ಒಂದು ಕಡೆ ಕೆಜಿಎಫ್ 2 ಭರ್ಜರಿ ಕಲೆಕ್ಷನ್ ಮಾಡುತ್ತಿರುವಾಗ ಕನ್ನಡದಲ್ಲಿ ಹೊಸ ವಾದ. ಗರಂ ಆದ ದರ್ಶನ್ ಅಭಿಮಾನಿಗಳು. ಯಾಕೆ ಗೊತ್ತೇ??

57

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದು ಬಾಕ್ಸಾಫೀಸ್ ನಲ್ಲಿ ಕೂಡ ಹಲವಾರು ದಾಖಲೆಗಳನ್ನು ನಿರ್ಮಿಸಿದೆ. ಈಗಾಗಲೇ ಕೇವಲ ಎರಡೇ ದಿನದಲ್ಲಿ ಜಗತ್ತಿನಾದ್ಯಂತ 300 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಕೆಜಿಎಫ್ ಚಾಪ್ಟರ್ 2 ಚಿತ್ರ. ಇತ್ತೀಚಿನ ದಿನಗಳಲ್ಲಿ ಖಂಡಿತವಾಗಿ ಯಾವುದೇ ಸಿನಿಮಾ ಕೂಡ ಅದರಲ್ಲೂ ಕನ್ನಡದಲ್ಲಿ ಇಂತಹ ದಾಖಲೆಯನ್ನು ಮಾಡಿರುವುದು ಕಂಡುಬಂದಿಲ್ಲ.

ಆದರೆ ಇದರ ನಡುವೆಯೇ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಬಿದ್ದಿದೆ. ಆದರೆ ಈ ಚರ್ಚೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೇ ಆಗಲಿ ಅಥವಾ ರಾಕಿಂಗ್ ಸ್ಟಾರ್ ಯಶ್ ರವರೇ ಆಗಲಿ ಖುದ್ದಾಗಿ ಚರ್ಚೆಯನ್ನು ಮಾಡುತ್ತಿಲ್ಲ ಬದಲಾಗಿ ಅವರ ಅಭಿಮಾನಿಗಳು. ಸಾಮಾನ್ಯವಾಗಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಜಗಳ ನಡೆಯುವುದು ಸರ್ವೇಸಾಮಾನ್ಯವಾಗಿದೆ. ಅದೇ ರೀತಿ ಈಗ ಕೆಜಿಎಫ್ ಚಾಪ್ಟರ್ 2 ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಯಶ್ ಹಾಗೂ ದರ್ಶನ್ ರವರ ಅಭಿಮಾನಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಅಷ್ಟಕ್ಕೂ ಕಾರಣ ಏನು ಎನ್ನುವುದನ್ನು ತಿಳಿಯುವುದಾದರೆ ಬಾಸ್ ಎನ್ನುವ ಪಟ್ಟಕ್ಕೆ ಎಂದು ತಿಳಿದುಬಂದಿದೆ.

ಹೌದು ಗೆಳೆಯರೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನಿಂದಾಗಿ ರಾಕಿಂಗ್ ಸ್ಟಾರ್ ಯಶ್ ರವರನ್ನು ತೆಲುಗು ಟಿವಿ ಮಾಧ್ಯಮಗಳು ಸೇರಿದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬಾಸ್ ಎನ್ನುವ ಹೆಸರಿನಿಂದ ಹೆಚ್ಚಾಗಿ ಕರೆಯುತ್ತಿದ್ದಾರೆ. ಆದರೆ ಇದು ದರ್ಶನ್ ರವರ ಅಭಿಮಾನಿಗಳಿಗೆ ಅಸಮಾಧಾನಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ದರ್ಶನ್ ಅವರನ್ನು ಅಭಿಮಾನಿಗಳು ಮೊದಲಿನಿಂದಲೂ ಕೂಡ ಬಾಸ್ ಎನ್ನುವುದಾಗಿ ಕರೆದುಕೊಂಡು ಬರುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ನೀವು ಗೂಗಲ್ನಲ್ಲಿ ಕೂಡ ಹುಡುಕಿದರೆ ಭಾರತೀಯ ಚಿತ್ರರಂಗದ ಬಾಸ್ ಎನ್ನುವುದಾಗಿ ದರ್ಶನ್ ರವರನ್ನು ತೋರಿಸುತ್ತದೆ. ಹೀಗಾಗಿ ಯಾವುದೋ ಒಂದೆರಡು ಟಿವಿ ಮಾಧ್ಯಮಗಳು ತೋರಿಸಿದ ಮಾತ್ರಕ್ಕೆ ಬೇರೆಯವರು ಬಾಸ್ ಆಗಲು ಸಾಧ್ಯವಿಲ್ಲ ಬಾಸ್ ಎಂದರೆ ಕೇವಲ ದರ್ಶನ್ ರವರು ಮಾತ್ರ ಎಂದು ದರ್ಶನ್ ಅಭಿಮಾನಿಗಳು ವಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2 ಸ್ಟಾರ್ ನಟರ ಅಭಿಮಾನಿ ಬಳಗ ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ವಾ’ರ್ ಮಾಡುತ್ತಿದ್ದು ಇದು ಮುಂದಿನ ದಿನದಲ್ಲಿ ಯಾವ ತಿರುವನ್ನು ಪಡೆದುಕೊಳ್ಳಬಹುದು ಎಂಬುದನ್ನು ಕಾದುನೋಡಬೇಕಾಗಿದೆ.