ವಿರಾಟ್ ಕೊಹ್ಲಿ ರವರ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಒಂದೇ ಮಾತಿನಲ್ಲಿ ಗವಾಸ್ಕರ್ ಹೇಳಿದ್ದೇನು ಗೊತ್ತೇ??

34

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಟೂರ್ನಮೆಂಟ್ ಎನ್ನುವುದು ಸಾಕಷ್ಟು ವಿಶೇಷಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ವಿಶೇಷ ಎಂದಾಕ್ಷಣ ನಿಮಗೆ ಟೈಟಲ್ ಸ್ಪಾನ್ಸರ್ ಟಾಟಾ ಹಾಗೂ ಈ ಬಾರಿಯ ಟೂರ್ನಮೆಂಟಿನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿರುವ ಎಂದು ಅಂದುಕೊಳ್ಳಬಹುದು. ಆದರೆ ವಿಶೇಷತೆ ಎನ್ನುವುದು ಇದಕ್ಕೂ ಮಿಗಿಲಾಗಿದೆ. ಹೌದು ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಉಮೇಶ್ ಯಾದವ್ ಅವರು ಉತ್ತಮವಾದ ಬೌಲಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಹೇಂದ್ರ ಸಿಂಗ್ ಧೋನಿ ರವರು ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ದಿನೇಶ್ ಕಾರ್ತಿಕ್ ರವರು ಫಿನಿಶರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪರಿಪೂರ್ಣವಾಗಿ ನಿಭಾಯಿಸುತ್ತಿದ್ದಾರೆ. ಇವರೆಲ್ಲ ಈ ಹಿಂದೆ ಔಟ್ ಆಫ್ ಫಾರ್ಮ್ ಆಗಿದ್ದರು. ಇವರೆಲ್ಲ ತಮ್ಮ ಫಾರ್ಮ್ ಗೆ ಮರಳಿದ್ದಾರೆ ಆದರೆ ಕಿಂಗ್ ಕೊಹ್ಲಿ ಮಾತ್ರ ಇನ್ನೂ ಕೂಡ ತಮ್ಮ ಕಳಪೆ ಪ್ರದರ್ಶನದಿಂದ ಹೊರಗೆ ಬಂದಿಲ್ಲ ಎನ್ನುವುದೇ ಅಭಿಮಾನಿಗಳಿಗೆ ಹಾಗೂ ಭಾರತೀಯ ಕ್ರಿಕೆಟ್ ತಂಡದ ಹಿಂಬಾಲಕರಿಗೆ ಬೇಸರದ ವಿಚಾರವಾಗಿದೆ ಎಂದರೆ ತಪ್ಪಾಗಲಾರದು. ಹೌದು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಮೆಂಟಿನಲ್ಲಿ ಸಾಕಷ್ಟು ಯಶಸ್ವಿಯಾಗಿ ಪಂದ್ಯಗಳನ್ನು ಗೆದ್ದುಕೊಂಡು ಬರುತ್ತಿದೆ.

ಆದರೆ ತಂಡದ ಪ್ರಮುಖ ಆಟಗಾರ ಆಗಿರುವ ವಿರಾಟ್ ಕೊಹ್ಲಿ ರವರು ಕಳಪೆ ಫಾರಂನಲ್ಲಿ ಆಡುತ್ತಿದ್ದಾರೆ ಎನ್ನುವುದೇ ತಂಡದ ವೀಕ್ನೆಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಾಗಲಾರದು. ಈ ಕುರಿತಂತೆ ವಿರಾಟ್ ಕೊಹ್ಲಿ ರವರ ಪರವಾಗಿ ಮಾಜಿ ಕ್ರಿಕೆಟಿಗ ಆಗಿರುವ ಸುನಿಲ್ ಗಾವಸ್ಕರ್ ಅವರು ಕೂಡ ಕೆಲವೊಂದು ಮಾತುಗಳನ್ನಾಡಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ರವರ ಕಳಪೆ ಪ್ರದರ್ಶನದ ಕುರಿತಂತೆ ಟೀಕಾಪ್ರಹಾರ ಗಳು ಹರಿದುಬರುತ್ತಿವೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಅವರನ್ನು ವಹಿಸಿಕೊಂಡು ಮಾತನಾಡಿರುವ ಸುನಿಲ್ ಗಾವಸ್ಕರ್ ಅವರು ಕಿಂಗ್ ಕೋಳಿ ಫಾರ್ಮ್ ಗೆ ವಾಪಸ್ ಆಗುವುದಕ್ಕೆ ಒಂದು ಒಳ್ಳೆ ಇನ್ನಿಂಗ್ಸ್ ಸಾಕು ಎನ್ನುವುದಾಗಿ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ನಿಜಕ್ಕೂ ಕೂಡ ಅಭಿಮಾನಿಗಳು ವಿರಾಟ್ ಕೊಹ್ಲಿ ರವರ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೋಡಲು ಕಾತರರಾಗಿದ್ದಾರೆ ಎಂದು ಹೇಳಬಹುದಾಗಿದೆ.