ಒಂದು ಕೈ ಇಲ್ಲದೆ ಇದ್ದರೂ ಅದ್ಬುತ ಡಾನ್ಸ್ ಮಾಡಿ ಡಾನ್ಸ್ ಕರ್ನಾಟಕ ಡಾನ್ಸ್ ಗೆ ಆಯ್ಕೆಯಾಗಿರುವ ಋಷಿಕೇಶ ಅವರ ಸಂಪೂರ್ಣ ಹಿನ್ನೆಲೆ ಏನು ಗೊತ್ತೇ??

67

ನಮಸ್ಕಾರ ಸ್ನೇಹಿತರೇ ಮೊದಲಿನಿಂದಲೂ ಕೂಡ ಕಿರುತೆರೆ ವಾಹಿನಿ ಕೇವಲ ಧಾರಾವಾಹಿಗಳಿಗಾಗಿ ಮಾತ್ರವಲ್ಲದೆ ವಿಶೇಷವಾದ ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಕೂಡ ಪ್ರಸಿದ್ಧಿಯಾಗಿದೆ. ಕಿರುತೆರೆ ವಾಹಿನಿಗಳು ನಡೆಸುವಂತಹ ಹಲವಾರು ಕಾರ್ಯಕ್ರಮಗಳಿಂದಾಗಿ ಇದುವರೆಗೂ ಹಲವಾರು ಪ್ರತಿಭೆಗಳು ಕರ್ನಾಟಕದ ಮೂಲೆ ಮೂಲೆಯಿಂದಲೂ ಕೂಡ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ಎಲ್ಲರ ಮೆಚ್ಚಿನ ರಿಯಾಲಿಟಿ ಶೋ ಎಂದರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಹೊಸ ಸೀಸನ್ ಪ್ರಾರಂಭವಾಗಿದ್ದು ಕರುನಾಡ ಚಕ್ರವರ್ತಿ ಶಿವಣ್ಣನವರು ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಈಗಾಗಲೇ ಆಯ್ಕೆ ಪ್ರಕ್ರಿಯೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಕಳೆದ ವಾರದಲ್ಲಿ ನಡೆದುಹೋಗಿದೆ. ಇದರಲ್ಲಿ ಈಗ ಒಬ್ಬ ಪ್ರತಿಭೆ ವೇದಿಕೆಯಲ್ಲಿ ಸಿಕ್ಕಿದ್ದು ಎಲ್ಲರೂ ಕೂಡ ಈತನ ಕುರಿತಂತೆ ಹೆಮ್ಮೆಪಡುವಂತಾಗಿದೆ. ಹೌದು ನಾವು ಮಾತನಾಡುತ್ತಿರುವುದು ಬಳ್ಳಾರಿ ಮೂಲದ ಋಷಿಕೇಶ ಎನ್ನುವ ಯುವಕನ ಕುರಿತಂತೆ. ಪ್ರತಿಭೆ ಹಾಗೂ ಅದನ್ನು ಸಾಧಿಸಿ ತೋರುವಂತಹ ಛಲ ಮನಸ್ಸಿನಲ್ಲಿದ್ದರೆ ಯಾವ ನ್ಯೂನ್ಯತೆಯು ಕೂಡ ಅಡ್ಡಿ ಬರಲಾರದು ಎನ್ನುವುದನ್ನು ಋಷಿಕೇಶ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಸಾಬೀತುಪಡಿಸಿದ್ದಾನೆ.

ಬಹುತೇಕ ಎಲ್ಲಾ ಪ್ರತಿಭೆಗಳು ಪ್ರತಿಭೆ ಇದ್ದರೂ ಕೂಡ ಅದನ್ನು ಸಾಬೀತುಪಡಿಸುವಂತಹ ಉತ್ತಮ ವೇದಿಕೆ ಸಿಗುತ್ತಿರಲಿಲ್ಲ. ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಇದಕ್ಕೊಂದು ಸರಿಯಾದ ವೇದಿಕೆಯಾಗಿತ್ತು ಎಂದರೆ ತಪ್ಪಾಗಲಾರದು. ಬಳ್ಳಾರಿ ಮೂಲದವರಾಗಿದ್ದ ಋಷಿಕೇಶ್ ಕೇವಲ ಒಂದು ಕೈಯನ್ನು ಮಾತ್ರ ಹೊಂದಿದ್ದು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಬಡತನದಲ್ಲಿ ಜೀವನ ಸಾಗಿಸಿಕೊಂಡು ಬಂದಿದ್ದರೂ ಕೂಡ ಅವರ ಪ್ರತಿಭೆಗೆ ಅದು ಅಡ್ಡಿಯಾಗಿರಲಿಲ್ಲ. ಇನ್ನು ಕೆಲಸಕ್ಕೆ ಅಲೆಯುತ್ತಿದ್ದಾಗ ಅವರಿಗೆ ಅವರ ತಾಯಿ ಸ್ಪೂರ್ತಿಯಾಗಿ ನಿಂತಿದ್ದು ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಬರುವುದಕ್ಕೆ ಕೂಡ ಅವರ ಸ್ಫೂರ್ತಿಯಾಗಿದ್ದಾರೆ. ಕೈಕಾಲು ಸರಿ ಇದ್ದವರು ಕೂಡ ಮಾಡಲಾಗದಂತಹ ನೃತ್ಯ ಪ್ರದರ್ಶನವನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೇಲೆ ಅವರು ಪ್ರದರ್ಶಿಸಿದ್ದರು. ಇದಕ್ಕೆ ಶಿವಣ್ಣ ಕೂಡ ತಲೆಬಾಗಿ ಚಪ್ಪಾಳೆ ತಟ್ಟಿದ್ದರು. ಮುಂದಿನ ದಿನಗಳಲ್ಲಿ ಋಷಿಕೇಶ ರವರಿಂದ ಯಾವ ಮಟ್ಟದ ಡ್ಯಾನ್ಸ್ ಪರ್ಫಾರ್ಮೆನ್ಸ್ ಕಾಣೋದಕ್ಕೆ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.