ಸಿನೆಮಾಗಳಲ್ಲಿ ತೋರಿಸುವ ನಾಗವಲ್ಲಿ ಯಾರು ಗೊತ್ತೇ? ಅವಳ ಆತ್ಮ ಎಲ್ಲಿದೆ? ಸಿನಿಮಾದಲ್ಲಿ ತೋರಿಸಿರುವ 10 % ಮಾತ್ರ ಅಸಲಿ, ನಿಜ ಕಥೆ ಹೇಗಿದೆ ಗೊತ್ತೇ??

34,600

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಪ್ತಮಿತ್ರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲೆ ಬರೆದಂತಹ ಸಿನಿಮಾ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಈ ಕುರಿತಂತೆ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಈ ನಾಗವಲ್ಲಿ ಕಥೆ ನಿಜವಾದ ಕಥೆಯಾಗಿದ್ದು ಇದು ಎಲ್ಲಿ ನಡೆದಿರುವುದು ಹಾಗೂ ಆ ರಾಜ ಯಾರು ಎಲ್ಲಾ ವಿಚಾರಗಳನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಕೇರಳದ ಅಲೆಪ್ಪಿ ಅನ್ನುವ ಜಿಲ್ಲೆಯಲ್ಲಿ ಒಂದು ಭವ್ಯವಾದ ಭವನವಿದೆ. ಅಲ್ಲಿನ ಟ್ರಾವೆಂಕೂರು ಪ್ರಾಂತ್ಯದ ಒಬ್ಬ ರಾಜ ಇದ್ದ. ಬ್ರಿಟಿಷರ ನೆರಳಿನಲ್ಲಿ ಕೂಡ ಪ್ರಾಂತ್ಯವನ್ನು ಆತ ಕಂದಾಯವನ್ನು ಕಟ್ಟಿಕೊಂಡು ತಾನೇ ಆಳ್ವಿಕೆ ನಡೆಸುತ್ತಿದ್ದ. ಇತಿಹಾಸದ ಪ್ರಕಾರ ಆತ ತುಂಬಾ ಕ್ರೂ’ರಿ ಆಗಿದ್ದನಂತೆ. ಆತ ತನ್ನ ಅರಮನೆಯಲ್ಲಿ ಕೆಳಗಿನ ಕೋಣೆಗಳನ್ನು ತನ್ನ ಪತ್ನಿ ಹಾಗೂ ಕುಟುಂಬಸ್ಥರಿಗೆ ನೀಡಿದ್ದ. ಮೇಲಿನ ಅಂತಸ್ತಿನಲ್ಲಿ ತಾನು ಇರುತ್ತಿದ್ದ. ಹಾಗೂ ಅಕ್ಕಪಕ್ಕದಲ್ಲಿ ಕೆಲಸ ಮಾಡುವವರಿಗೆ ಕೂಡ ಕೋಣೆಗಳನ್ನು ನಿರ್ಮಿಸಿಕೊಟ್ಟಿದ್ದ. ಇನ್ನು ತನ್ನ ಕಣ್ಣಳತೆ ದೂರದಲ್ಲಿ ತಾನು ಇಟ್ಟುಕೊಂಡಿದ್ದ ಮಹಿಳೆಯರಿಗಾಗಿ ಕೂಡ ಮನೆಯನ್ನು ಕಟ್ಟಿಸಿ ಕೊಟ್ಟಿದ್ದ. ಹಾಗಾಗಿ ಅಲ್ಲಿ ಸುಂದರವಾದ ಮಹಿಳೆಯರನ್ನು ಅಪಹರಿಸಿ ತರಿಸುತ್ತಿದ್ದ ಇಷ್ಟು ಮಾತ್ರವಲ್ಲದೆ ನಾಟ್ಯ ಮಾಡುವವರನ್ನು ಕೂಡ ಅಲ್ಲಿ ಕರೆಸಿ ನೃತ್ಯ ಮಾಡಿಸಿ ಅವರಿಗೆ ಬಹುಮಾನ ನೀಡಿ ಕಳಿಸುತ್ತಿದ್ದ.

