ರೋಹಿತ್ ಶರ್ಮಾ ಬದಲು ಈತನಿಗೆ ನಾಯಕತ್ವ ನೀಡಿ ಎಂದ ಸಂಜಯ್ ಮಂಜ್ರೇಕರ್, ಯಾರು ಮತ್ತೆ ಯಾಕೆ ಅಂತೇ ಗೊತ್ತೇ??

26

ನಮಸ್ಕಾರ ಸ್ನೇಹಿತರೇ ಐಪಿಎಲ್ ಎಂದರೇ ಕ್ರಿಕೇಟಿಗರ ಪಾಲಿಗೆ ಹಾವು-ಏಣಿ ಆಟ. ಉತ್ತಮ ಪ್ರದರ್ಶನ ನೀಡಿದರೇ ಆತ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ.ಆದರೇ ಕಳಪೆ ಪ್ರದರ್ಶನ ನೀಡಿದರೇ, ತಂಡದಿಂದಲೇ ಗೇಟ್ ಪಾಸ್ ಸಿಗುತ್ತದೆ. ಜೊತೆಗೆ ಟೀಕಾಕಾರರು ಸಹ ಅಂತಹ ಆಟಗಾರರ ಮೇಲೆ ಮುಗಿಬೀಳುತ್ತಾರೆ. ಇದಕ್ಕೆ ಪಕ್ಕಾ ಉದಾಹರಣೆ ಎಂದರೇ ಅದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ.

ಹೌದು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಭಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವೆಂದರೇ ಅದು ಮುಂಬೈ ಇಂಡಿಯನ್ಸ್. ರೋಹಿತ್ ಶರ್ಮಾ ನಾಯಕತ್ವದಲ್ಲಿಯೇ ಐದು ಭಾರಿ ಚಾಂಪಿಯನ್ ಆಗಿದೆ. ಆದರೇ 2022ರ ಐಪಿಎಲ್ ಅದಕ್ಕೆ ತದ್ವಿರುದ್ಧವಾಗಿದೆ. ಆಡಿರುವ ಐದು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಕೊಂಚವೂ ಪ್ರತಿರೋಧ ತೋರದೇ ಸೋಲೊಪ್ಪಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅದು ರೋಹಿತ್ ಶರ್ಮಾರವರ ನಾಯಕತ್ವ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಬೆಂಕಿಯ ಮಳೆ ಸುರಿಸಿದ್ದಾರೆ.

ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಿದ್ದಾಗ ಸೋಲಿಲ್ಲದ ಸರದಾರ ರಾಗಿದ್ದರು. ಆದರೇ ಮುಂಬೈ ತಂಡದ ನಾಯಕತ್ವ ವಹಿಸಿದ ನಂತರ ಸೋಲಿನ ನಾಯಕರಾಗಿದ್ದರೆ. ತಂಡ ಪದೇ ಪದೇ ಎಡವುತ್ತಿರುವ ವಿಭಾಗವನ್ನು ಸರಿಪಡಿಸಲು ಗಮನಹರಿಸುತ್ತಿಲ್ಲ. ತಂಡದ ಬೆಂಚ್ ನಲ್ಲಿ ಉತ್ತಮ ಆಟಗಾರದಿದ್ದರು ಗೆಲ್ಲುವ ಹನ್ನೊಂದು ಆಟಗಾರರ ತಂಡವನ್ನು ಆರಿಸುವುದು ಕಷ್ಟವಾಗಿದೆ. ನಾಯಕನಾಗಿ ಜವಾಬ್ದಾರಿಯಿಂದ ಕೊನೆತನಕ ಬ್ಯಾಟಿಂಗ್ ಮಾಡುತ್ತಿಲ್ಲ. ಬೌಲಿಂಗ್ ಬದಲಾವಣೆ ಸಹ ಅಷ್ಟಕಷ್ಟೆ. ಹಾಗಾಗಿ ರೋಹಿತ್ ಶರ್ಮಾ ರವರನ್ನು ನಾಯಕತ್ವದ ಪಟ್ಟದಿಂದ ಕೆಳಗಿಳಿಸಿ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಅವರ ಬದಲು ವೆಸ್ಟ್ ಇಂಡೀಸ್ ನ ಕೀರನ್ ಪೋಲಾರ್ಡ್ ರವರಿಗೆ ನಾಯಕ ಪಟ್ಟ ನೀಡಬೇಕು ಎಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವಾರು ವರ್ಷಗಳಿಂದ ಇರುವ ಕೀರನ್ ಪೋಲಾರ್ಡ್ ನಾಯಕರಾದರೇ ತಂಡ ಮತ್ತೆ ಗೆಲುವಿನ ಹಾದಿಗೆ ಮರಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.