ಸೋಲಿನ ಮೇಲೆ ಸೋಲಿನ ರುಚಿ ನೋಡುತ್ತಿರುವ ಚೆನ್ನೈ ತಂಡ ಇನ್ನು ಪ್ಲೇ ಆಫ್ ಗೆ ತಲುಪುವ ಅವಕಾಶ ಇದೆಯಾ?? ಲೆಕ್ಕಾಚಾರಗಳೇನು ಗೊತ್ತೇ??

28

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಸಾಕಷ್ಟು ವಿಚಿತ್ರ ಹಾಗೂ ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈಗಾಗಲೇ ಈ ಬಾರಿಯ ಐಪಿಎಲ್ ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೆಯ 2 ಸ್ಥಾನ ಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಅದರಲ್ಲೂ ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವಂತೂ ಈ ಬಾರಿ ಐದು ಸೋಲು ಹಾಗೂ ಒಂದು ಗೆಲುವಿನಿಂದ ಕಂಗೆಟ್ಟಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದಿರುವುದು ಹಾಗೂ ಡುಪ್ಲೆಸಿಸ್ ಮತ್ತು ಶಾರ್ದುಲ್ ಠಾಕೂರ್ ಬೇರೆ ತಂಡಗಳಿಗೆ ಹೋಗಿರುವುದು.

ಮತ್ತು ಈ ಬಾರಿಯ ಐಪಿಎಲ್ ಗೆ ತಂಡದ ಪ್ರಮುಖ ಆಟಗಾರ ಹಾಗೂ ಬೌಲರ್ ಆಗಿರುವ ದೀಪಕ್ ಚಹಾರ್ ಅಲಭ್ಯವಾಗಿರುವುದು. ಈ ಎಲ್ಲಾ ಸಮಸ್ಯೆಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಈ ಬಾರಿ ಅತ್ಯಂತ ವೀಕ್ ತಂಡವಾಗಿ ಕಾಣಿಸುವಂತೆ ಮಾಡಿದೆ. ಈಗಾಗಲೇ ಬಹುತೇಕ ಆಡಿದ ಎಲ್ಲಾ ಪಂದ್ಯಗಳನ್ನು ನೀರಸ ಪ್ರದರ್ಶನದ ಮೂಲಕ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಪ್ಲೇ ಆಫ್ ಗೆ ತೇರ್ಗಡೆ ಯಾಗುವ ಎಲ್ಲಾ ಕನಸನ್ನು ನುಚ್ಚುನೂರು ಮಾಡಿಕೊಂಡಿದೆ ಎಂದರೆ ತಪ್ಪಾಗಲಾರದು. ಆದರೂ ಕೂಡ ಪ್ಲೇಆಫ್ ಗೆ ತೇರ್ಗಡೆಯಾಗುವ ಚಾನ್ಸ್ ಇದೆ ಎಂಬುದಾಗಿ ಕೆಲವೊಂದು ಸ್ಟಾಟ್ ಗಳು ಹೇಳುತ್ತಿವೆ.

ಅದೇನೆಂದರೆ ಸಾಮಾನ್ಯವಾಗಿ ಪ್ಲೇಆಫ್ ಗೆ ತೇರ್ಗಡೆ ಆಗುವ ಮೊದಲ ಎರಡು ತಂಡಗಳು ಎಂಟರಿಂದ ಒಂಬತ್ತು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿರಬೇಕಾಗುತ್ತದೆ. ಇನ್ನು ತೇರ್ಗಡೆ ಯಾಗುವ 3 ಹಾಗೂ 4ನೇ ತಂಡಗಳು ಕನಿಷ್ಠಪಕ್ಷ ಆರರಿಂದ ಏಳು ಪಂದ್ಯಗಳನ್ನಾದರೂ ಗೆಲ್ಲಲೇಬೇಕಾಗಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆಲ್ಲಲೇಬೇಕಾಗಿದೆ ಹಾಗೂ ಆಡುವ ಎಲ್ಲಾ ಪಂದ್ಯಗಳನ್ನು ಕೂಡ ಒಳ್ಳೆಯ ರನ್ ರೇಟ್ ಮೂಲಕ ಗೆಲ್ಲ ಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಈಗಿರುವ ಕಾಂಪಿಟೇಶನ್ ನೋಡಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದು ಅಸಾಧ್ಯವೇ ಸರಿ ಎಂದು ಹೇಳಬಹುದಾಗಿದೆ. ಯಾಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ವಿಭಾಗ ಕ್ಕಿಂತ ಬೌಲಿಂಗ್ ವಿಭಾಗ ತುಂಬಾ ಕಳಪೆ ಮಟ್ಟದ್ದಾಗಿದೆ ಎಂದು ಹೇಳಬಹುದಾಗಿದೆ. ಈ ಪ್ರಕಾರ ನೋಡುವುದಾದರೆ 90% ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ವಾಲಿಫೈಯರ್ ಗೆ ಹೋಗುವುದು ಅನುಮಾನವೇ ಸರಿ.