ಐಪಿಎಲ್ ತಂಡಗಳು ನಂಬದೆ ಕೈ ಬಿಟ್ಟ ನಂತರ ಅಬ್ಬರಿಸುತ್ತಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ?? ಈ ಬಾರಿಯ ಐಪಿಎಲ್ ನಲ್ಲಿ ಇವರದ್ದೇ ಹವಾ.

19

ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ 2022 ಹಲವಾರು ಬದಲಾವಣೆಗೆ ಸಾಕ್ಷಿಯಾಗಿದೆ. ಹೌದು ಎರಡು ಹೊಸ ತಂಡಗಳು ಮತ್ತು ಇರುವಂತಹ ತಂಡಗಳ ಆಟಗಾರರಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಕಂಡಿವೆ. ಅದರಲ್ಲೂ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಹಿಂದೆ ಕೆಲವು ತಂಡಗಳಲ್ಲಿ ಇದ್ದ ಆಟಗಾರರನ್ನು ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಖರೀದಿಸಲು ವಿಫಲವಾಗಿದ್ದು ಈಗ ಆ ಆಟಗಾರರು ಬೇರೆ ತಂಡದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅಂತಹ ಟಾಪ್ 5 ಆಟಗಾರರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ಕ್ವಿಂಟನ್ ಡಿ ಕಾಕ್; ಕ್ವಿಂಟನ್ ಡಿಕಾಕ್ ರವರು ಮೊದಲಿಗೆ ದಲ್ಲಿ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಟವಾಡಿ ರುತ್ತಾರೆ. ನಂತರ 2019 ರಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳುವ ಇವರು ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಆಟಗಾರ ಆಗಿರುತ್ತಾರೆ. ಕಳೆದ ಸೀಸನ್ ವರೆಗೂ ಕೂಡ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿದ್ದ ಕ್ವಿಂಟನ್ ಡಿ ಕಾಕ್ ರವರನ್ನು ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಬಾರಿ ತಂಡದಿಂದ ಕೈಬಿಟ್ಟಿದೆ. ಈ ಬಾರಿ ಲಕ್ನೋ ತಂಡದಲ್ಲಿ ಆಯ್ಕೆಯಾಗಿರುವ ಕ್ವಿಂಟನ್ ಡಿಕಾಕ್ ಅವರು 7 ಪಂದ್ಯಗಳಿಂದ ಬರೋಬ್ಬರಿ 215 ರನ್ನುಗಳನ್ನು ಬಾರಿಸಿದ್ದಾರೆ.

ಡುಪ್ಲೆಸಿಸ್; ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಐಪಿಎಲ್ ಆಡಲು ಪ್ರಾರಂಭಿಸಿದ ಡುಪ್ಲೆಸಿಸ್ ರವರ ಈಗಾಗಲೇ ಪ್ರತಿ ಸೀಸನ್ನಲ್ಲಿ ಕೂಡ ತಂಡದ ಟಾಪ್ ಸ್ಕೋರರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ ಕಳೆದ ಬಾರಿ 16 ಪಂದ್ಯಗಳಿಂದ ಬರೋಬ್ಬರಿ 633 ರನ್ನುಗಳನ್ನು ಬಾರಿಸಿದ್ದರು. ಇಷ್ಟಿದ್ದರೆ ಕೂಡ ಈ ಬಾರಿ ಡುಪ್ಲೆಸಿಸ್ ರವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಫಲವಾಗಿತ್ತು. ಇನ್ನೂ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಂದಂತಹ ಡುಪ್ಲೆಸಿಸ್ ರವರು ನಾಯಕನಾಗಿ ತಂಡದ ಜವಾಬ್ದಾರಿಯನ್ನು ಕೈಗೆತ್ತಿಕೊಂಡು 7 ಪಂದ್ಯಗಳಿಂದ 250 ರನ್ನು ಬಾರಿಸುವ ಮೂಲಕ ತಂಡದ ಗೆಲುವಿನ ಜವಾಬ್ದಾರಿಯಲ್ಲಿ ಪ್ರಮುಖವಾದ ಕೊಡುಗೆಯನ್ನು ನೀಡುತ್ತಿದ್ದಾರೆ.

ಆವೇಶ್ ಖಾನ್; ಕಳೆದ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆವೇಶ್ ಖಾನ್ 16 ಪಂದ್ಯಗಳಲ್ಲಿ ಬರೋಬ್ಬರಿ 24 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ಖರೀದಿಸುವಲ್ಲಿ ವಿಫಲವಾಯಿತು. ಈ ಬಾರಿ ಲಕ್ನೋ ತಂಡದ ಪರವಾಗಿ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿರುವ ಅವರು ಈಗಾಗಲೇ 11ಕ್ಕೂ ವಿಕೆಟ್ಗಳನ್ನು ಕಬಳಿಸಿದ್ದಾರೆ.

ಶುಭಮನ್ ಗಿಲ್; ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಗಿಲ್ 2020 ರಂದು 14 ಪಂದ್ಯಗಳಲ್ಲಿ 440 ರನ್ ಹಾಗೂ 2021 ರಂದು 17 ಪಂದ್ಯಗಳಲ್ಲಿ 478 ರನ್ನುಗಳನ್ನು ಬಾರಿಸಿ ತಂಡದ ಪ್ರಮುಖ ಆಧಾರ ಸ್ತಂಭವಾಗಿದ್ದರು. ಆದರೆ ಈಗಾಗಲೇ ಈ ಬಾರಿ ತಂಡದಿಂದ ಹೊರಬಂದು ಗುಜರಾತ್ ಪರವಾಗಿ ಆಡುತ್ತಿರುವ ಅವರು 7 ಪಂದ್ಯಗಳಿಂದ 200 ರನ್ ಕಲೆಹಾಕಿದ್ದಾರೆ.

ಯಜುವೇಂದ್ರ ಚಹಾಲ್; 2013 ರಂದು ಯಜುವೇಂದ್ರ ಚಹಾಲ್ ಮೊದಲಿಗೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಆಟಗಾರನಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಹಲವಾರು ಬಾರಿ ತಂಡ ಸೋಲಿನ ಸುಳಿಗೆ ಸಿಲುಕಿದ್ದಾರೆ ಏಕಮಾತ್ರ ಆಟಗಾರನಾಗಿ ತಂಡವನ್ನು ಗೆಲ್ಲಿಸಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬೌಲಿಂಗ್ ವಿಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದಾಕಾಲ ನಂಬ ಬಲ್ಲಂತಹ ಏಕೈಕ ಬೌಲರ್ ಆಗಿದ್ದರು. ಆದರೆ ಈ ಬಾರಿ ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ ಆಡುತ್ತಿರುವ ಚಹಾಲ್ ರವರು ಆರು ಪಂದ್ಯಗಳಲ್ಲಿ ಈಗಾಗಲೇ 17 ವಿಕೆಟ್ ಗಳನ್ನು ಪಡೆದುಕೊಂಡು ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಇದು ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಿಸ್ ಮಾಡಿಕೊಂಡಂತಹ ದೊಡ್ಡ ಅವಕಾಶ ಎಂದು ಹೇಳಬಹುದಾಗಿದೆ. ಈ ಆಟಗಾರರಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.