ಡೆಲ್ಲಿ ತಂಡದಲ್ಲಿ ಮತ್ತೊಬ್ಬರಿಗೆ ವಕ್ಕರಿಸಿದ ಕೊರೊನ. ಯಾವ ಆಟಗಾರನಿಗೆ ಗೊತ್ತೇ?? ಅರ್ಥಕ್ಕೆ ನಿಲ್ಲುತ್ತಾ ಐಪಿಎಲ್?? ನಿಯಮ ಟೂರ್ನಿ ನಿಲ್ಲಿಸುವ ಕುರಿತು ಏನು ಹೇಳುತ್ತದೆ ಗೊತ್ತೇ??

17

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿಯ ಟಾಟಾ ಐಪಿಎಲ್ 2022 ಅದ್ದೂರಿಯಾಗಿ ಸಾಗಿ ಬರುತ್ತಿದೆ. ಅದರಲ್ಲೂ ನಮ್ಮೆಲ್ಲರ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದೆ. ಹೀಗಾಗಿ ಈ ಬಾರಿಯ ಐಪಿಎಲ್ ನಿರಾತಂಕವಾಗಿ ಸಾಗಿಬಂದು ನಮ್ಮ ನೆಚ್ಚಿನ ತಂಡ ಕಪ್ಪು ಗೆಲ್ಲಲಿ ಎನ್ನುವುದಾಗಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇನ್ನು ಎಲ್ಲಾ ಚೆನ್ನಾಗಿ ಸಾಗಿ ಬರುತ್ತಿದೆ ಎಂದು ಅಂದುಕೊಳ್ಳುವಷ್ಟರಲ್ಲಿ ಡೆಲ್ಲಿ ತಂಡದ ಆಟಗಾರನೊಬ್ಬ ಈಗಾಗಲೇ ಮಹಾಮಾರಿಗೆ ಪಾಸಿಟಿವ್ ಆಗಿದ್ದಾನೆ ಎನ್ನುವುದಾಗಿ ತಿಳಿದುಬಂದಿದೆ. ನಿಜವಾಗಿಯೂ ಕೂಡ ಇದೊಂದು ಶಾ’ಕಿಂಗ್ ವಿಚಾರವಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಆಟಗಾರರ ಸುರಕ್ಷತೆಗಾಗಿ ಬಿಸಿಸಿಐ ಹಾಗೂ ಐಪಿಎಲ್ ಕಮಿಟಿ ಎಷ್ಟೊಂದು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಇಷ್ಟಾದರೂ ಕೂಡ ಮತ್ತೊಮ್ಮೆ ಈ ಬಾರಿಯ ಐಪಿಎಲ್ ಗೆ ಮಹಾಮಾರಿ ವಕ್ಕರಿಸಿದೆ ಎನ್ನುವುದು ವಿಷಾದನೀಯ ವಿಚಾರವಾಗಿದೆ ಎಂದರೆ ತಪ್ಪಾಗಲಾರದು.

ಹೌದು ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಆಗಿದ್ದ ಪ್ಯಾಟ್ರಿಕ್ ರವರಿಗೆ ಪಾಸಿಟಿವ್ ಬಂದಿದ್ದು ನಂತರ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತೊಬ್ಬ ಆಟಗಾರನಿಗೂ ಕೂಡ ಪಾಸಿಟಿವ್ ಬಂದಿದೆ ಎಂಬುದಾಗಿ ತಿಳಿದುಬಂದಿದೆ. ಇದು ನಿಜಕ್ಕೂ ಕೂಡ ಈ ಬಾರಿ ಐಪಿಎಲ್ಗೆ ಕೆಟ್ಟ ಸುದ್ದಿ ಎಂಬುದಾಗಿ ಹೇಳಬಹುದಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಸಿಸಿಐ ಎಲ್ಲರೂ ಆರೋಗ್ಯದಿಂದ ಸುರಕ್ಷಿತವಾಗಿರಬೇಕು ಎನ್ನುವ ಕಾರಣಕ್ಕಾಗಿ ಬಯೋ ಬಬಲ್ ಸೇರಿದಂತೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ವಿಧಿಸಿತ್ತು.

