ತಮ್ಮ ಸಹೋದರಿಯನ್ನು ಕಳೆದುಕೊಂಡ ದುಃಖದಲ್ಲಿ ಭಾವುಕರಾಗಿ ಹರ್ಷಲ್ ಪಟೇಲ್ ರವರು ಬರೆದ ಪತ್ರದಲ್ಲಿ ಏನಿದೆ ಗೊತ್ತಾ??

32

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಆಗಿರುವ ಹರ್ಷಲ್ ಪಟೇಲ್ರವರ ಸಹೋದರಿ ಅಕಾಲಿಕವಾಗಿ ಮರಣವನ್ನು ಹೊಂದಿದರು. ಎಲ್ಲರೂ ಹರ್ಷಲ್ ಪಟೇಲ್ ರವರು ಇನ್ನು ಮುಂದೆ ಈ ಬಾರಿಯ ಸೀಸನ್ ನಲ್ಲಿ ತಂಡದ ಪರವಾಗಿ ಆಡುವುದು ಅನುಮಾನ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಆಶ್ಚರ್ಯವೆಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಡಿತ್ತು.

ಈ ಸಂದರ್ಭದಲ್ಲಿ ತಂಡದಲ್ಲಿ ಹರ್ಷಲ್ ಪಟೇಲ್ ಅವರು ಕೂಡ ಆಡಿದ್ದರು. ನಿಜಕ್ಕೂ ಕೂಡ ತಂಡದ ಬಗೆಗಾಗಿ ಇರುವಂತಹ ಅವರ ನಿಷ್ಠೆ ಹಾಗೂ ಪ್ರಾಮಾಣಿಕತೆ ನಿಜಕ್ಕೂ ಕೂಡ ಪ್ರಶಂಸಾರ್ಹವಾಗಿದೆ. ತಮ್ಮ ಒಡಹುಟ್ಟಿದ ಸಹೋದರಿಯನ್ನು ಕಳೆದುಕೊಂಡಿರುವ ದುಃಖ ಅವರ ಮನಸ್ಸಿನಲ್ಲಿದ್ದರೂ ಕೂಡ ತಂಡಕ್ಕಾಗಿ ತಾನು ಇರಲೇಬೇಕೆನ್ನುವ ಅವರ ನಿಷ್ಠೆ ಇಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ತಮ್ಮ ಸಹೋದರಿಯ ಕುರಿತಂತೆ ಭಾವನಾತ್ಮಕವಾಗಿ ಪತ್ರವನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲರ ಕಣ್ಣಿನಲ್ಲಿ ಹನಿ ನೀರು ಜಿನುಗುವಂತೆ ಮಾಡಿದೆ. ಅಷ್ಟಕ್ಕೂ ಅವರು ಈ ಪತ್ರದಲ್ಲಿ ಏನೆಲ್ಲ ಬರೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ತಮ್ಮ ಸಹೋದರಿಯನ್ನು ನೆನಪಿಸಿಕೊಳ್ಳುತ್ತಾ ಪಟೇಲ್ ರವರು, ನೀನು ನನ್ನ ಜೀವನದ ಅತ್ಯಂತ ಕರುಣಾಮಯಿ ವ್ಯಕ್ತಿಯಾಗಿದ್ದೆ. ಆಸ್ಪತ್ರೆಯಲ್ಲಿದ್ದಾಗ ನನ್ನ ಬಗ್ಗೆ ಚಿಂತಿಸಬೇಡ ನಿನ್ನ ಆಟದ ಬಗ್ಗೆ ಗಮನ ಇರಲಿ ಎಂಬುದಾಗಿ ನೀನು ಹೇಳಿದೆ ಮಾತೆ ನಿನ್ನನ್ನು ಕಳೆದುಕೊಂಡ ನಂತರವೂ ಕೂಡ ಮತ್ತೊಮ್ಮೆ ಮೈದಾನಕ್ಕೆ ಇಳಿಯಲು ನನಗೆ ಸ್ಫೂರ್ತಿಯಾಗಿದ್ದು. ಇನ್ನೇನಿದ್ದರೂ ನಾನು ನಿನ್ನನ್ನು ನೆನಪಿಸಿಕೊಳ್ಳಬಹುದು ಅಷ್ಟೇ. ಆದರೆ ನಿನ್ನ ಆಸೆ ಆಗಿರುವ ಕ್ರಿಕೆಟ್ನಲ್ಲಿ ನಾನು ನೀನು ಹೆಮ್ಮೆಪಡುವಂತಹ ಸಾಧನೆ ಮಾಡಲು ಎಲ್ಲಾ ಪ್ರಯತ್ನವನ್ನು ಕೊಡುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ನನ್ನ ಕೊನೆ ಉಸಿರು ತನಕ ನಿನ್ನನ್ನು ನೆನಪಿಸಿಕೊಳ್ಳುತ್ತೇನೆ ಎಂಬುದಾಗಿ ಭಾವುಕರಾಗಿ ಹೇಳಿಕೊಂಡಿದ್ದಾರೆ. ಹರ್ಷಲ್ ಪಟೇಲ್ ರವರಿಗೆ ಈ ನಷ್ಟವನ್ನು ತುಂಬುವಂತಹ ಶಕ್ತಿ ಆ ದೇವರು ನೀಡಲಿ ಎಂಬುದಾಗಿ ಆಶಿಸೋಣ.