ತೆಲುಗಿನಲ್ಲಿ ಅತಿ ಯಶಸ್ಸು ಪಡೆದ ನಟಿ ಎನಿಸಿಕೊಂಡಿರುವ ಸಮಂತಾ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತೇ?? ಇಷ್ಟು ಕಡಿಮೆಗೆ ಸಮಂತಾ ಪಾದಾರ್ಪಣೆ ಮಾಡಿದ್ದು ಗೊತ್ತೇ??

57

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಸಮಂತಾ ರವರು ಕಳೆದ ವರ್ಷವಷ್ಟೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ. ಇಂತಹ ಘಟನೆಗಳು ನಡೆದಾಗ ಸೆಲೆಬ್ರಿಟಿಗಳ ಜೀವನದಲ್ಲಿ ಇಳಿಕೆ ಕಂಡು ಬರುತ್ತದೆ. ಆದರೆ ಸಮಂತಾ ರವರ ವೃತ್ತಿಜೀವನದಲ್ಲಿ ಏರುಗತಿ ಕಂಡುಬಂದಿದೆ ಎಂದರೆ ನಿಜಕ್ಕೂ ಕೂಡ ಆಶ್ಚರ್ಯ ಪಡುವಂತಹ ವಿಚಾರವೇ ಸರಿ. ಆಶ್ಚರ್ಯಪಟ್ಟರು ಕೂಡ ಇದು ನಿಜವಾದ ವಿಚಾರ. ಮದುವೆಯಾದಾಗಿನಿಂದ ಸಮಂತಾ ರವರು ಚಿತ್ರಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಕಡಿಮೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಹಾಗೂ ಅವರಿಗೆ ಅಷ್ಟೊಂದು ಬೇಡಿಕೆ ಕೂಡ ಆ ಸಮಯದಲ್ಲಿ ಇರಲಿಲ್ಲ. ಆದರೆ ಈಗ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ನಂತರ ಸಂಬಂಧ ರವರಿಗೆ ಎಲ್ಲಾ ಬಗೆಯ ಪಾತ್ರಗಳು ಕೂಡ ಹುಡುಕಿಕೊಂಡು ಬರುತ್ತಿವೆ.

ಎಲ್ಲಕ್ಕಿಂತ ಪ್ರಮುಖವಾಗಿ ಈ ಪಾತ್ರಗಳನ್ನು ಸಮಂತಾ ರವರೆ ನಟಿಸಬೇಕು ಎನ್ನುವುದಾಗಿ ಕೂಡ ನಿರ್ಮಾಪಕ-ನಿರ್ದೇಶಕರು ಪಟ್ಟು ಹಿಡಿದುಕೊಂಡು ಕುಳಿತಿದ್ದಾರೆ. ಅದರಲ್ಲೂ ಇತ್ತೀಚಿಗೆ ಪುಷ್ಪಾ ಚಿತ್ರದ ಐಟಂ ಸಾಂಗ್ ನಂತರ ಸಮಂತಾ ರವರಿಗೆ ಸಂಭಾವನೆ ವಿಚಾರದಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ. ಪುಷ್ಪ ಚಿತ್ರದ ಐಟಂ ಸಾಂಗ್ ಗಾಗಿ ಬರೋಬ್ಬರಿ 5 ಕೋಟಿ ಸಂಭಾವನೆ ಸಿಕ್ಕಿದೆ ಎನ್ನುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸದ್ದನ್ನು ಮಾಡಿದೆ. ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದ ಹಾಗೂ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣನ ವರಿಗಿಂತ ಸಮಂತಾ ರವರು ಸಂಭಾವನೆ ವಿಚಾರದಲ್ಲಿ ಮುಂದಿದ್ದಾರೆ ಎನ್ನುವುದು ಸತ್ಯವಾಗಿದೆ.

ಆದರೆ ಸಮಂತರ್ ಅವರು ಪಡೆದುಕೊಂಡಂತಹ ಮೊದಲ ಸಂಭಾವನೆ ಎಷ್ಟು ಗೊತ್ತಾ. ಬನ್ನಿ ಅದರ ಕುರಿತಂತೆ ನಿಮಗೆ ತಿಳಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸೆಷನ್ ಅನ್ನು ಸಮಂತ ಅವರು ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ನಿಮ್ಮ ಮೊದಲ ಸಂಭಾವನೆ ಎಷ್ಟು ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಉತ್ತರ ಎಂಬಂತೆ ಸಮಂತಾ ರವರು ತಾವು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕಾರ್ಯಕ್ರಮವನ್ನು 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದಕ್ಕಾಗಿ 500 ರೂಪಾಯಿ ಸಂಬಳ ಸಿಕ್ಕಿತ್ತು ಎನ್ನುವುದಾಗಿ ಹೇಳಿದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ಸಮಂತಾ ರವರು ಚಿತ್ರರಂಗದಲ್ಲಿ ಬೆಳೆದು ಬಂದಿರುವ ಹಾದಿ ನಿಜಕ್ಕೂ ಕೂಡ ಕಷ್ಟ ಹಾಗೂ ಪರಿಶ್ರಮದಿಂದ ಕೂಡಿದೆ. ಇಂದು ಅವರಿರುವ ಸ್ಥಾನ ಅವರು ಕಷ್ಟಪಟ್ಟು ಸಂಪಾದಿಸಿದ್ದು. ನಿಜಕ್ಕೂ ಕೂಡ ಅವರು ಇಂದು ಬೆಳೆದು ಬಂದಿರುವ ರೀತಿ ಎಲ್ಲರಿಗೂ ಕೂಡ ಅದರಲ್ಲೂ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕ ವಾದದ್ದು.