ಅಂದು 2020 ರಲ್ಲಿ ವಿರಾಟ್ ಜೊತೆ ಕಣ್ಣಿನಲ್ಲೇ ಕಿರಿಕ್ ನಡೆದಾದ ಸೂರ್ಯ ಮನಸಿನಲ್ಲಿ ಮೂಡಿ ಬಂದದ್ದು ಏನಂತೆ ಗೊತ್ತೇ?? ಸೂರ್ಯ ಇದೀಗ ಹೇಳಿದ್ದೇನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಮೈದಾನದಲ್ಲಿ ಸ್ನೇಹ ಹಾಗೂ ಸ್ಫೋರ್ಟ್ಸ್ ಸ್ಪಿರಿಟ್ ಎಷ್ಟು ಕಂಡುಬರುತ್ತದೆಯೋ ಅಷ್ಟೇ ಮಟ್ಟದಲ್ಲಿ ಸ್ಲೆಡ್ಜಿಂಗ್ ಕೂಡ ಕಂಡುಬರುತ್ತದೆ. ಇಂದು ಅದೇ ಸ್ಲೆಡ್ಜಿಂಗ್ ಕುರಿತಂತೆ ವಿವರವಾಗಿ ಮಾತನಾಡಲು ಹೊರಟಿದ್ದೇವೆ. ನಾವು ಮಾತನಾಡಲು ಹೊರಟಿರುವುದು ಸೂರ್ಯಕುಮಾರ್ ಯಾದವ ಹಾಗೂ ವಿರಾಟ್ ಕೊಹ್ಲಿ ರವರ ನಡುವೆ ನಡೆದಂತಹ ಸ್ಲೆಡ್ಜಿಂಗ್ ಕುರಿತಂತೆ. 2020 ರಲ್ಲಿ ನಡೆದಂತಹ ಈ ಘಟನೆ ಎಲ್ಲರಿಗೂ ಕೂಡ ಖಂಡಿತ ನೆನಪಿದ್ದೇ ಇರುತ್ತದೆ. ಸೂರ್ಯ ಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದರು.

ಮುಂಬೈ ಇಂಡಿಯನ್ಸ್ ಆಗು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಣ ಪಂದ್ಯದಲ್ಲಿ ಈ ಘಟನೆಗೆ ಎಲ್ಲರೂ ಕೂಡ ಸಾಕ್ಷಿಯಾಗಿದ್ದರು. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ರವರು ಕ್ರೀಸ್ ನಲ್ಲಿ ನಿಂತುಕೊಂಡಿದ್ದರು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ರವರು ಸೂರ್ಯಕುಮಾರ್ ಯಾದವ್ ಅವರನ್ನೇ ದಿಟ್ಟಿಸುತ್ತಾ ಬರುತ್ತಿದ್ದರು. ಸೂರ್ಯ ಕುಮಾರ್ ಯಾದವ್ ರವರು ಕೂಡ ಅಂದಿನ ಭಾರತ ತಂಡದ ಕಪ್ತಾನನಾಗಿ ರುವ ವಿರಾಟ್ ಕೊಹ್ಲಿ ರವರನ್ನು ಗುರಾಯಿಸು ವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆ ದಿನಗಳಲ್ಲಿ ಈ ಕುರಿತಂತೆ ಪರ-ವಿರೋಧ ಚರ್ಚೆಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆದಿದ್ದವು. ಆದರೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಸೂರ್ಯಕುಮಾರ್ ಯಾದವ್ ರವರು ಈ ಕುರಿತಂತೆ ನಿಜವಾದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ರವರು 43 ಎಸೆತಗಳಲ್ಲಿ 73ರಂದು ಗಳನ್ನು ಬಾರಿಸಿ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ರವರು ಸೂರ್ಯಕುಮಾರ್ ಯಾದವ್ ರವರತ್ತ ಹೆಜ್ಜೆ ಹಾಕುತ್ತಿದ್ದಾಗ ನಿಜವಾಗಿ ಹೇಳಬೇಕೆಂದರೆ ಅವರ ಮನಸ್ಸಿನಲ್ಲಿ ಭ’ಯ ಹೆಚ್ಚಾಗಿತ್ತಂತೆ. ಆದರೆ ಅದನ್ನು ತೋರಿಸಿಕೊಳ್ಳದೆ ಸೂರ್ಯಕುಮಾರ್ ಯಾದವ್ ಅವರು ದೃಢವಾಗಿ ನಿಂತು ಕೊಂಡಿದ್ದರು ಹಾಗೂ ಏಕಾಗ್ರತೆಯನ್ನು ಕಳೆದುಕೊಂಡಿರಲಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಹಾಗೂ ಬಾಸ್ ಒಂದು ಮಾತನ್ನು ಕೂಡ ಹೇಳಬೇಡ, ಅದು ಏನೇ ಆಗಿರಲಿ ಎಂದು ಮನಸಿನಲ್ಲಿ ಬೇಡಿಕೊಂಡಿದ್ದೆ ಎಂದಿದ್ದಾರೆ. 2020 ರಲ್ಲಿ ಇದನ್ನು ನೋಡಿದಾಗ ನಿಮಗೆ ಏನು ಅನಿಸಿತ್ತು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.