ಸರಿಗಮಪ ಮೂಲಕ ಸ್ಟಾರ್ ಆದ ಹನುಮಂತ ರವರು ಇದೀಗ ಏನು ಮಾಡುತ್ತಿದ್ದಾರೆ ಗೊತ್ತೇ??

40

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಕಿರುತೆರೆಯ ವಾಹಿನಿಗಳು ಇದುವರೆಗೂ ಅದೆಷ್ಟೋ ಜನರಿಗೆ ಪ್ರತಿಭೆಯನ್ನು ಗುರುತಿಸಿ ಅವಕಾಶವನ್ನು ನೀಡಿ ನಿಜ ಜೀವನದಲ್ಲಿ ಕೂಡ ಒಂದೊಳ್ಳೆ ಸಾಧನೆಯನ್ನು ಮಾಡಲು ಅವಕಾಶವನ್ನು ನೀಡಿವೆ. ಅದೇ ರೀತಿಯಲ್ಲಿ ನಾವು ಇಂದು ಮಾತನಾಡಲು ಹೊರಟಿರುವುದು ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಕುರಿತಂತೆ. ಇದುವರೆಗೂ ಬರೋಬ್ಬರಿ 15 ಸೀಸನ್ ಗಳು ಸರಿಗಮಪ ಕಾರ್ಯಕ್ರಮದಲ್ಲಿ ನಡೆದಿದೆ. ಇದರಲ್ಲಿ ಅದೆಷ್ಟೋ ಜನ ಪ್ರತಿಭೆಗಳು ಈ ವೇದಿಕೆಯನ್ನು ಉಪಯೋಗ ಪಡಿಸಿಕೊಂಡು ಸಿನಿಮಾದಲ್ಲಿ ಕೂಡ ಅವಕಾಶಗಳು ಪಡೆದುಕೊಂಡಿದ್ದಾರೆ.

ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಗ್ರಾಮೀಣ ಪ್ರತಿಭೆಯಾಗಿರುವ ಹನುಮಂತ ರವರ ಕುರಿತಂತೆ. ಕುರಿ ಕಾಯುತ್ತಿದ್ದ ಹನುಮಂತ ರವರು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಂತರ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ದವರು ಅವಕಾಶವನ್ನು ನೀಡುತ್ತಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡ ಹನುಮಂತ ಕಾರ್ಯಕ್ರಮದ ಸೂಪರ್ ಸ್ಟಾರ್ ಆಗಿ ಮಿಂಚುತ್ತಾನೆ. ಆದರೆ ಸರಿಗಮಪದಲ್ಲಿ ಕಾಣಿಸಿಕೊಂಡ ನಂತರ ಹಲವಾರು ಸಮಯಗಳ ಕಾಲ ಹನುಮಂತ ಎಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ. ಹನುಮಂತ ಎಲ್ಲಿದ್ದಾನೆ ಎಂದು ಹುಡುಕುತ್ತಿದ್ದವರಿಗೆ ಕೊನೆಗೂ ಕೂಡ ಉತ್ತರ ಸಿಕ್ಕಿದೆ.

ಹೌದು ಹನುಮಂತ ಎಲ್ಲಿದ್ದಾನೆ ಎಂದು ಹುಡುಕುತ್ತಿದ್ದವರಿಗೆ ಆತ ತನ್ನ ಊರು ಆಗಿರುವ ಹಾವೇರಿಯಲ್ಲಿ ಇದ್ದಾನೆ ಎಂಬುದಾಗಿ ತಿಳಿದುಬಂದಿದೆ. ಈಗಾಗಲೇ ಮೂರು ಸಿನಿಮಾ ಗಳಿಗಾಗಿ ಹಾಡನ್ನು ಕೂಡ ಹಾಡಿರುವ ಹನುಮಂತ ಮದುವೆಯಾಗಲು ಹೊರಟಿದ್ದಾನೆ. ಅವರ ಲಂಬಾಣಿ ಜನಾಂಗದಲ್ಲಿ ಹುಡುಗರು 21 ವರ್ಷದ ಒಳಗಡೆ ಮದುವೆಯಾಗ ಬೇಕಾಗಿರುತ್ತದೆ. ಮದುವೆ ಆಗಲು ಹೊರಟಿರುವ ಹುಡುಗಿ ಯಾರು ಎಂದು ನೋಡುವುದಾದರೆ ಆಕೆ ಪಿಯುಸಿ ಓದಿದ್ದಾರೆ ಎನ್ನುವುದು ತಿಳಿದು ಬಂದಿದೆ. ಆದರೆ ಅವರ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಗಳು ಸಿಕ್ಕಿಲ್ಲ. ಇವರಿಬ್ಬರ ಮದುವೆ ಎಲ್ಲಿ ಯಾವಾಗ ನಡೆಯುತ್ತದೆ ಎಂಬುದನ್ನು ಇನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಹನುಮಂತ ತಮ್ಮ ಮದುವೆ ಕುರಿತಂತೆ ಮಾಹಿತಿಗಳನ್ನು ಅಧಿಕೃತವಾಗಿ ನೀಡಬಹುದಾಗಿದೆ ಎಂಬುದಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.