ಇದೇ ಸಂದರ್ಭದಲ್ಲಿ ಆತನ ಅಕ್ಕ ಹಾಗೂ ಭಾವ ಎಲ್ಲವನ್ನು ಕಳೆದುಕೊಂಡು ಆತನ ಆಶ್ರಯವನ್ನು ಬೇಡಿ ಬಂದಿದ್ದರು. ಆ ರಾಜ ಕೂಡ ಅಕ್ಕನನ್ನು ತಮ್ಮ ಮನೆಯಲ್ಲೇ ಇರಲು ಅವಕಾಶ ನೀಡುತ್ತಾನೆ. ರಾಜನ ರಾಜ ಭೋಗವನ್ನು ನೋಡಿ ಆಸೆಪಟ್ಟ ಅಕ್ಕ ನಮಗೂ ಕೂಡ ಸ್ವಲ್ಪಮಟ್ಟಕ್ಕೆ ಜಾಗವನ್ನು ನೀನು ನಾವು ಕೂಡ ಬದುಕಿಕೊಳ್ಳುತ್ತೇವೆ ಎಂಬುದಾಗಿ ಹೇಳಿದಾಗ ರಾಜ ಅದಕ್ಕೆ ಒಪ್ಪಿ ದೂರದಲ್ಲಿರುವ ಒಂದು ದೊಡ್ಡ ಮನೆ ಸೇರಿದಂತೆ 1000 ಎಕರೆ ಇರುವ ಭೂಮಿಯನ್ನು ಅಕ್ಕನಿಗೆ ನೀಡುತ್ತಾನೆ ಆದರೆ ಯಾವುದೇ ಹಣವನ್ನು ಆಕೆಗೆ ನೀಡುವುದಿಲ್ಲ. ಹಣವಿಲ್ಲದೆ ಹೇಗೆ ಬದುಕಲು ಸಾಧ್ಯ ಎಂಬುದಾಗಿ ಅಕ್ಕ ಮತ್ತು ಆಕೆಯ ಮಕ್ಕಳು ರಾಜನ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.

ಇದಾದ ನಂತರ ಆ ರಾಜನಿಗೆ ವಯಸ್ಸಾಗುತ್ತ ಹೋಗುತ್ತದೆ. ಆತನಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳು ಇರುತ್ತಾರೆ. ಗಂಡುಮಗ ಬೇರೆಯದೇ ಅರಮನೆಯಲ್ಲಿ ಎಸ್ಟೇಟ್ ಹಾಗೂ ವ್ಯವಹಾರಗಳನ್ನು ನೋಡಿಕೊಂಡಿರುತ್ತಾನೆ. ಹೆಣ್ಣುಮಗಳಿಗೆ ಮದುವೆಯಾಗಿರುತ್ತದೆ. ಹೀಗಾಗಿ ರಾಜ ವಯಸ್ಸಾಗುತ್ತ ಬಂದಂತೆ ತನ್ನ ಅಧಿಕಾರಿಗಳನ್ನು ಕರೆದು ತನ್ನ ಆಸ್ತಿಯನ್ನು ತನ್ನ ಗಂಡು ಹಾಗೂ ಹೆಣ್ಣು ಮಗಳಿಗೆ ಪಾಲು ಮಾಡಿಕೊಡುತ್ತಾನೆ. ಈ ಸಂದರ್ಭದಲ್ಲಿ ರಾಜನ ಆಸ್ತಿಯಲ್ಲಿ ತನಗೂ ಕೂಡ ಪಾಲಿಸಬಹುದು ಎನ್ನುವುದಾಗಿ ಅಂದುಕೊಂಡಿದ್ದಳು. ಆದರೆ ಅದರಲ್ಲಿ ಅವಳಿಗೆ ಚಿಕ್ಕಾಸು ಕೂಡ ಸಿಗುವುದಿಲ್ಲ. ಇದಕ್ಕಾಗಿ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂದು ರಾಜನ ಹೆಂಡತಿಗೆ ಸ್ಲೋ ಪಾಯಿ’ಸನ್ ಹಾಕಿ ಮೂರು ತಿಂಗಳಿಗೆ ಅನಾರೋಗ್ಯ ಬಂದು ಮರಣ ಹೊಂದುವಂತೆ ಮಾಡುತ್ತಾಳೆ.

