ಕೇವಲ 5 ಸಾವಿರ ಬಂಡವಾಳ ಹಾಕಿ ಲಕ್ಷ ಲಕ್ಷ ಗಳಿಸುವ ಉತ್ತಮ ಬಿಸಿನೆಸ್ ಯಾವುದು ಗೊತ್ತೇ? ತಜ್ಞರು ಆಯ್ಕೆ ಮಾಡಿರುವ ಉದ್ಯಮ ಯಾವುದು ಗೊತ್ತೇ??

29

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕಿಂತ ಹೆಚ್ಚಾಗಿ ಸ್ವಂತ ವ್ಯಾಪಾರ ಅಥವಾ ಕೃಷಿ ಸಣ್ಣ ಕೈಗಾರಿಕೆ ಗಳಂತಹ ಉದ್ಯಮಗಳು ಎಲ್ಲರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದರು ತಪ್ಪಾಗಲಾರದು. ಯಾಕೆಂದರೆ ಯಾವ ಪರಿಸ್ಥಿತಿಯಲ್ಲಿ ಏನಾಗಬಹುದು ಎನ್ನುವ ಅನಿಶ್ಚಿತತೆ ಎಲ್ಲರನ್ನು ಕಾಡುತ್ತಿದೆ. ಇನ್ನು ಕೃಷಿಯ ಕ್ಷೇತ್ರದಲ್ಲಿ ಅದರಲ್ಲೂ ಕೂಡ ಅಣಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಅಣಬೆ ಕೃಷಿಗೆ ಅದರ ಕುರಿತು ಉತ್ತಮ ಜ್ಞಾನ ಕೂಡ ತರಬೇತಿ ಕೂಡ ಬೇಕಾಗಿರುತ್ತದೆ. ಇನ್ನು ನೀವು ಇದನ್ನು ಕೇವಲ ಐದು ಸಾವಿರ ರೂಪಾಯಿಯಿಂದ ಪ್ರಾರಂಭಿಸಬಹುದಾಗಿದೆ.

ಸಾಮಾನ್ಯವಾಗಿ ಅಣಬೆ ಬೆಳೆಸಲು ಅಕ್ಟೋಬರ್ ನಿಂದ ಮಾರ್ಚ್ ತಿಂಗಳು ಉತ್ತಮ ಕಾಲವಾಗಿದೆ. ಯಾಕೆಂದರೆ ಬೇಸಿಗೆ ಕಾಲದಲ್ಲಿ ಅಣಬೆ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ತಾಪಮಾನ ಕಡಿಮೆ ಇರುವಂತೆ ಫಾರ್ಮ್ ಹೌಸ್ ಶೆಡ್ ಗಳನ್ನು ನಿರ್ಮಾಣ ಮಾಡಿದರೆ ಖಂಡಿತವಾಗಿ ವರ್ಷಪೂರ್ತಿ ಇದರ ಕೃಷಿಯನ್ನು ಮಾಡಬಹುದಾಗಿದೆ. ಅಣಬೆ ಬೀಜಗಳನ್ನು ಮಿಶ್ರಗೊಬ್ಬರ ದಲ್ಲಿ ಮೊಟ್ಟೆ ಇಡುವಿಕೆ ಮಾಡಿ ಮುಚ್ಚಿಡಲಾಗುತ್ತದೆ. ನಂತರ ಕೇವಲ 40ರಿಂದ 50 ದಿನಗಳ ಒಳಗೆ ಕಟಾವಿಗೆ ಸಿದ್ಧವಾಗಿರಲಿವೆ. ಇವುಗಳ ಬೆಳವಣಿಗೆಗೆ ತಾಪಮಾನವು ಕೂಡ 15 ರಿಂದ 22 ಡಿಗ್ರಿ ವರೆಗೆ ಇರಬೇಕಾಗುತ್ತದೆ. ಇವುಗಳ ಬೆಳವಣಿಗೆಗೆ ಮಿಶ್ರಗೊಬ್ಬರವನ್ನು ಬಳಸಿ ಆದರೆ ಹಳೆಯ ಅಣಬೆ ಬೀಜಗಳನ್ನು ಮಾತ್ರ ಉಪಯೋಗಿಸಬೇಡಿ. ಯಾಕೆಂದರೆ ತಾಜಾ ಅಣಬೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚು.

ಒಂದು ವೇಳೆ ನೀವು ಅಣಬೆ ಕೃಷಿಕ್ಷೇತ್ರದಲ್ಲಿ ದೊಡ್ಡಮಟ್ಟದ ಬೆಳೆ ಹಾಗೂ ಲಾಭವನ್ನು ಪಡೆಯುವ ಇಚ್ಚೆಯನ್ನು ಹೊಂದಿದ್ದರು ನೀವು ಕೃಷಿ ವಿಶ್ವವಿದ್ಯಾಲಯ ಅಥವಾ ಕೃಷಿ ಸಂಶೋಧನೆಯ ಕಾರ್ಯಾಲಯದಲ್ಲಿ ಅಣಬೆ ಕೃಷಿಯ ಕುರಿತಂತೆ ಆಳವಾದ ಅಧ್ಯಯನ ಮಾಡುವುದು ಉತ್ತಮ. ಈ ಕೃಷಿಯ ಕುರಿತಂತೆ ಉತ್ತಮ ಜ್ಞಾನವನ್ನು ಹೊಂದಿದ್ದರೆ ಇದರಿಂದ ಲಾಭದಾಯಕ ಇಳುವರಿಯನ್ನು ಸಾಧಿಸುವುದು ಸುಲಭವಾಗಿದೆ. ಇದಕ್ಕೆ ನೀವು ಹಾಕುವಂತಹ ಬಂಡವಾಳಕ್ಕಿಂತ ಹತ್ತು ಪಟ್ಟು ಅಧಿಕ ಲಾಭವನ್ನು ಸಂಪಾದಿಸಬಹುದಾಗಿದೆ. ಅಣಬೆ ಕೃಷಿಯ ಕುರಿತಂತೆ ಉತ್ತಮವಾದ ಜ್ಞಾನವನ್ನು ಹೊಂದಿದ್ದಾರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯುವುದು ಸುಲಭದ ಮಾತು