ಇದರ ನಡುವೆ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಪಾಸಿಟಿವ್ ಬಂದಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇರುವಂತಹ ಎಲ್ಲಾ ಆಟಗಾರರನ್ನು ಕೂಡ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು ಮತ್ತಷ್ಟು ನಿಯಮಗಳನ್ನು ಬಿಗಿ ಮಾಡಲಾಗಿದೆ ಎನ್ನಲಾಗಿದೆ. ಅತಿ ಶೀಘ್ರದಲ್ಲಿ ಆರ್ ಪಿ ಟಿಸಿಆರ್ ಟೆಸ್ಟನ್ನು ಪ್ರತಿಯೊಬ್ಬ ಆಟಗಾರರ ಮೇಲೆ ಕೂಡ ನಡೆಯಲಿದ್ದು ಇನ್ನು ಯಾರೆಲ್ಲಾ ಪಾಸಿಟಿವ್ ಇದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಆಟಗಾರರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಅನ್ನು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರ ನಡೆಸಲಾಗಿತ್ತು. ಆದರೂ ಕೂಡ ಇಂತಹ ಫಲಿತಾಂಶ ಕಂಡು ಬಂದಿರುವುದು ನಿಜಕ್ಕೂ ಕೂಡ ಯಾವುದೂ ಕೂಡ ಸುರಕ್ಷಿತವಲ್ಲ ಎನ್ನುವ ಅಭಿಪ್ರಾಯವನ್ನು ನೀಡಿದೆ. ಏಪ್ರಿಲ್ 22ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಬೇಕಾಗಿತ್ತು. ಆದರೆ ಈಗ ಈ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪಂದ್ಯ ನಡೆಯುವುದು 99% ಅನುಮಾನವಾಗಿದೆ.

ಐಪಿಎಲ್ ನಿಯಮಾವಳಿಗಳ ಪ್ರಕಾರ ಒಂದು ವೇಳೆ ತಂಡದಲ್ಲಿ ಪೋಸಿಟಿವ್ ಆಗಿರುವವರ ಸಂಖ್ಯೆ ಹೆಚ್ಚಾಗಿ ತಂಡದಲ್ಲಿ ಉಳಿದವರು 12 ಆಟಗಾರರಿಗಿಂತ ಕಡಿಮೆ ಇದ್ದಾರೆ ಪಂದ್ಯವನ್ನು ರಿ ಶೆಡ್ಯೂಲ್ ಮಾಡಲಾಗುತ್ತದೆ. ಮರು ಪಂದ್ಯವನ್ನು ಮಾಡಲು ಸಾಧ್ಯವಾಗದಿದ್ದರೆ ಐಪಿಎಲ್ನ ತಾಂತ್ರಿಕ ತಂಡ ಬಂದಿದೆ ಕುರಿತಂತೆ ಅಧಿಕೃತ ನಿರ್ಧಾರವನ್ನು ಕೈಗೊಳ್ಳಲಿದೆ. ಈಗಾಗಲೇ ಭಾರತ ದೇಶದಲ್ಲಿ ಕೂಡ ಪಾಸಿಟಿವ್ ಹೊಂದಿರುವವರ ಸಂಖ್ಯೆ ವೇಗವನ್ನು ಹಿಡಿದಿದ್ದು ಹೆಚ್ಚಾಗುತ್ತಲೇ ಇದೆ. ಮತ್ತೊಮ್ಮೆ ಮಹಾಮಾರಿ ಅಲೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

ಕಳೆದ ಬಾರಿ ಕೂಡ ಮಹಾಮಾರಿಯ ಕಾರಣದಿಂದಾಗಿ ಐಪಿಎಲ್ ಟೂರ್ನಮೆಂಟ್ ಅರ್ಧಕ್ಕೆ ನಿಂತಿತ್ತು. ನಂತರ ಐಪಿಎಲ್ ನ ದ್ವಿತೀಯಾರ್ಧ ವನ್ನು ಯುಎಇನಲ್ಲಿ ಬಿಸಿಸಿಐ ಆಯೋಜಿಸಿತ್ತು. ಹಾಗೂ ಅದು ಯಶಸ್ವಿಯಾಗಿ ಸಮಾರೋಪಗೊಂಡಿತ್ತು. ಒಂದು ವೇಳೆ ಪ್ರಕರಣ ಹೆಚ್ಚಾದರೆ ಖಂಡಿತವಾಗಿ ಈ ಬಾರಿ ಕೂಡ ಐಪಿಎಲ್ ದುಬೈಗೆ ಶಿಫ್ಟ್ ಆಗೋದ್ರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.