ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು, ಓದಿ ಪ್ರೀತಿಸಿ ಮದುವೆಯಾದಳು. ಆದರೆ ಆಕೆಯ ಜೀವನದಲ್ಲಿ ಬಿರುಗಾಳಿ ಬಂದಿದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬದುಕು ನಾವಂದುಕೊಂಡ ಹಾಗೆ ಎಂದಿಗೂ ಕೂಡ ನಡೆಯುವುದಿಲ್ಲ. ಒಳ್ಳೆಯ ಪರಿಸ್ಥಿತಿಯಲ್ಲಿ ಇರುವವರು ಯಾವಾಗ ಏನಾಗುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅದರಂತೆ ಇಂದು ನಾವು ಹೇಳಲು ಹೊರಟಿರುವ ಹೆಣ್ಣುಮಗಳ ಕಥೆಯ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಈ ಹೆಣ್ಣುಮಗಳ ಜೀವನದ ಕಥೆಯನ್ನು ಕೇಳಿದರೆ ಮನಕಲಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಇವಳ ಕಥೆಯನ್ನು ಸಂಪೂರ್ಣವಾಗಿ ಕೇಳೋಣ ಬನ್ನಿ.
ಹೌದು ಇನ್ನೊಂದು ಕಥೆಯಲ್ಲಿ ಹೇಳಲು ಹೊರಟಿರುವ ಹೆಣ್ಣುಮಗಳ ಹೆಸರು ಶಿವಾನಿ ಎನ್ನುವುದಾಗಿ. ಈಕೆ 23 ವರ್ಷ ವಯಸ್ಸಿನ ವಳು. ಈಕೆ ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ತನ್ನ ತಂದೆಯನ್ನು ಕಳೆದುಕೊಂಡು ತಾಯಿಯ ಜೊತೆಗೆ ಇರಬೇಕಾಗುತ್ತದೆ. ನಂತರ ಈಕೆಯನ್ನು ಹಾಗೂ ಈಕೆಯ ತಾಯಿಯನ್ನು ನೋಡಿಕೊಂಡಿದ್ದು ಆಕೆಯ ಸೋದರ ಮಾವ. ಆಕೆಯ ಸೋದರ ಮಾವನ ಸಹಾಯದಿಂದಾಗಿ ಶಿವಾನಿ ಲಾಯರ್ ಪದವಿಯನ್ನು ಕೂಡ ಮುಗಿಸುತ್ತಾಳೆ. ಈ ಸಂದರ್ಭದಲ್ಲಿ ಸೋದರಮಾವ ನಿನ್ನ ಲಾಯರ್ ಕಲಿಕೆಗೆ ಹತ್ತು ಲಕ್ಷ ಖರ್ಚು ಮಾಡಿದ್ದೇನೆ ಅದನ್ನು ವಾಪಸು ಕೊಡುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿಕೊಳ್ಳುವ ಶಿವಾನಿ ಪ್ರತಿ ತಿಂಗಳು ಕಂತಿನ ಲೆಕ್ಕದಲ್ಲಿ ಕೊಡುವುದಾಗಿ ಒಪ್ಪಿಕೊಂಡು ಕೊಡಲು ಆರಂಭಿಸುತ್ತಾಳೆ. ಇಷ್ಟು ಮಾತ್ರವಲ್ಲದೆ ಐದು ವರ್ಷದ ಹಿಂದೆ ತಾನು ಪ್ರೀತಿಸಿದ ಅರ್ಜುನ್ ಎಂಬಾತನನ್ನು ಮದುವೆಯಾಗುತ್ತಾಳೆ.

ಪ್ರೀತಿಸಿ ಮದುವೆಯಾದ ಶಿವಾನಿ ಹಾಗೂ ಅರ್ಜುನ್ ಇಬ್ಬರಿಗೂ ಕೂಡ ಎರಡು ವರ್ಷದ ಗಂಡು ಮಗು ಕೂಡ ಇದೆ. ಇವರ ಸಂಸಾರದಲ್ಲಿ ಎಲ್ಲವೂ ಕೂಡ ಚೆನ್ನಾಗಿ ಸಾಗಿ ಬಂದಿತ್ತು. ಆದರೆ ಶಿವಾನಿ ಮಾವನಿಗೆ ಪ್ರತಿ ತಿಂಗಳು ಹಣ ನೀಡುತ್ತಿದ್ದುದು ಶಿವಾನಿಯ ಗಂಡ ಅರ್ಜುನನಿಗೆ ಆಗಿಬರುತ್ತಿರಲಿಲ್ಲ. ಇದಕ್ಕಾಗಿ ಪ್ರತಿ ತಿಂಗಳು ಕೂಡ ಅವರಿಬ್ಬರ ನಡುವೆ ಜಗಳ ನಡೆದುಕೊಂಡು ಬರುತ್ತಲೇ ಇತ್ತು. ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಹೇಳಲಾಗುತ್ತದೆ ಆದರೆ ಇಲ್ಲಿ ಪ್ರತಿದಿನ ಕೂಡ ಅದೇ ತಕರಾರು ಎದ್ದು ಬರುತ್ತಿತ್ತು. ಆಗ ಶಿವಾನಿ ಹಾಗೂ ಅರ್ಜುನ ನಡುವೆ ಜಗಳ ತಾರಕಕ್ಕೇರಿ ಶಿವಾನಿ ಮಾಡಿಕೊಳ್ಳಬಾರದು ಕೆಲಸವನ್ನು ಮಾಡಿಕೊಂಡು ಬಿಟ್ಟಳು.
