ಭಾರತ ಕ್ರಿಕೆಟ್ ತಂಡದ ಬಗ್ಗೆ ಕಳವಳ ವ್ಯಕ್ತ ಪಡಿಸಿ ಪರೋಕ್ಷವಾಗಿ ಜಹೀರ್ ಖಾನ್ ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಜಹೀರ್ ಖಾನ್ ಭಾರತ ಕಂಡ ಶ್ರೇಷ್ಠ ವೇಗದ ಬೌಲರ್.ಟೀಮ್ ಇಂಡಿಯಾಕ್ಕೆ 2000ರಲ್ಲಿ ಆಗಮಿಸಿದ ಜಹೀರ್, 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅದಲ್ಲದೇ ಹೊರದೇಶಗಳಲ್ಲಿ ಟೀಂ ಇಂಡಿಯಾ ಹಲವಾರು ಸರಣಿ ಗೆಲ್ಲುವಲ್ಲಿ ಸಹ ಮಹತ್ತರ ಪಾತ್ರವಹಿಸಿದ್ದರು. ಮುಂಬೈ ನ ಈ ವೇಗಿ ಐಪಿಎಲ್ ನಲ್ಲಿಯೂ ಸಹ ಪರಾಕ್ರಮ ತೋರಿದ್ದು, ಹಲವಾರು ವರ್ಷಗಳ ಕಾಲ ವಿವಿಧ ಐಪಿಎಲ್ ಫ್ರಾಂಚೈಸಿಗಳಿಗೆ ಆಡಿದ್ದಾರೆ.

ಕೆಲವು ಸೀಸನ್ ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಸಹ ಕರ್ತವ್ಯ ನಿಭಾಯಿಸಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಮಾತನಾಡಿದ ಜಹೀರ್ ಖಾನ್ , ಭಾರತ ತಂಡದ ಭವಿಷ್ಯದ ಬಗ್ಗೆ ಮಾತನಾಡುತ್ತಾ ಕೆಲವು ಮಹತ್ವದ ಸಂಗತಿಗಳನ್ನು ತಿಳಿಸಿದ್ದಾರೆ. ಬನ್ನಿ ಆ ಸಂಗತಿಗಳು ಯಾವುವು ಎಂದು ತಿಳಿಯೋಣ.

ಜಹೀರ್ ಖಾನ್ ಟೀಮ್ ಇಂಡಿಯಾಕ್ಕೆ ಆಗಮಿಸಿದ ಸಂದರ್ಭದಲ್ಲಿ ತಂಡದ ನಾಯಕರಾಗಿದ್ದವರು ಸೌರವ್ ಗಂಗೂಲಿ. ಜಹೀರ್ ಖಾನ್ ಪ್ರಕಾರ ಟೀಂ ಇಂಡಿಯಾ ಪರ ಕ್ರಿಕೆಟ್ ವೃತ್ತಿ ಬದುಕನ್ನು ಆರಂಭಿಸಲು ಸೌರವ್ ಗಂಗೂಲಿ ಥರದ ನಾಯಕನಿರಬೇಕಂತೆ. ಹೊಸಬರನ್ನು ಗುರುತಿಸಿ, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಲ್ಪಿಸಿ, ಅವರಿಂದ ಉತ್ತಮ ಆಟ ತೆಗೆಸುವಲ್ಲಿ ಸೌರವ್ ನಿಪುಣರು. ಹಾಗಾಗಿ ವೃತ್ತಿ ಜೀವನದ ಆರಂಭಕ್ಕೆ ಸೌರವ್ ಗಂಗೂಲಿಯಂತಹ ನಾಯಕರ ಅವಶ್ಯಕತೆ ಇದೆ.

ಆದರೇ ಒಂದು ಭಾರಿ ನೀವು ದೇಶಕ್ಕೆಂದು ಪಾದಾರ್ಪಣೆ ಮಾಡಿದ ನಂತರ ವೃತ್ತಿ ಬದುಕಿನಲ್ಲಿ ಹಲವಾರು ಏರಿಳೀತಗಳು ಸಂಭವಿಸುತ್ತವೆ. ಅಂತಹ ಸಮಯದಲ್ಲಿ ವೃತ್ತಿ ಬದುಕಿಗೆ ರೂಪ ನೀಡಲು ಮಹೇಂದ್ರ ಸಿಂಗ್ ಧೋನಿಯಂತಹ ನಾಯಕರು ಇರಬೇಕು. ಹಾಗಾದಾಗ ಮಾತ್ರ ಕ್ರಿಕೇಟಿಗರ ವೃತ್ತಿ ಜೀವನ ಉತ್ತಮವಾಗುತ್ತದೆ ಎಂದು ಹೇಳಿದ್ದಾರೆ ಎಂದು ಪರೋಕ್ಷವಾಗಿ ನಾಯಕರನ್ನು ಪ್ರಶ್ನಿಸುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