ನಿರೂಪಕಿಯಾಗಿ ಯಶಸ್ಸು ಗಳಿಸಿರುವುದಷ್ಟೇ ಅಲ್ಲಾ, ಚೈತ್ರ ವಾಸುದೇವನ್ ಯಶಸ್ವಿ ಉದ್ಯಮಿ ಕೂಡ. ನಡೆಸುತ್ತಿರುವ ಉದ್ಯಮ ಯಾವುದು ಗೊತ್ತೇ?? ಎಷ್ಟೆಲ್ಲಾ ಜನಪ್ರಿಯತೆ ಹೊಂದಿದೆ ಗೊತ್ತೇ??

16

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಜನರ ಕಣ್ಣಿಗೆ ಕೇವಲ ಸಿನಿಮಾ ಮಂದಿ ಮಾತ್ರ ಕಾಣಿಸುತ್ತಿದ್ದರು. ಹಾಗೂ ಅವರ ಕುರಿತಂತೆ ಜನಪ್ರಿಯತೆ ಹಾಗೂ ಕುತೂಹಲ ಸಾಮಾನ್ಯ ಜನರಲ್ಲಿ ಹೆಚ್ಚಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಕಲಾವಿದರು ಹಾಗೂ ಸೆಲೆಬ್ರಿಟಿಗಳನ್ನು ಕೂಡ ಜನರು ಗುರುತಿಸುತ್ತಾರೆ ಹಾಗೂ ಅವರ ಜನಪ್ರಿಯತೆ ಹೆಚ್ಚಾಗುವಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಜನರ ಪಾತ್ರ ಹೆಚ್ಚಾಗಿದೆ. ನೀನು ನಿರೂಪಕಿ ಚೈತ್ರ ವಾಸುದೇವನ್ ಅವರ ಕುರಿತಂತೆ ನಿಮಗೆ ಗೊತ್ತಿರಬಹುದು. ಹೆಸರಿನಿಂದ ಇವರು ತಮಿಳುನಾಡಿನವರು ಇರಬಹುದು ಎನ್ನುವುದಾಗಿ ನಿಮಗೆ ಅನಿಸುತ್ತದೆ. ಆದರೆ ಇವರು ಪಕ್ಕಾ ಕುಂದಾಪುರದ ಹುಡುಗಿ.

ಇನ್ನು ಇವರನ್ನು ನೀವು ಸುದ್ದಿವಾಹಿನಿಗಳಲ್ಲಿ ಹಾಗೂ ಬಿಗ್ ಬಾಸ್ ನಲ್ಲಿ ಕಂಡಿರಬಹುದು. ಚಿಕ್ಕವಯಸ್ಸಿನಿಂದಲೂ ಕೂಡ ಸಾಕಷ್ಟು ಸ್ವಾವಲಂಬಿಯಾಗಿರುವ ಚೈತ್ರ ವಾಸುದೇವನ್ ರವರು ಬಿಗ್ ಬಾಸ್ ಮನೆಯಲ್ಲಿ ಕೂಡ ಹಠವಾದಿ ಆಗಿ ಕಂಡುಬಂದಿದ್ದು ನಿಮಗೆ ಕಾಣಿಸಿರಬಹುದು. ಚೈತ್ರ ವಾಸುದೇವನ್ ಅವರನ್ನು ನೋಡಿದರೆ ಖಂಡಿತವಾಗಿ ನಿಮಗೆ ಅವರು ಮದುವೆಯಾಗಿದ್ದಾರೆ ಎಂದು ಅನಿಸುವುದು ಕಷ್ಟವೇ ಸರಿ. ಹೌದು ಅವರು ಮದುವೆಯಾಗಿದ್ದಾರೆ. ಸತ್ಯ ಎನ್ನುವವರನ್ನು ಪ್ರೀತಿಸಿ 2017 ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದಾರೆ. ಹಲವಾರು ಪ್ರತಿಷ್ಠಿತ ಸಿನಿಮಾ ಅವಾರ್ಡ್ ಗಳನ್ನು ನಿರೂಪಣೆ ಮಾಡಿರುವ ಚೈತ್ರ ವಾಸುದೇವನ್ ರವರು ಒಬ್ಬ ಯಶಸ್ವಿ ಉದ್ಯಮಿ ಕೂಡ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಅವರು ಯಾವ ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ನೀವು ಯೋಚಿಸಬಹುದು.

ಹೌದು ಗೆಳೆಯರೇ ಚೈತ್ರ ವಾಸುದೇವನ್ ಅವರು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೇವಲ ಭಾರತ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದ ಇವೆಂಟ್ ಮ್ಯಾನೇಜ್ಮೆಂಟ್ ಕೂಡ ಚೈತ್ರ ವಾಸುದೇವನ್ ಅವರಿಗೆ ನೀರು ಕುಡಿದಷ್ಟೇ ಸುಲಭವಾಗಿದೆ. ಇನ್ನು ಗಂಡ ಕೂಡ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಚೈತ್ರ ವಾಸುದೇವನ್ ರವರಿಗೆ ಬೆಂಬಲವಾಗಿ ನಿಂತಿದ್ದಾರೆ. ಚೈತ್ರ ವಾಸುದೇವನ್ ರವರ ಅತ್ತೆ ಮಾವ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಇನ್ನು ಚೈತ್ರ ವಾಸುದೇವನ್ ರವರ ತಂದೆ ಕೂಡ ಹೋಟೆಲ್ ಉದ್ಯಮಿಯಾಗಿದ್ದಾರೆ. ಒಟ್ಟಾರೆಯಾಗಿ ಉದ್ಯಮದ ಪರಿಸರದಲ್ಲಿ ಬೆಳೆದಿರುವ ಕ್ಷೇತ್ರ ವಾಸುದೇವನ್ ರವರಿಗೆ ಎಂತಹುದೇ ಕ್ಲಿಷ್ಟಕರ ಪರಿಸ್ಥಿತಿಯನ್ನು ಉದ್ಯಮದಲ್ಲಿ ಎದುರಿಸುವಂತಹ ಚಾಕಚಕ್ಯತೆ ಇದೆ. ಈಗಾಗಲೇ ಹಲವಾರು ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸುವಂತಹ ಉದ್ಯೋಗವನ್ನು ನೀಡಿದ್ದಾರೆ. ನಿಜಕ್ಕೂ ಕೂಡ ಚೈತ್ರ ವಾಸುದೇವನ್ ಅವರ ಹಿಸ್ಟರಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ನೀಡುವಂಥದ್ದು.