ಈಗ ಒಬ್ಬಂಟಿಯಾದ ರಾಜನಿಗೆ ಕೆಲಸದ ಕೂಲಿ ಆಳಿನ ಮಗಳನ್ನು ನೋಡಿಕೊಳ್ಳಲು ನೇಮಿಸ ಲಾಗುತ್ತದೆ. ಒಂದು ದಿನ ರಾಜನ ಚಿತ್ರವನ್ನು ಬಿಡಿಸಲು ಒಬ್ಬ ಕಲಾಕಾರ ಅರಮನೆಗೆ ಆಗಮಿಸುತ್ತಾನೆ. ರಾಜ ಆತನ ಬಳಿ ತನ್ನ ಚಿತ್ರ ಸೇರಿದಂತೆ ತನ್ನ ಸೇವಕನ ಮಗಳ ಚಿತ್ರವನ್ನು ಕೂಡ ಬಿಡಿಸಲು ಹೇಳುತ್ತಾನೆ. ಆ ಕಲಾಕಾರ ರಾಜನ ಚಿತ್ರವನ್ನು ಎರಡೇ ದಿನದಲ್ಲಿ ಮುಗಿಸುತ್ತಾನೆ ಆದರೆ ಆ ಕೆಲಸದ ಹುಡುಗಿಯ ಚಿತ್ರವನ್ನು ಬಿಡಿಸಲು ಏಳುದಿನಗಳು ಆದರೂ ಕೂಡ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ನಂತರ 10 ನೇ ದಿನಕ್ಕೆ ಆಕೆಯ ಚಿತ್ರವನ್ನು ಪೂರ್ಣಗೊಳಿಸಿ ರಾಜನಿಗೆ ನೀಡುತ್ತಾನೆ. ಅದರಲ್ಲಿ ಆಕೆ ಆಭರಣದಿಂದ ಶೋಭಿತೆ ಯಾಗಿ ಸುಂದರವಾಗಿ ಕಾಣುತ್ತಿದ್ದಳು. ನಾಗರಾಜ ತನ್ನ ಹೆಂಡತಿಯ ರೇಷ್ಮೆಸೀರೆ ಹಾಗೂ ಚಿನ್ನಾಭರಣಗಳನ್ನು ಆಕೆಗೆ ನೀಡಿ ತೊಟ್ಟುಕೊಳ್ಳುವಂತೆ ಹೇಳುತ್ತಾನೆ. ಅದನ್ನು ತೊಟ್ಟುಕೊಂಡ ಆಕೆ ಚೆನ್ನಾಗಿ ಕಾಣಿಸುತ್ತಾಳೆ. ನಾಗರಾಜನಿಗೆ ಆ ಹುಡುಗಿಯ ಮೇಲೆ ಪ್ರೀತಿ ಉಂಟಾಗಿ ಮದುವೆ ಆಗುವ ಆಸೆ ಉಂಟಾಗುತ್ತದೆ.

ಇದೇ ಸಂದರ್ಭದಲ್ಲಿ ಆಕೆ ಕೂಡ ತನ್ನ ತಮ್ಮನನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ನೆಪವೊಡ್ಡಿ ಅದೇ ಅರಮನೆಯಲ್ಲಿ ಬಂದು ಜಾಂಡಾ ಊರುತ್ತಾಳೆ. ರಾಜನ ಹಾಗೂ ಆ ಹುಡುಗಿಯ ಪ್ರೇಮ ಪ್ರಕರಣದ ಕುರಿತಂತೆ ಕೂಡ ಆಕೆಗೆ ತಿಳಿದುಬರುತ್ತದೆ. ಹೀಗಾಗಿ ವಿಷಯ ಕೈ ಜಾರುವ ಮುನ್ನವೇ ರಾಜನನ್ನು ಹಾಗು ಆ ಹುಡುಗಿಯನ್ನು ಇಬ್ಬರನ್ನು ಕೂಡ ಅಕ್ಕ ಹಾಗೂ ಆಕೆ ಗಂಡ ಮತ್ತು ಮಕ್ಕಳು ಮುಗಿಸಿಬಿಡುತ್ತಾರೆ. ಹಾಗೂ ಚಿನ್ನಾಭರಣ ಸೇರಿದಂತೆ ಆಸ್ತಿ ಪತ್ರಗಳನ್ನು ತೆಗೆದುಕೊಂಡು ಓಡಿಹೋಗುತ್ತಾರೆ. ಊರಿನಲ್ಲಿ ಇವರಿಬ್ಬರ ಮರಣದ ಸುದ್ದಿ ಬೇರೆ ರೂಪವನ್ನು ಪಡೆದುಕೊಳ್ಳುತ್ತದೆ. ರಾಜನ ಮಗ ಅರಮನೆಯಲ್ಲಿ ನೋಡಿಕೊಳ್ಳಲು ಒಬ್ಬ ಕೂಲಿ ಅಳನ್ನು ನೇಮಿಸಿದ್ದ. ಆದ ಅಮಾವಾಸ್ಯೆ ಸಂದರ್ಭದಲ್ಲಿ ಅರಮನೆಯಿಂದ ವಿಚಿತ್ರವಾದ ಸದ್ದುಗಳು ಕೇಳಿ ಬರುತ್ತವೆ ಎಂಬುದಾಗಿ ಇನ್ನುಮುಂದೆ ನಾನು ಕೆಲಸ ಮಾಡುವುದಿಲ್ಲ ಎಂದು ಓಡಿಹೋಗುತ್ತಾನೆ.

