ನಿಮಗಿಂತಲೂ ಬುಮ್ರಾ ಉತ್ತಮ ಬೌಲರ್ ಎಂದ ನೆಟ್ಟಿಗರಿಗೆ ಮಾಜಿ ಆಟಗಾರ ಡೇಲ್ ಸ್ಟೈನ್ ಕೊಟ್ಟ ಉತ್ತರ ಏನು ಗೊತ್ತೇ???

14

ನಮಸ್ಕಾರ ಸ್ನೇಹಿತರೇ ಡೇಲ್ ಸ್ಟೈನ್ ವಿಶ್ವ ಕಂಡ ಶ್ರೇಷ್ಠ ವೇಗದ ಬೌಲರ್. ಸೌತ್ ಆಫ್ರಿಕಾದ ಈ ಘಾತಕ ವೇಗಿ, ತನ್ನ ವೈಗ, ಲೈನ್ ಹಾಗೂ ಲೆಂಗ್ತ್ ಮೂಲಕ ಎದುರಾಳಿ ಬ್ಯಾಟ್ಸಮನ್ ಗಳಲ್ಲಿ ನಡುಕ ಹುಟ್ಟಿಸಿದ್ದರು. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಸ್ಟೇಯ್ನ್ ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆ ತಂಡದ ಸೂಪರ್ ಸ್ಪೀಡ್ ವೇಗಿ ಉಮ್ರಾನ್ ಮಲೀಕ್ ಗೆ ಯಶಸ್ವಿ ಟಿಪ್ಸ್ ಗಳನ್ನು ಸಹ ನೀಡುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಹ ಸದಾ ಆಕ್ಟೀವ್ ಆಗಿರುವ ಇವರು ಆಗಾಗ ಪೋಸ್ಟ್ ಗಳನ್ನು ಮಾಡುತ್ತಿರುತ್ತಾರೆ. ಇಂತಹದ್ದೇ ರೀತಿಯಲ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೀನು ಹಿಡಿದ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದರು.

ಅದಕ್ಕೆ ಹಲವಾರು ಜನ ಕಾಮೆಂಟ್ ಸಹ ಮಾಡಿದ್ದರು.ಈ ವೇಳೆ ಒಬ್ಬ ವ್ಯಕ್ತಿ ನಿಮಗಿಂತಲೂ ಭಾರತದ ವೇಗದ ಬೌಲರ್ ಜಸಪ್ರಿತ್ ಬುಮ್ರಾ ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದ. ಆದರೇ ಅನಿರೀಕ್ಷಿತ ಎಂಬಂತೆ ಆ ಕಾಮೆಂಟ್ ಗೆ ಡೇಲ್ ಸ್ಟೈನ್ ರಿಪ್ಲೈ ಮಾಡಿದ್ದು, ಆ ರಿಪ್ಲೈ ಕಾಮೆಂಟ್ ಈಗ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಡೇಲ್ ಸ್ಟೈನ್ ನೀಡಿದ ಉತ್ತರ ಹೀಗಿದೆ. “ಹೌದು ಜಸಪ್ರಿತ್ ಬುಮ್ರಾರವರೇ ಬೆಸ್ಟ್. ಏಕೆಂದರೇ ನಾನೀಗ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತನಾಗಿದ್ದೇನೆ” ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.