನೀಡಿದ್ದರಿಂದಾಗಿ ದೊಡ್ಡಮಟ್ಟದ ಹಂಗಾಮವೆ ಸೃಷ್ಟಿಯಾಗಿತ್ತು. ಇಂತಹ ಹಲವಾರು ನಿರ್ಧಾರಗಳು ಐಪಿಎಲ್ನಲ್ಲಿ ನಡೆಯುತ್ತಲೇ ಬರುತ್ತದೆ. ಆಟಗಾರರು ಯಾವುದಾದರೂ ತಪ್ಪು ಮಾಡಿದರೆ ಅವರ ಮೇಲೆ ದಂಡವನ್ನು ವಿಧಿಸಲಾಗುತ್ತದೆ. ಆದರೆ ಅಂಪೈರ್ಗಳು ಇಂತಹ ಯಾವುದೇ ಕಾರ್ಯಗಳನ್ನು ಮಾಡಿದರೆ ಅವರಿಗೆ ಯಾವುದೇ ದಂಡ ಇಲ್ಲ ಎನ್ನುವುದೇ ಅಭಿಮಾನಿಗಳಿಗೆ ನಿರಾಶದಾಯಕ ವಿಚಾರವಾಗಿದೆ.

ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಅಂಪೈರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಅಂಪೈರ್ಗಳು ಕಳಪೆ ಮಟ್ಟದ ಅಂಪೈರಿಂಗ್ ನಿರ್ಧಾರವನ್ನು ನೀಡುತ್ತಿದ್ದಾರೆ ಎನ್ನುವುದಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಕೈಗೊಂಡಿದ್ದಾರೆ. ಅದೇನೇ ಇರಲಿ ಇಂದು ನಾವು ಮಾತನಾಡಲು ಹೊರಟಿರುವುದು ಈ ಅಂಪೈರ್ ಗಳ ಸಂಭಾವನೆ ಕುರಿತಂತೆ. ಐಪಿಎಲ್ ನಲ್ಲಿ ಸಂಭಾವನೆಯನ್ನು ಎರಡು ವಿಧಾನಗಳಾಗಿ ವಿಂಗಡಿಸಲಾಗುತ್ತದೆ. ಮೊದಲನೆಯ ವಿಭಾಗ ಐಸಿಸಿ ಅಂಪೈರ್ ಅಸೋಸಿಯೇಷನ್ ನ ಅಂಪೈರ್ಗಳು ಇವರಿಗೆ ಒಂದು ಪಂದ್ಯಕ್ಕೆ 1.98 ಲಕ್ಷ ರೂಪಾಯಿ ಸಂಭಾವನೆ ಸಿಗಲಿದೆ. ಈ ಅಸೋಸಿಯೇಷನ್ನ ಅಂಪೈರ್ ಗಳಲ್ಲದ ಅಂಪೈರ್ ಗಳಿಗೆ ಪ್ರತಿ ಪಂದ್ಯಕ್ಕೆ 59000 ಸಂಭಾವನೆ ಸಿಗುತ್ತದೆ. ಇಷ್ಟು ಮಾತ್ರವಲ್ಲದೆ ಸ್ಪಾನ್ಸರ್ ಗಳಿಂದಲೂ ಕೂಡ ಪ್ರತಿ ಸೀಸನ್ ಅಂಪೈರ್ ಗಳಿಗೆ 7.3 ಲಕ್ಷ ಹಣವನ್ನು ನೀಡಲಾಗುತ್ತದೆ. ಹೀಗಾಗಿ ಶ್ರೀಮಂತ ಕ್ರಿಕೆಟ್ ಲೀಗ್ ನಲ್ಲಿ ಕೇವಲ ಆಟಗಾರರು ಮಾತ್ರವಲ್ಲದೆ ಅಂಪೈರ್ಗಳು ಕೂಡ ಹಣವನ್ನು ಹೇರಳವಾಗಿ ಹಣವನ್ನು ಸಂಪಾದಿಸಬಹುದಾಗಿದೆ.