ನಂತರ ಒಬ್ಬ ಮುದುಕನನ್ನು ಕೂಡ ಅಲ್ಲಿ ಕಾವಲಿಗಿಟ್ಟ ಆದರೆ ಆತನಿಗೆ ಕೂಡದೆ ಸದ್ದು ಹಾಗು ವಿಚಿತ್ರವಾದ ಅನುಭವಗಳಾದವು. ನಂತರ ರಾಜನ ಅಕ್ಕ ಮತ್ತೆ ಅದೇ ಮನೆಗೆ ಬಂದು ಆ ಮನೆಯನ್ನು ಅಲಂಕರಿಸಿ ಮಾಡರ್ನ್ ಆಗುವಂತೆ ಮಾಡುತ್ತಾಳೆ. ಆದರೆ ಮತ್ತೆ ಅಮಾವಾಸ್ಯೆ ಬಂದಾಗ ಆ ಕೆಲಸದ ಹುಡುಗಿಯ ಆತ್ಮ ಅವಳ ಮಗಳ ಮೇಲೆ ಬಂದು ಆಕೆ ತನ್ನ ತಾಯಿಯನ್ನು ಮುಗಿಸಿಬಿಡುತ್ತಾಳೆ. ಕೂಡಲೇ ಅವಳ ತಂದೆ ಹಾಗೂ ಸಹೋದರ ಆಕೆ ಮನೆ ದೇವ ಬಿಡಿಸಿ ಅವಳನ್ನು ಕರೆದುಕೊಂಡು ಓಡಿ ಹೋಗುತ್ತಾರೆ. ಅದಾದ ನಂತರ ಆ ಮನೆಯನ್ನು ರಾಜನ ಮಗ ಚೆನ್ನಾಗಿ ನೋಡಿಕೊಳ್ಳುತ್ತಾನೆ ಆದರೆ ಅಲ್ಲಿ ಯಾರೂ ಕೂಡ ನೆಲೆಸಲು ಇಂದಿಗೂ ಹೋಗುವುದಿಲ್ಲ.

ಇಂದಿಗೂ ಕೂಡ ಅಲ್ಲಿ ರಾತ್ರಿಯಾದರೆ ಜನರು ಅರಮನೆಯ ಸುತ್ತಮುತ್ತಲ ಓಡಾಡುವುದಕ್ಕೆ ಹೆದರಿಕೊಳ್ಳುತ್ತಾರೆ. ಸಿನಿಮಾ ಮಂದಿ ಈ ಕತೆಯನ್ನು ಕೊಂಚಮಟ್ಟಿಗೆ ಬದಲಾವಣೆ ಮಾಡಿ ಅವರಿಗೆ ಬೇಕಾದ ಹೆಸರನ್ನು ಇಟ್ಟುಕೊಂಡು ಚಿತ್ರವನ್ನು ನಿರ್ಮಿಸಿದ್ದಾರೆ. ಆದರೆ ಇಂದಿಗೂ ಕೂಡ ಟ್ರಾವಂಕೂರಿನ ರಾಜಮನೆತನದವರು ಕೆಲಸದವಳ ಹೆಸರನ್ನಾಗಲಿ ರಾಜನ ಹೆಸರನ್ನಾಗಲಿ ಎಲ್ಲೂ ಕೂಡ ರಿವಿಲ್ ಮಾಡಿಲ್ಲ. ಇದು ನಾಗವಲ್ಲಿ ಅಥವಾ ಚಂದ್ರಮುಖಿಯ ನಿಜವಾದ ಕಥೆ ಆಗಿದೆ. ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನು ನಮ್ಮೊಂದಿಗೆ ಹಂಚಿಕೊಳ್ಳಿ.