ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಮದುವೆಗೆ ಸೆಲೆಬ್ರಿಟಿಗಳು ನೀಡಿರುವ ದುಬಾರಿ ಬೆಲೆಯ ಉಡುಗೊರೆಗಳು ಯಾವುವು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಇದೇ ಏಪ್ರಿಲ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಜೋಡಿಯನ್ನು ಅಭಿಮಾನಿಗಳು ಈಗಾಗಲೇ ರಲಿಯಾ ಎಂದು ಕರೆಯಲು ಆರಂಭಿಸಿದ್ದಾರೆ. ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಗಳು ಯಾವಾಗ ಮದುವೆ ಆಗುತ್ತಾರೆ ಎನ್ನುವುದಾಗಿ ಅಭಿಮಾನಿಗಳು ಸೇರಿದಂತೆ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದರು. ಈಗ ಅವರೆಲ್ಲರಿಗೂ ಕೂಡ ಈ ಮದುವೆ ಸಂತೋಷವನ್ನು ನೀಡಿದೆ ಎಂದರೆ ತಪ್ಪಾಗಲಾರದು.
ಇನ್ನು ಈ ಜೋಡಿ ಮದುವೆಯಾಗುವುದಕ್ಕೂ ಮುನ್ನ ಹಲವಾರು ವಿಚಾರಗಳಿಗಾಗಿ ಸುದ್ದಿಯಾಗಿದ್ದರು. ರಣಬೀರ್ ಕಪೂರ್ ಅವರ ಕುರಿತಂತೆ ಹೇಳುವುದಾದರೆ ಮದುವೆಗೂ ಮುನ್ನ ಹಲವಾರು ನಟಿಯರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಆಲಿಯಾ ಭಟ್ ರವರ ಕುರಿತಂತೆ ಹೇಳುವುದಾದರೆ ಚಿಕ್ಕವಯಸ್ಸಿನಿಂದಲೂ ಕೂಡ ತಮ್ಮ ಕೃಷ್ ರಣಬೀರ್ ಕಪೂರ್ ರವರು ಎಂಬುದಾಗಿ ಹೇಳಿಕೊಂಡು ಬಂದಿದ್ದರು. ಈಗ ಇವರಿಬ್ಬರ ಮದುವೆ ನಡೆದಿದ್ದು ಎಲ್ಲ ಗಾಳಿಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಇನ್ನು ಇವರಿಬ್ಬರ ಮದುವೆಗೆ ಯಾವೆಲ್ಲ ಬಾಲಿವುಡ್ ಸ್ಟಾರ್ ಗಳು ಬಂದು ಯಾವೆಲ್ಲ ದುಬಾರಿ ಗಿಫ್ಟ್ ನೀಡಿದ್ದಾರೆ ಎನ್ನುವುದರ ಕುರಿತಂತೆ ಈಗಾಗಲೇ ಆರಂಭವಾಗಿದೆ. ಹಾಗಾದರೆ ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಹಾಗೂ ಯಾವೆಲ್ಲಾ ಗಿಫ್ಟ್ ಗಳನ್ನು ನೀಡಿದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ. ಈ ಸಾಲಿನಲ್ಲಿ ಮೊದಲಿಗೆ ಕಂಡುಬರುವುದು ರಣಬೀರ್ ಕಪೂರ್ ಅವರ ಎಕ್ಸ್ ಗರ್ಲ್ ಫ್ರೆಂಡ್ ಕತ್ರಿನಾ ಕೈಫ್ ರವರು. ಕತ್ರಿನಾ ಕೈಫ್ ರವರು ಆಲಿಯಾ ಭಟ್ ಅವರಿಗೆ 14.5 ಲಕ್ಷ ರೂಪಾಯಿ ಮೌಲ್ಯದ ಪ್ಲಾಟಿನಮ್ ಬ್ರಾಸ್ಲೈಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

