ಹೇಳದೆ ಇದ್ದರೂ ಕೂಡ ಮದುವೆಯಾದ ನಂತರ ಹೆಂಡತಿ ಆಕೆಯ ಗಂಡನಿಂದ ಬಯಸುವ ಮೂರು ಆಸೆಗಳೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಭೂಮಿಯಲ್ಲಿ ಕೇವಲ ಅದರ ಕಾರ್ಯಕ್ರಮಗಳಷ್ಟೇ ನಡೆಯುತ್ತದೆ ಎಂಬುದಾಗಿ ಪೂರ್ವಜರು ಹೇಳುತ್ತಾರೆ. ಅಂದರೆ ಈಗಾಗಲೇ ಇಬ್ಬರು ಹುಡುಗ-ಹುಡುಗಿ ಮದುವೆಯಾಗುತ್ತಾರೆ ಅಥವಾ ಅವರು ದಂಪತಿಗಳಾಗಿ ಜೀವಿಸುತ್ತಾರೆ ಎನ್ನುವುದು ಮೊದಲೇ ನಿಶ್ಚಯವಾಗಿರುತ್ತದೆ. ಇಲ್ಲಿ ಮದುವೆ ಎನ್ನುವುದು ಕೇವಲ ನೆಪ ಮಾತ್ರ ಅಷ್ಟೇ ಎಂಬುದಾಗಿ ಪೌರಾಣಿಕ ದಲ್ಲಿ ಕೂಡ ಉಲ್ಲೇಖವಿದೆ.
ಮದುವೆ ಎನ್ನುವುದು ನಿಜಕ್ಕೂ ಕೂಡ ಸಂತೋಷದ ಜೊತೆಗೆ ಭಾವನಾತ್ಮಕ ಜರ್ನಿ ಕೂಡ ಆಗಿರುತ್ತದೆ. ಕೇವಲ ಮದುವೆ ಎನ್ನುವುದು ಒಂದು ದಿನಕ್ಕಾಗಿ ಮಾತ್ರವಲ್ಲದೆ ಜೀವನಪೂರ್ತಿ ಗಂಡ-ಹೆಂಡತಿ ಪರಸ್ಪರ ಜೊತೆಯಾಗಿ ನಡೆದುಕೊಂಡು ಹೋಗಬೇಕಾಗಿರುವ ಹೊಸ ಪಯಣ. ಹೀಗಾಗಿ ಪರಸ್ಪರ ದೀರ್ಘಕಾಲದವರೆಗೆ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗಬೇಕಾಗಿರುತ್ತದೆ. ಅದರಲ್ಲೂ ಮದುವೆ ಎನ್ನುವುದು ಪ್ರತಿಯೊಬ್ಬ ಹೆಣ್ಣುಮಗಳಿಗೂ ಕೂಡ ಜೀವನದಲ್ಲಿ ಮಹತ್ತರವಾದ ಬದಲಾವಣೆ ತರುತ್ತದೆ.

ಹೌದು ಖಂಡಿತವಾಗಿ ಮದುವೆಯೆನ್ನುವುದು ಹೆಣ್ಣು ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ. ತಮ್ಮ ತವರುಮನೆಯಲ್ಲಿ ತಂದೆ ಹಾಗೂ ತಾಯಿಯ ಜೊತೆಗೆ ರಾಣಿಯಂತೆ ಬೆಳೆದಿರುತ್ತಾರೆ. ಆದರೆ ಮದುವೆಯಾದ ನಂತರ ಜೀವನಪೂರ್ತಿ ಗಂಡನ ಮನೆಯಲ್ಲಿ ಇರಲು ತಮ್ಮ ತವರು ಮನೆಯನ್ನು ಬಿಟ್ಟು ಬರುತ್ತಾರೆ. ಹೀಗಾಗಿ ಅವರಿಗೆ ಗಂಡನೇ ಸರ್ವಸ್ವ ಆಗಿರುತ್ತಾರೆ. ಹೀಗಾಗಿ ತಮಗೆ ಜೀವನದಲ್ಲಿ ಏನೇ ಒಳ್ಳೆಯದು ಹಾಗೂ ಕೆಟ್ಟದ್ದು ನಡೆಯಲಿ ಅದಕ್ಕೆ ಗಂಡನ ಕಾರಣರಾಗಿರುತ್ತಾರೆ. ಅದರಲ್ಲೂ ಮದುವೆಯಾದಮೇಲೆ ಗಂಡನಿಂದ ಮೂರು ವಿಷಯಗಳನ್ನು ಅವರು ನಿರೀಕ್ಷೆ ಮಾಡಿರುತ್ತಾರೆ. ಅದನ್ನು ಅವರು ಬಾಯಿಬಿಟ್ಟು ಹೇಳಿಲ್ಲವಾದರೂ ಕೂಡ ಗಂಡಂದಿರು ಅದನ್ನು ಪೂರೈಸುವುದು ಆದ್ಯ ಕರ್ತವ್ಯವಾಗಿದೆ. ಹಾಗಿದ್ದರೆ ಅವು ಯಾವುವು ಎನ್ನುವುದನ್ನು ತಿಳಿಯೋಣ.
