ಮದುವೆಯಾಗಿರುವ ಕನ್ನಡತಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಮೊದಲು ಭೇಟಿಯಾಗಿದ್ದು ಎಲ್ಲಿ ಗೊತ್ತೇ??

658

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಂಗಳೂರು ಮೂಲದ ಬಾಲಿವುಡ್ ನಟಿಯಾಗಿರುವ ಐಶ್ವರ್ಯ ರೈ ರವರು ಯಾವ ಮಟ್ಟಕ್ಕೆ ಚಿತ್ರಜಗತ್ತಿನಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದಾಗಿ. ಇನ್ನು ಭುವನ ಸುಂದರಿಯಾಗಿ ಕೂಡ ಕಾಣಿಸಿಕೊಂಡಿರುವ ಐಶ್ವರ್ಯ ರೈ ಅಮಿತಾಬ್ ಬಚ್ಚನ್ ರವರ ಮಗನಾಗಿರುವ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದಾರೆ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ರವರ ನಡುವೆ ಕೆಲವು ವರ್ಷದ ವಯಸ್ಸಿನ ಅಂತರ ಇದ್ದರೂ ಕೂಡ ಇವರಿಬ್ಬರ ಪ್ರೀತಿಗೆ ಇದುವರೆಗೂ ಅವರ ವಯಸ್ಸು ಅಡ್ಡಿಯಾಗಿಲ್ಲ. ಇನ್ನು ಅಭಿಷೇಕ್ ಬಚ್ಚನ್ ಅವರು ಸಿನಿಮಾಗೆ ಬರುವ ಮುನ್ನವೆ ಐಶ್ವರ್ಯ ರೈ ರವರು ಸಿನಿಮಾಗೆ ಬಂದಿದ್ದರು.

ಹಲವಾರು ಜನರಿಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಕೂಡ ಮೊದಲು ಎಲ್ಲಿ ಭೇಟಿಯಾಗಿದ್ದು ಎನ್ನುವುದರ ಕುರಿತಂತೆ ಹಲವಾರು ಗೊಂದಲಗಳಿರಬಹುದು. ಆ ಗೊಂದಲಗಳನ್ನು ಇಂದಿನ ಲೇಖನಿಯಲ್ಲಿ ನಾವು ಪೂರ್ಣವಾಗಿ ಪರಿಹರಿಸುವಂತಹ ಕಾರ್ಯವನ್ನು ಮಾಡುತ್ತೇವೆ. ಮೊದಲಿಗೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಕೂಡ ಭೇಟಿಯಾಗಿದ್ದು ಸ್ವಿಟ್ಝರ್ ಲ್ಯಾಂಡಿನಲ್ಲಿ. ಸ್ವಿಟ್ಝರ್ ಲ್ಯಾಂಡಿನಲ್ಲಿ ಐಶ್ವರ್ಯ ರೈ ಹಾಗೂ ಬಾಬಿ ಡಿಯೋಲ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿದ್ದ ಓರ್ ಪ್ಯಾರ್ ಹೋಗಯಾ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಬಾಬಿ ಡಿಯೋಲ್ ಮೂಲಕ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯ ರೈ ರವರಿಗೆ ಪರಿಚಿತರಾಗುತ್ತಾರೆ.

ನಂತರ 2000 ಇಸ್ವಿಯಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಅಭಿಷೇಕ್ ಬಚ್ಚನ್ ಅವರು ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇದಾದ ನಂತರ ಅಭಿಷೇಕ್ ಬಚ್ಚನ್ ರವರು ಐಶ್ವರ್ಯ ರವರ ಜೊತೆಗೆ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವುಗಳಲ್ಲಿ ಗುರು ಉಮ್ರಾವ್ ಜಾನ್ ಧೂಮ್ 2 ಮುಖ್ಯವಾದವು. ಅದರಲ್ಲೂ ಧೂಮ್2 ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಸಂಬಂಧ ಎನ್ನುವುದು ಇನ್ನಷ್ಟು ಹತ್ತಿರವಾಗುತ್ತದೆ. ಗುರು ಸಿನಿಮಾದ ಪ್ರೀಮಿಯರ್ ಶೋನಲ್ಲಿ ಅಮೆರಿಕದಲ್ಲಿ ಬಾಲ್ಕನಿಯಲ್ಲಿ ನಿಂತು ಐಶ್ವರ್ಯ ರೈ ರವರಿಗೆ ಪ್ರಪೋಸ್ ಮಾಡುವ ಮೂಲಕ ತಮ್ಮ ಮನದಾಸೆಯನ್ನು ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ನಂತರ ನಡೆದ ಮದುವೆ ಕುರಿತಂತೆ ನಿಮಗೆಲ್ಲಾ ಗೊತ್ತಿದೆ. ಈಗ ಆರಾಧ್ಯ ಎನ್ನುವ ಹೆಣ್ಣು ಮಗಳೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.