ತಮ್ಮ ಪುಟ್ಟ ಮಗಳಿಗೆ ವಿಶೇಷವಾದ ಹೆಸರಿಟ್ಟು ಘೋಷಣೆ ಮಾಡಿದ ಪ್ರಿಯಾಂಕಾ ಚೋಪ್ರಾ. ಹೆಸರೇನು ಗೊತ್ತೇ?

41

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತೀಯ ಚಿತ್ರರಂಗದ ಟಾಪ್ ನಟಿಯಾಗಿರುವ ಪ್ರಿಯಾಂಕ ಚೋಪ್ರಾ ರವರು ಕೆಲವು ತಿಂಗಳುಗಳ ಹಿಂದಷ್ಟೇ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ತಾಯಿಯಾಗಿದ್ದರು. ಈ ಕುರಿತಂತೆ ನಿಕ್ ಜೋನಸ್ ಹಾಗೂ ಪ್ರಿಯಾಂಕ ಚೋಪ್ರಾ ದಂಪತಿಗಳು ಇಬ್ಬರು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಮಗುವಿಗಾಗಿ ಲಾಸ್ ಏಂಜಲೀಸ್ ನಲ್ಲಿ ಪ್ರಕೃತಿಯ ನಡುವೆ ಇದ್ದಂತಹ ಅದ್ದೂರಿ ಮನೆಯನ್ನು 249 ಕೋಟಿ ರೂಪಾಯಿಗೆ ಖರೀದಿ ಕೂಡ ಮಾಡಿದ್ದರು.

ವಿದೇಶದಲ್ಲಿ ನೆಲೆಸಿದ್ದರು ಕೂಡ ತಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರಿಯಾಂಕ ಚೋಪ್ರಾ ರವರು ಯಾವತ್ತು ಬಿಟ್ಟು ಕೊಟ್ಟಿಲ್ಲ. ಇನ್ನು ಮಗು ಜನಿಸಿ ಇಷ್ಟು ಕಾಲವಾದರೂ ಕೂಡ ಇದುವರೆಗೂ ದಂಪತಿಗಳು ಕೂಡ ಮಗುವಿನ ಫೋಟೋವನ್ನು ಹೊರಗೆ ಬಿಡುಗಡೆ ಮಾಡಿಲ್ಲ. ತಮ್ಮ ಖಾಸಗಿ ಜೀವನಕ್ಕೆ ಸ್ವಾ’ತಂತ್ರ್ಯ ನೀಡಿ ಎನ್ನುವುದಾಗಿ ಮಾಧ್ಯಮಗಳ ಬಳಿ ಕೇಳಿ ಕೊಂಡಿದ್ದಾರೆ. ಇನ್ನು ಪ್ರಿಯಾಂಕಾ ಚೋಪ್ರಾ ರವರು ತಮ್ಮ ಮಗಳಿಗೆ ಯಾವ ಹೆಸರನ್ನು ಇಟ್ಟಿದ್ದಾರೆ ಎನ್ನುವುದರ ಕುರಿತಂತೆ ಎಲ್ಲರಲ್ಲಿಯೂ ಕೂಡ ಕುತೂಹಲ ಮನೆಮಾಡಿದೆ.

ಈಗಾಗಲೇ ಪ್ರಿಯಾಂಕ ಚೋಪ್ರಾ ಅವರ ಮಗಳ ಹೆಸರು ತಿಳಿದುಬಂದಿದ್ದು ಇಲ್ಲಿಯೂ ಕೂಡ ಭಾರತೀಯ ಸಂಸ್ಕೃತಿಯನ್ನು ಪ್ರಿಯಾಂಕ ಚೋಪ್ರಾ ರವರು ಮರೆತಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೌದು ಗೆಳೆಯರೇ ಪ್ರಿಯಾಂಕ ಚೋಪ್ರಾ ಅವರು ತಮ್ಮ ಮಗಳಿಗೆ ಮಾಲತಿ ಮೇರಿ ಚೋಪ್ರಾ ಜೋನಸ್ ಎನ್ನುವುದಾಗಿ ಹೆಸರಿಸಿದ್ದಾರೆ. ಇದು ನಿಜ ಕೂಡ ಭಾರತೀಯರ ಮನವನ್ನು ಗೆದ್ದಿದ್ದು ಮತ್ತೊಮ್ಮೆ ಪ್ರಿಯಾಂಕ ಚೋಪ್ರಾ ರವರು ತಮ್ಮ ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಈಗಾಗಲೇ ಹಲವಾರು ಬಾರಿ ಪ್ರಿಯಾಂಕ ಚೋಪ್ರಾ ರವರು ಭಾರತೀಯ ಹಬ್ಬಗಳನ್ನು ತಮ್ಮ ಪತಿಯೊಂದಿಗೆ ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿಯ ಸಂಪೂರ್ಣ ಪರಿಚಯವನ್ನು ವಿದೇಶಿಗರಿಗೂ ಕೂಡ ಮಾಡಿಸುವಂತಹ ಪ್ರಯತ್ನವನ್ನು ಮಾಡಿರುವುದು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.