ಪ್ರಾಮಾಣಿಕರಾಗಿ ಇರುವುದು; ಪ್ರತಿಯೊಬ್ಬ ಮಹಿಳೆ ಕೂಡ ಮದುವೆಯಾದಮೇಲೆ ತಮ್ಮ ಗಂಡ ತಮ್ಮೊಂದಿಗೆ ಪ್ರಾಮಾಣಿಕರಾಗಿ ಇರಬೇಕು ಎನ್ನುವುದಾಗಿ ಬಯಸುತ್ತಾರೆ. ಇದು ಹೆಂಡತಿಯರು ಹೇಳಿ ಗಂಡಂದಿರು ಪಾಲಿಸುವಂತಹ ನೀತಿಯಲ್ಲ ಬದಲಾಗಿ ಗಂಡಂದಿರು ಮದುವೆಯಾದ ದಿನದಿಂದ ಕೊನೆಯವರೆಗೂ ಕೂಡ ಪಾಲಿಸಲೇಬೇಕಾದಂತಹ ನೀತಿ.
ಯಾವಾಗ ಗಂಡಂದಿರು ನಮ್ಮೊಂದಿಗೆ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ಳುವುದಿಲ್ಲ ಅಥವಾ ಪ್ರಾಮಾಣಿಕರಾಗಿ ಇಲ್ಲ ಎನ್ನುವುದಾಗಿ ತಿಳಿಯುತ್ತಾರೋ ಆಗ ಪತ್ನಿಯರಿಗೆ ತಮ್ಮ ಗಂಡಂದಿರ ಕುರಿತಂತೆ ನಿಜವಾಗಿಯೂ ಕೋಪ ಬರುತ್ತದೆ. ಆ ಕೋಪ ಸಂಸಾರವನ್ನು ಅಲ್ಲಿ ಅರ್ಧಕ್ಕೆ ಮುಗಿಸಬಹುದಾದಂತಹ ಶಕ್ತಿಯನ್ನು ಕೂಡ ಹೊಂದಿರುತ್ತದೆ. ಹೀಗಾಗಿ ತಪ್ಪದೇ ನಿಮ್ಮ ಸಂಸಾರದಲ್ಲಿ ನಿಮ್ಮ ಹೆಂಡತಿಗೆ ಪ್ರಾಮಾಣಿಕರಾಗಿರಿ ಹಾಗೂ ನಿಮ್ಮ ಜೀವನದಲ್ಲಿ ನಡೆಯುವಂತಹ ಎಲ್ಲಾ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರಿ.