ಹೌದು ಗೆಳೆಯರೆ ಶಿವಾನಿ ಮೊನ್ನೆಯಷ್ಟೇ ತೆಲಂಗಾಣದ ಹೈದರಾಬಾದಿನಲ್ಲಿರುವ ತನ್ನ ಮನೆಯ ಮಹಡಿಯಿಂದ ಕೆಳಗೆ ಜಿಗಿದು ತನ್ನ ಜೀವನವನ್ನು ಕೊನೆಗಾಣಿಸಿ ಕೊಂಡಿದ್ದಾಳೆ. ಶಿವಾನಿಯ ಗಂಡ ಅರ್ಜುನ್ ಕೂಡ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇತ್ತಕಡೆ ಶಿವಾನಿಯ ತಾಯಿ ಕೂಡ ಆಕೆ ತನ್ನ ಮಾವ ಶಿಕ್ಷಣಕ್ಕೆ ನೀಡಿದಂತಹ ಹಣವನ್ನು ವಾಪಸು ಕಟ್ಟುತ್ತಿದ್ದಳು ಆದರೆ ಗಂಡ ಇದರ ಕುರಿತಂತೆ ಪದೇಪದೇ ಆಕೆಗೆ ಕಿರುಕುಳವನ್ನು ನೀಡುತ್ತಿದ್ದ. ಇದರಿಂದಾಗಿ ಆಕೆ ಈ ಕೆಲಸವನ್ನು ಮಾಡಿಕೊಂಡಿದ್ದಾಳೆ ಎಂಬುದಾಗಿ ದೂರು ನೀಡಿದ್ದಾರೆ.
ತಾಯಿ ದುಡುಕಿ ನಿಂದಾಗಿ ತೆಗೆದುಕೊಂಡ ನಿರ್ಧಾರದ ಕಾರಣದಿಂದಾಗಿ ಈಗ ಪಾಪ ಆ ಎರಡು ವರ್ಷದ ಮಗು ಅವರವರ ಆಶ್ರಯದಲ್ಲಿ ಬೆಳೆಯುವಂತಾಗಿದೆ ಎಂಬುದೇ ನಿಜಕ್ಕೂ ವಿಷಾದನೀಯ ವಿಚಾರ. ಇದನ್ನು ಕುಳಿತುಕೊಂಡು ಸರಿ ಮಾಡಬಹುದಾಗಿತ್ತು ಇಲ್ಲದೆ ಸರಿಯಾಗದ್ದಿದ್ದರೆ ಮಗುವನ್ನು ಕರೆದುಕೊಂಡು ಬೇರೆಯಾಗಿ ಜೀವನ ನಡೆಸಬೇಕಾಗಿತ್ತು. ಇವೆರಡನ್ನು ಕೂಡ ಮಾಡಿದ ಶಿವಾನಿ ಮಗುವಿನ ಕುರಿತಂತೆ ಯೋಚನೆ ಕೂಡ ಮಾಡದೆ ತನ್ನ ಜೀವನವನ್ನು ಕೊನೆಗಾಣಿಸಿ ಕೊಂಡಿರುವುದು ಹಾಗೂ ಅರ್ಥ ತಂದೆ ಜೈಲುಪಾಲಾಗಿರುವ ಈಗ ಮಗು ಅನಾಥ ವಾಗುವಂತೆ ಆಗಿದೆ.

ಇಂತಹ ವಿಚಾರಗಳು ನಮ್ಮ ಸುತ್ತಮುತ್ತಲು ನಡೆಯುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಆ ವ್ಯಕ್ತಿಗಳು ತಮ್ಮನ್ನು ನಂಬಿಕೊಂಡಿರುವ ಹಾಗೂ ಮಕ್ಕಳ ಕುರಿತಂತೆ ಮೊದಲು ಯೋಚನೆ ಮಾಡಬೇಕಾಗುತ್ತದೆ. ಎಲ್ಲಾ ಸಮಸ್ಯೆಗಳಿಗೂ ಮರಣವೇ ಪರಿಹಾರ ಆಗಿರುವುದಿಲ್ಲ. ತಮಗಿಂತ ಹೆಚ್ಚಾಗಿ ತಮ್ಮನ್ನು ನಂಬಿಕೊಂಡಿರುವವರನ್ನು ಮೊದಲು ಅವರ ಕುರಿತಂತೆ ಯೋಚಿಸಬೇಕಾಗುತ್ತದೆ. ಬದುಕಿದ್ದು ಸಾಧಿಸಿ ತೋರಿಸಿದರೇ ಸಮಾಜ ಕೂಡ ನಿಮ್ಮ ಕುರಿತಂತ ಹೆಮ್ಮೆ ಪಡುತ್ತದೆ.