ಇತ್ತೀಚಿಗಷ್ಟೇ ಮದುವೆಯಾಗಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ?? ಯಾರ್ಯಾರ ಆಸ್ತಿ ಎಷ್ಟು ಗೊತ್ತೇ??

76

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚೆಗಷ್ಟೇ ಅಂದರೆ ಏಪ್ರಿಲ್ 14ರಂದು 5 ವರ್ಷಗಳ ಪ್ರೇಮ ಸಂಬಂಧದ ನಂತರ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರು ಮದುವೆಯಾಗುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇವರಿಬ್ಬರು ಬಾಲಿವುಡ್ ಚಿತ್ರರಂಗದ ಟಾಪ್ ಕಲಾವಿದರಲ್ಲಿ ಕಾಣಿಸಿಕೊಳ್ಳುತ್ತಾರೆ.

ಈಗ ಇವರು ಕೇವಲ ಇವರಿಬ್ಬರ ಪ್ರೀತಿಗೆ ಹಾಗೂ ಮದುವೆಗೆ ಮಾತ್ರವಲ್ಲದೆ ಇವರ ಶ್ರೀಮಂತಿಕೆ ಹಾಗೂ ಆಸ್ತಿಗೆ ಕೂಡ ಸದ್ದು ಮಾಡುತ್ತಿದ್ದಾರೆ. ಹೌದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಆಸ್ತಿ ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾಗಿದ್ದರೆ ಇಬ್ಬರ ಆಸ್ತಿಯ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಪ್ರಯತ್ನಿಸುತ್ತೇವೆ ಬನ್ನಿ.

ಮೊದಲಿಗೆ ಆಲಿಯಾ ಭಟ್ ರವರ ಆಸ್ತಿಯ ಕುರಿತಂತೆ ಹೇಳುವುದಾದರೆ, ಸ್ಟುಡೆಂಟ್ ಆಫ್ ದ ಇಯರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿರುವ ಇವರು ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಆರ್ ಆರ್ ಆರ್ ಹಾಗೂ ಗಂಗೂಬಾಯಿ ಸಿನಿಮಾ ಗಳವರೆಗೂ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಭಾವನೆ ರೂಪದಲ್ಲಿ ಬರೋಬ್ಬರಿ ಎಂಟರಿಂದ ಹತ್ತು ಕೋಟಿ ರೂಪಾಯಿ ವರೆಗೆ ಪ್ರತಿ ಸಿನಿಮಾಗೆ ಚಾರ್ಜ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ ಅಲ್ಲಿ ಕೂಡ ಬ್ರಾಂಡ್ ಎಂಡೋಸ್ಮೆಂಟ್ ಮಾಡುತ್ತಾರೆ. ಮಾತ್ರವಲ್ಲದೆ ಜಾಹಿರಾತಿಗೂ ಕೂಡ 2 ಕೋಟಿ ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರೆ. ಮೂಲಗಳ ಪ್ರಕಾರ ಆಲಿಯಾ ಭಟ್ ರವರ ಆಸ್ತಿಯ ಮೌಲ್ಯ 517 ಕೋಟಿ ರೂಪಾಯಿಗಳಿಗೂ ಹೆಚ್ಚು.

ಇನ್ನು ರಣಬೀರ್ ಕಪೂರ್ ಅವರ ಕುರಿತಂತೆ ಹೇಳುವುದಾದರೆ ಖ್ಯಾತ ನಟ ರಿಷಿ ಕಪೂರ್ ಅವರ ಪುತ್ರನಾಗಿರುವ ಇವರು ಚಿತ್ರರಂಗದಲ್ಲಿ ಕೇವಲ ತಮ್ಮ ನಟನೆಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪ್ರತಿ ಸಿನಿಮಾಗೆ 65ರಿಂದ 70 ಕೋಟಿ ರೂಪಾಯಿ ಚಾರ್ಜ್ ಮಾಡುವವರು ಮುಂಬೈನಲ್ಲಿ 16 ಕೋಟಿ ರೂಪಾಯಿ ಬೆಲೆ ಬಾಳುವ ಐಷಾರಾಮಿ ಬಂಗಲೆ ಹೊಂದಿದ್ದಾರೆ. 43 ಕೋಟಿ ರೂಪಾಯಿ ಬೆಲೆಬಾಳುವ ಮುಂಬೈ ಸಿಟಿ ಫುಟ್ಬಾಲ್ ಕ್ಲಬ್ ನ ಸಹಮಾಲಕ ಕೂಡ ಆಗಿದ್ದಾರೆ. ಜಾಹೀರಾತು ಚಿತ್ರೀಕರಣಕ್ಕಾಗಿ ಪ್ರತಿದಿನ 6 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಮೂಲಗಳ ಪ್ರಕಾರ ಇವರ ಆಸ್ತಿಯ ಮೌಲ್ಯ 322 ಕೋಟಿಗೂ ಅಧಿಕ. ಒಟ್ಟಾರೆ ಇವರಿಬ್ಬರು ಆಸ್ತಿಯ ಮೌಲ್ಯ 839 ಕೋಟಿಗೂ ಅಧಿಕ ಎಂಬುದಾಗಿ ತಿಳಿದುಬಂದಿದೆ. ಹಣ ಆಸ್ತಿಗಿಂತ ಹೆಚ್ಚಾಗಿ ಪ್ರೀತಿ ಮುಖ್ಯ ಹಾಗಾಗಿ ದೀರ್ಘಕಾಲ ಪ್ರೀತಿ ಹಾಗೂ ಸುಖಶಾಂತಿ ನೆಮ್ಮದಿಯಿಂದ ದಾಂಪತ್ಯ ಜೀವನವನ್ನು ನಡೆಸಲಿ ಎಂದು ಹಾರೈಸೋಣ.