ಒಟ್ಟಾರೆಯಾಗಿ ಇಲ್ಲಯವರೆಗೂ ಕೆಜಿಎಫ್-2 ಚಿತ್ರ ಗಳಿಸಿದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಗೊತ್ತಾ? ಪಿಕೆ ದಾಖಲೆ ಮುರಿಯಲು ಇನ್ನು ಎಷ್ಟು ಬೇಕು ಗೊತ್ತೇ??

31

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಾಪ್ಟರ್ 2 ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದೊಂದೇ ಅಧ್ಯಾಯಗಳನ್ನು ಅಳಿಸಿಹಾಕಿ ತನ್ನದೇ ಆದಂತಹ ಹೊಸ ಯುಗವನ್ನು ಆರಂಭಿಸಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಬರೋಬರಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ಹಲವಾರು ದೊಡ್ಡ ದೊಡ್ಡ ಸಿನಿಮಾಗಳ ದಾಖಲೆಯನ್ನು ಮುರಿದಿದೆ. ಸಾಮಾನ್ಯವಾಗಿ ಕನ್ನಡ ಚಿತ್ರರಂಗ ಕೇವಲ ರಿಜಿನಲ್ ಸಿನಿಮಾ ರಂಗ ಎನ್ನುವುದಾಗಿ ಮೂಗು ಮುರಿಯುತ್ತಿದ್ದವರಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರ ಹಾಗೂ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ರವರು ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ಬಾಕ್ಸಾಫೀಸ್ ನಲ್ಲಿ ಮೊದಲ ವಾರವನ್ನು ಕಳೆದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಾಗಿದ್ದರೆ ಎಂಟು ದಿನಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಗಳಿಸಿರುವ ಬಾಕ್ಸಾಫೀಸ್ ಗಳಿಕೆ ಎಷ್ಟು ಎನ್ನುವುದಾಗಿ ಲೆಕ್ಕಚಾರ ಹಾಕೋಣ ಬನ್ನಿ. ಮೊದಲನೇ ದಿನ ಕೆಜಿಎಫ್ ಚಾಪ್ಟರ್ 2 164.20 ಕೋಟಿ ರೂಪಾಯಿ ಗಳಿಸಿತು ಎರಡನೇ ದಿನ 128.90 ಕೋಟಿ ರೂಪಾಯಿ ಗಳಿಸಿದೆ ಮೂರನೇ ದಿನ 137.10 ಕೋಟಿ ಗಳಿಸಿದೆ ನಾಲ್ಕನೇ ದಿನ 127.25 ಕೋಟಿ ರೂಪಾಯಿ ಗಳಿಸಿದೆ 5ನೇ ದಿನ 66.35 ಕೋಟಿ ಗಳಿಸಿದೆ 6ನೇ ದಿನ 52.35 ಕೋಟಿ ಗಳಿಸಿದೆ ಏಳನೇ ದಿನ 43.15 ಕೋಟಿ ರೂಪಾಯಿ ಗಳಿಸಿದೆ ಎಂಟನೇ ದಿನ 30 ಕೋಟಿ ರೂಪಾಯಿ ಗಳಿಸಿದೆ.

ಅಂದರೆ ಬಾಕ್ಸಾಫೀಸ್ ನಲ್ಲಿ ಒಟ್ಟಾರೆಯಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಎಂಟು ದಿನಗಳಲ್ಲಿ ಬರೋಬ್ಬರಿ 749.30 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು ಹತ್ತಿರದಲ್ಲಿ ಅಮೀರ್ ಖಾನ್ ನಟನೆಯ ಪಿಕೆ ಸಿನಿಮಾದ 845 ಕೋಟಿ ರೂಪಾಯಿ ದಾಖಲೆಯನ್ನು ಮುರಿಯುವಂತಹ ಅವಕಾಶ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಿದೆ. ಇನ್ನು ಚಿತ್ರ ಸಾವಿರ ಕೋಟಿ ಕಲೆಕ್ಷನ್ ಅನ್ನು ಯಾವಾಗ ಹಾಗೂ ಎಷ್ಟು ದಿನಗಳ ಒಳಗೆ ಪೂರ್ಣಗೊಳಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಯಾಕೆಂದರೆ ಮುಂದಿನ ವಾರದಲ್ಲಿ ಹಿಂದಿಯಲ್ಲಿ ಶಾಹಿದ್ ಕಪೂರ್ ನಟನೆಯ ಜೆರ್ಸಿ ಹಾಗೂ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮಚರಣ್ ನಟನೆಯ ಆಚಾರ್ಯ ಸಿನಿಮಾ ಬಿಡುಗಡೆ ಆಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಕಲೆಕ್ಷನ್ಸ್ ತಗ್ಗುವ ಸಾಧ್ಯತೆ ಇದ್ದು ಆದಷ್ಟು ಬೇಗ ಚಿತ್ರ ಕಲೆಕ್ಷನ್ ಮಾಡಿದರೆ ದಾಖಲೆಗಳನ್ನು ಬೇಗನೆ ಮರೆಯುವ ಸಾಧ್ಯತೆಯಿದೆ.