ಆಸೆಗಳನ್ನು ಪೂರೈಸುವುದು; ಯಾವಾಗ ನಿಮ್ಮ ಹೆಂಡತಿ ಕೆಲವೊಂದು ಆಸೆಗಳ ಕುರಿತಂತೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೋ ಆಗ ಅದರ ಕುರಿತಂತೆ ನೀವು ನಿರ್ಲಕ್ಷ್ಯವನ್ನು ತೋರಬಾರದು. ಅದನ್ನು ಪೂರೈಸುವ ಪ್ರಯತ್ನವಾದರೂ ಮಾಡಲೇಬೇಕಾಗುತ್ತದೆ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಸಿಹಿ ಹೆಚ್ಚಾಗುತ್ತದೆ. ಹೀಗಾಗಿ ಯಾವತ್ತೂ ಕೂಡ ನಿಮ್ಮ ಸಂಗಾತಿಯ ಮಾತಿನ ಕುರಿತಂತೆ ನಿರ್ಲಕ್ಷವನ್ನು ತೋರುವುದನ್ನು ಮಾಡಬಾರದು. ನಿಮ್ಮ ಸಂಗಾತಿ ನಿಮ್ಮ ಜೀವನದಲ್ಲಿ ಎಷ್ಟು ಸಂತೋಷವಾಗಿರುತ್ತಾರೋ ಅಷ್ಟೇ ಸಂತೋಷ ನಿಮ್ಮ ದಾಂಪತ್ಯ ಜೀವನ ನಿಮಗೆ ನೀಡಲಿದೆ. ನಿಮ್ಮ ದಾಂಪತ್ಯ ಜೀವನದ ಕಾಲದವರೆಗೆ ನಡೆಯಬೇಕೆಂದರೆ ಈ ಕ್ರಮ ವನ್ನು ಕೂಡ ನೀವು ಅನುಸರಿಸಬೇಕಾಗುತ್ತದೆ.
ಸಂಬಂಧಕ್ಕೆ ಸಮಯ ನೀಡುವುದು; ಸಾಮಾನ್ಯವಾಗಿ ನಾವು ಈ ಓಡಾಟದ ದುನಿಯಾದಲ್ಲಿ ಹಣ ಗಳಿಸುವುದರ ಕುರಿತಂತೆ ಹೆಚ್ಚಾಗಿ ತಲೆಯನ್ನು ಕಳಿಸುತ್ತೇವೆ ಈ ಸಂದರ್ಭದಲ್ಲಿ ಕುಟುಂಬವನ್ನು ಮರೆತುಬಿಡುತ್ತೇವೆ. ನಿಮ್ಮ ಸಂಗಾತಿಯನ್ನು ಆಗಾಗ ವಿಶೇಷ ಸ್ಥಳಗಳಿಗೆ ಹೊರಗಡೆ ಕರೆದುಕೊಂಡು ಹೋಗುವುದನ್ನು ಮಾಡಿ. ಆಗ ನಿಮ್ಮ ಕುರಿತಂತೆ ಕೂಡ ಅವರಲ್ಲಿ ವಿಶೇಷ ಫೀಲಿಂಗ್ ಮೂಡಿಬರುತ್ತದೆ. ಇದು ಸಾಂಸಾರಿಕ ಜೀವನದಲ್ಲಿ ದೀರ್ಘಕಾಲದ ಸಿಹಿಯನ್ನು ಉಂಟುಮಾಡುತ್ತದೆ.
ಒಂದು ವೇಳೆ ನೀವು ನಿಮ್ಮ ಸಂಗಾತಿಗೆ ಸಮಯವನ್ನು ನೀಡದೆ ಅವರ ಕಷ್ಟ ಸುಖಗಳಿಗೆ ಧ್ವನಿಯಾಗದೆ ಇದ್ದರೆ ಅವರಿಗೆ ನಿಮ್ಮಿಂದ ಯಾವುದೇ ನಿರೀಕ್ಷೆಗಳು ಇರುವುದಿಲ್ಲ ಹಾಗೂ ನಿಮ್ಮ ಕುರಿತಂತೆ ಪ್ರೀತಿ ಗೌರವಗಳು ಅವರಲ್ಲಿ ಕಡಿಮೆಯಾಗುತ್ತದೆ. ದಾಂಪತ್ಯ ಜೀವನದಲ್ಲಿ ಹೀಗೆ ಆಗುವುದು ವಿವಾಹ ವಿಚ್ಛೇದನಕ್ಕೆ ದಾರಿಯಾಗುತ್ತದೆ. ಹೀಗಾಗಿ ಈ ಕುರಿತಂತೆ ಗಮನ ವಹಿಸಬೇಕಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.