ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ರಾಮ್ ಗೋಪಾಲ್ ವರ್ಮಾ ಮಾಡಿದ ಟ್ವೀಟ್ ಏನು ಗೊತ್ತಾ, ಮತ್ತೊಂದು ವಿವಾದ ಸೃಷ್ಟಿಸಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ಪ್ರಾರಂಭದ ದಿನಗಳಲ್ಲಿ ನಮ್ಮ ದಕ್ಷಿಣ ಭಾರತ ಚಿತ್ರರಂಗದ ವರೆಗೂ ಒಪ್ಪಿಕೊಳ್ಳಲು ಹೋಗಿರಲಿಲ್ಲ. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಎನ್ನುವುದು ಇಡೀ ಚಿತ್ರ ಜಗತ್ತಿನಲ್ಲಿಯೇ ಎಲ್ಲರೂ ಒಪ್ಪಿಕೊಳ್ಳುವಂತಹ ದಾಖಲೆಯನ್ನು ಮಾಡಿ ಮರೆಯುತ್ತಿದೆ. ನಿಜಕ್ಕೂ ಕೂಡ ಪ್ರಶಾಂತ್ ನೀಲ್ ಹಾಗೂ ಯಶ್ ಮತ್ತು ವಿಜಯ್ ಕಿರಗಂದೂರು ರವರ ಸಾಹಸವನ್ನು ಮೆಚ್ಚಲೇಬೇಕು. ಕರ್ನಾಟಕಕ್ಕಿಂತಲೂ ಹೆಚ್ಚಾಗಿ ಪರ ರಾಜ್ಯಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಹವಾ ದೊಡ್ಡಮಟ್ಟದಲ್ಲಿ ದೇಶ-ವಿದೇಶಗಳಲ್ಲಿ ಬೀಸುತ್ತಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ಭಾಷೆಗಳಲ್ಲಿ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರ ತನ್ನದೇ ಆದಂತಹ ಹೊಸ ದಾಖಲೆಗಳನ್ನು ಅದೇ ಭಾಷೆಯ ಸಿನಿಮಾದಂತೆ ಬರೆಯುತ್ತಿದೆ.
ಈ ಹಿಂದೆ ಹಲವಾರು ದಾಖಲೆಗಳನ್ನು ನಿರ್ಮಿಸಿದ ಬಾಹುಬಲಿಯ ದಾಖಲೆಗಳನ್ನು ಕೂಡ ಒಂದೊಂದಾಗಿಯೇ ಕೆಜಿಎಫ್ ಚಾಪ್ಟರ್ 2 ಚಿತ್ರ ಮು’ರಿಯುತ್ತಿದೆ. ಇನ್ನು ಚಿತ್ರದ ಕುರಿತಂತೆ ಹಲವಾರು ಜನರು ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಳ್ಳುವುದರ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರಲ್ಲಿ ತೆಲುಗು ಚಿತ್ರರಂಗದ ಖ್ಯಾತ ಸ್ಟಾರ್ ನಿರ್ದೇಶಕರಾಗಿರುವ ರಾಮ್ ಗೋಪಾಲ್ ವರ್ಮಾ ಅವರು ಕೂಡ ಬರೆದುಕೊಂಡಿದ್ದಾರೆ. ಹಾಗಿದ್ದರೆ ದುನಿಯಾ ವನ್ನೇ ಗೆಲ್ಲುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ವಿ’ವಾದಿತ ನಿರ್ದೇಶಕ ಏನು ಹೇಳುತ್ತಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ಸರಣಿ ಟ್ವೀಟ್ ಗಳನ್ನೇ ಮಾಡಿದ್ದಾರೆ. ನಾಯಕನಟರಿಗೆ ಕೋಟಿ ಕೋಟಿ ಸುರಿಯುವ ಬದಲು ಸಿನಿಮಾಗಳಿಗೆ ಹಣವನ್ನು ಸುರಿದು ಉತ್ತಮ ಕ್ವಾಲಿಟಿಯಲ್ಲಿ ಮಾಡಬೇಕು ಆಗಲೇ ಸಿನಿಮಾ ಗೆಲ್ಲುತ್ತದೆ ಅದನ್ನು ಕೆಜಿಎಫ್ ಚಾಪ್ಟರ್ 2 ಚಿತ್ರ ನಿರೂಪಿಸಿದೆ ಎಂಬುದಾಗಿ ಹೇಳಿದ್ದಾರೆ. ಹಿಂದಿ ಸಿನಿಮಾಗಳನ್ನು ಬಿಡಿ ಅಕ್ಕಪಕ್ಕದ ತೆಲುಗು-ತಮಿಳು ಚಿತ್ರರಂಗಗಳೇ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಆದರೆ ಇಂದು ಕೆಜಿಎಫ್ ಚಾಪ್ಟರ್ 1 ಹಾಗೂ 2 ಚಿತ್ರದ ಮೂಲಕ ಪ್ರಶಾಂತ್ ನೀಲ್ ರವರು ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ತೋರಿಸಿದ್ದಾರೆ. ಚಿತ್ರದಲ್ಲಿರುವಂತೆ ರಾಕಿಂಗ್ ಸ್ಟಾರ್ ಯಶ್ ರವರು ಮುಂಬೈಗೆ ಬಂದು ಈಗ ಹಿಂದಿಯ ಸ್ಟಾರ್ ನಟರ ಸಿನಿಮಾಗಳಿಗಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿ ತೋರಿಸಿ ರುವುದರಿಂದ ಬಾಲಿವುಡ್ ನವರಿಗೂ ಕೂಡ ಭ’ಯವನ್ನು ಹುಟ್ಟುಹಾಕಿದ್ದಾರೆ. ನಮಗೆಲ್ಲ ಇದು ಆಕ್ಷನ್ ಸಿನಿಮಾ ವಾದರೆ ಬಾಲಿವುಡ್ ಮಂದಿಗೆ ಮಾತ್ರ ಇದು ಹಾರರ್ ಫಿಲ್ಮ್ ಆಗಲಿದೆ. ಯಾಕೆಂದರೆ ಈ ಚಿತ್ರ ಬಾಲಿವುಡ್ ನಲ್ಲಿ ಮಾಡುತ್ತಿರುವ ಕಲೆಕ್ಷನ್ ಹಾಗೂ ಯಶಸ್ಸು ನೋಡಿದರೆ ಖಂಡಿತವಾಗಿ ಅವರಿಗೆ ಕನಸಿನಲ್ಲಿ ಕೂಡ ನಿದ್ರೆ ಬರುವುದು ಕಷ್ಟ ಎಂಬುದಾಗಿ ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿದ್ದಾರೆ.