ಒಬ್ಬಳೇ ಇದ್ದ ವಿಧವೆ ಸೊಸೆಯನ್ನು ನೋಡಿ ಮಾವನ ಮನಸಿನಲ್ಲಿ ಇಲ್ಲ ಸಲ್ಲದ ಆಲೋಚನೆಗಳು, ನಂತರ ನಡೆದಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಒಬ್ಬ ಹೆಣ್ಣು ಮಗಳು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಅಲ್ಲಿ ಮಾವನೇ ನಿಜವಾದ ತಂದೆ ಆಗಿರುತ್ತಾನೆ. ಮಾವನು ಕೂಡ ಮನೆಗೆ ಬಂದಂತಹ ಸೊಸೆಯನ್ನು ತನ್ನ ಸ್ವಂತ ಮಗಳಂತೆ ಕಾಣಬೇಕು. ಆದರೆ ಇಂದು ನಾವು ಹೇಳಲು ಹೊರಟಿರುವ ಅಂತಹ ಘಟನೆ ಕೇಳಿದರೆ ನಿಜವಾಗಿ ಕೂಡ ನಿಮಗೆ ಈ ವಿಚಾರವನ್ನು ಕೇಳಿದ ನಂತರ ಕೋಪ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು ಹರಿಯಾಣದ ಒಂದು ಚಿಕ್ಕ ಹಳ್ಳಿಯಲ್ಲಿ ಇರುವಂತಹ ಈ ಹೆಣ್ಣು ಮಗಳ ಗಂಡ ಎರಡು ವರ್ಷಗಳ ಹಿಂದೆಯೇ ಮರಣವನ್ನು ಹೊಂದಿದ್ದಾನೆ. ಈಕೆ ತನ್ನ ಎರಡು ಮಕ್ಕಳೊಂದಿಗೆ ಗಂಡನ ಮನೆಯಲ್ಲಿ ಇದ್ದಾಳೆ. ಮಗಳಂತೆ ನೋಡಿಕೊಳ್ಳಬೇಕಾಗಿದೆ ಸೊಸೆಯನ್ನು ಆಕೆಯ ಮಾವನೇ ಕೆಟ್ಟ ದೃಷ್ಟಿಯಲ್ಲಿ ನೋಡಲು ಆರಂಭಿಸಿದ್ದಾನೆ. ಇದು ನಿಜಕ್ಕೂ ಕೂಡ ಎಲ್ಲರೂ ವಿರೋಧಿಸಲೇ ಬೇಕಾದಂತಹ ಕೆಲಸವಾಗಿದೆ.

ಆದರೆ ಮೊನ್ನೆ ಏಪ್ರಿಲ್ 11ರ ತನಕ ಇದರ ಕುರಿತಂತೆ ಎಲ್ಲಿಯೂ ಕೂಡ ಬಾಯಿಬಿಟ್ಟಿರಲಿಲ್ಲ. ಹಲವಾರು ಸಮಯಗಳಿಂದ ಆಕೆಯ ಮಾವ ಆಕೆಯ ಜೊತೆಗೆ ಕೆಟ್ಟ ರೀತಿಯಲ್ಲಿ ವರ್ತಿಸಲು ಪ್ರಯತ್ನ ಪಡುತ್ತಿದ್ದ ಈ ಹಿಂದೆಯೂ ಕೂಡ ಆಕೆ ಆತನಿಗೆ ಎಚ್ಚರಿಕೆಯನ್ನು ನೀಡಿದ್ದಳು. ಆದರೆ ಮೊನ್ನೆ ಏಪ್ರಿಲ್ 11ರಂದು ಮತ್ತೆ ಇದೇ ರೀತಿ ಯಾರು ಇಲ್ಲದಿದ್ದ ಸಂದರ್ಭದಲ್ಲಿ ಆಕೆಯ ಮೈಕೈ ಮುಟ್ಟಿ ಕೆಟ್ಟದಾಗಿ ನಡೆದುಕೊಳ್ಳಲು ಪ್ರಯತ್ನಿಸಿದ್ದ. ಕೂಡಲೇ ಆಕೆ ಕಿರುಚಿದಳು. ಇದರಿಂದ ಹೆದರಿದ ಮಾವ ಓಡಿ ಹೋಗಿದ್ದಾನೆ. ಕೂಡಲೇ ಆ ಹೆಣ್ಣುಮಗಳು ಹತ್ತಿರದಲ್ಲೇ ಇದ್ದ ಪೊಲೀಸ್ ಠಾಣೆಗೆ ಹೋಗಿ ಮಾವನ ಕುರಿತಂತೆ ದೂರನ್ನು ದಾಖಲಿಸಿದ್ದಾಳೆ.
ಈಗಾಗಲೇ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ವಿಚಾರಣೆ ಇನ್ನಷ್ಟೇ ನಡೆಯಬೇಕಾಗಿದೆ. ಆದರೆ ಇಂತಹ ಸಮಾಜದಲ್ಲಿ ವಿಧವೆ ಮಹಿಳೆಯ ಲಾಭವನ್ನು ಸ್ವತಃ ಆಕೆಯ ಮಾವನೇ ಪಡೆಯಲು ನೋಡುತ್ತಿರುವುದು ವಿಷಾದನೀಯ ವಿಚಾರವಾಗಿದೆ. ಸ್ವರ್ಗದಲ್ಲಿ ಕುಳಿತಿರುವ ಆಕೆಯ ಪತಿ ಕೂಡ ತನ್ನ ತಂದೆಯ ಇಂತಹ ನೀಚ ಕೃತ್ಯವನ್ನು ನೋಡಿ ನಾಚಿಕೆಯಿಂದ ತಲೆ ತಗ್ಗಿಸಿರುವುದಂತೂ ಖಂಡಿತ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.