ಇನ್ನು ಬಾಲಿವುಡ್ ಚಿತ್ರರಂಗದ ಟಾಪ್ ನಟಿ ಹಾಗೂ ರಣಬೀರ್ ಕಪೂರ್ ಅವರ ಮತ್ತೊಬ್ಬ ಎಕ್ಸ್ ಗರ್ಲ್ ಫ್ರೆಂಡ್ ಆಗಿರುವ ದೀಪಿಕಾ ಪಡುಕೋಣೆ ಅವರು 15 ಲಕ್ಷ ಮೌಲ್ಯದ ವಾಚನ್ನು ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರಂತೆ. ಇದು ಕೂಡ ದೊಡ್ಡಮಟ್ಟದಲ್ಲಿ ಈಗ ಸುದ್ದಿಯಾಗುತ್ತದೆ. ಇಷ್ಟು ಮಾತ್ರವಲ್ಲದೆ ಆಲಿಯಾ ಭಟ್ ರವರ ಮೊದಲ ಸಿನಿಮಾದ ಸಹನಟ ಆಗಿರುವ ಸಿದ್ಧಾರ್ಥ ಮಲ್ಹೊತ್ರ ಮೂರು ಲಕ್ಷದ ಮೌಲ್ಯದ ಹ್ಯಾಂಡ್ ಬ್ಯಾಗನ್ನು ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರಂತೆ. ಈ ಸಾಲಿಗೆ ಸ್ಟೂಡೆಂಟ್ ಆಫ್ ದ ಇಯರ್ ಚಿತ್ರದ ಮತ್ತೊಬ್ಬ ಸಹ ನಟ ವರುಣ್ ಧವನ್ ರವರು ಮೊದಲಿನಿಂದಲೂ ಕೂಡ ಆಲಿಯಾ ಭಟ್ ಅವರ ಜೊತೆಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಅವರು ಮದುವೆಗೆ 4 ಲಕ್ಷ ಮೌಲ್ಯದ ಸ್ಲಿಪ್ಪರ್ ಅನ್ನು ನೀಡಿದ್ದಾರಂತೆ.
ಇನ್ನು ರಣಬೀರ್ ಕಪೂರ್ ಅವರ ಸಹೋದರಿ ಆಗಿರುವ ಕರೀನಾ ಕಪೂರ್ ಅವರು 3 ಲಕ್ಷ ಮೌಲ್ಯದ ಡೈಮಂಡ್ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಲಿವುಡ್ನಲ್ಲಿ ಬ್ಯುಸಿ ಆಗಿರುವ ಬಹು ಬೇಡಿಕೆ ನಟಿ ಪ್ರಿಯಾಂಕ ಚೋಪ್ರಾ 9 ಲಕ್ಷ ಮೌಲ್ಯದ ಡೈಮಂಡ್ ನೆಕ್ಲೆಸ್ ಅನ್ನು ಆಲಿಯಾ ಭಟ್ ಅವರಿಗೆ ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರಂತೆ. ರಣಬೀರ್ ಕಪೂರ್ ಅವರ ತಾಯಿ ನೀತು ಸಿಂಗ್ ಮಗ ಹಾಗೂ ಸೊಸೆಗೆ ದುಬಾರಿ ಬೆಲೆಯ ಐಶರಾಮಿ ಫ್ಲ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.

ಹೀಗೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಸಿಂಪಲಾಗಿ ಮದುವೆಯಾಗಿದ್ದರು ಕೂಡ ಅವರ ಮದುವೆಗೆ ಸೆಲೆಬ್ರಿಟಿಗಳಿಂದ ದೊಡ್ಡದೊಡ್ಡ ದುಬಾರಿ ಬೆಲೆಯ ಉಡುಗೊರೆಗಳು ಹರಿದುಬಂದಿವೆ ಎಂದು ಹೇಳಬಹುದಾಗಿದೆ. ಹಲವಾರು ವರ್ಷಗಳಿಂದ ಇವರ ಮದುವೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೊಂದು ಸಂತೋಷದ ಸಂಭ್ರಮದ ವಾತಾವರಣ ವಾಗಿದ್ದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರು ನೂರುಕಾಲ ಜೊತೆಯಾಗಿ ಬಾಳಲಿ ಎಂಬುದಾಗಿ ಆಶಿಸೋಣ.