ಅಂಬಾನಿ ರವರ ಜಿಯೋ ಕಡೆಯಿಂದ ಮತ್ತೊಂದು ನಿರ್ಧಾರ, ಸಿಮ್ ಜೊತೆಗೆ ಫೋನ್ ಕೂಡ ತಯಾರು. ಅದು ಉಚಿತವಾಗಿ ಪಡೆಯುವ ಅವಕಾಶ. ಹೇಗೆ ಗೊತ್ತೇ??

29

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆಯು ದೊಡ್ಡಮಟ್ಟದಲ್ಲಿ ಆರಂಭದಲ್ಲಿಯೇ ಯಶಸ್ಸನ್ನು ಸಾಧಿಸಿ ಈಗಲೂ ಕೂಡ ತನ್ನ ಪ್ರಾಬಲ್ಯವನ್ನು ಈ ಕ್ಷೇತ್ರದಲ್ಲಿ ಮುಂದುವರಿಸಿಕೊಂಡು ಬಂದಿದೆ. ಜಿಯೋ ಸಂಸ್ಥೆಗೆ ಹಲವಾರು ಪ್ರೈವೇಟ್ ಟೆಲಿಕಾಂ ಸಂಸ್ಥೆಗಳು ಪೈಪೋಟಿಯನ್ನು ನೀಡಿದರೂ ಕೂಡ ಜಿಯೋ ಸಂಸ್ಥೆ ಹುಟ್ಟುಹಾಕಿರುವ ಲೆವೆಲ್ ಗೆ ಬರಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದಾಗಿ ಸ್ಪಷ್ಟವಾಗಿ ಕಂಡುಬರುತ್ತದೆ.

ಕೇವಲ ಇಷ್ಟು ಮಾತ್ರವಲ್ಲದೆ ಆಗಾಗ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗಾಗಿ ಒಂದಲ್ಲ ಒಂದು ಹೊಸ ಯೋಜನೆಗಳನ್ನು ಆಗಾಗ ತರುತ್ತದೆ ಇರುತ್ತದೆ. ಇದರಿಂದಾಗಿಯೇ ಗ್ರಾಹಕರು ಜಿಯೋ ಸೇವೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇನ್ನು ಈ ಬಾರಿ ಕೂಡ ಹೊಸ ಯೋಜನೆಯೊಂದನ್ನು ಜಿಯೋ ಸಂಸ್ಥೆ ಪರಿಚಯಿಸಿದ್ದು ಬೇರೆಲ್ಲಾ ಪ್ರತಿಸ್ಪರ್ಧಿ ಕಂಪನಿಗಳಿಗೆ ಇದು ಆಶ್ಚರ್ಯವನ್ನು ನೀಡಿದೆ. ಹೌದು ಅದೇನೆಂದರೆ ಭಾರತೀಯ ಟೆಲಿಕಾಂ ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಜಿಯೋ ಸಂಸ್ಥೆ ಅತಿ ಕಡಿಮೆ ದರದಲ್ಲಿ 4ಜಿ ಮೊಬೈಲ್ ಫೋನನ್ನು ನೀಡಲು ಹೊರಟಿದೆ. ಇದನ್ನು ಹೇಗೆ ಪಡೆಯುವುದು ಹಾಗೂ ಇದರ ಕುರಿತಂತೆ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಜಿಯೋ ಪರಿಚಯಿಸಿ ರುವಂತಹ ಹೊಸ ಸೇವೆಯ ರಿಚಾರ್ಜ್ ಬೆಲೆ 1499 ರೂಪಾಯಿ. ಈ ಯೋಜನೆಯ ವ್ಯಾಲಿಡಿಟಿ 2 ವರ್ಷಗಳ ಕಾಲ ಇರುತ್ತದೆ. ಇದರಲ್ಲಿ ಇಂಟರ್ನೆಟ್ ಸೇವೆಗಳು ಸೇರಿದಂತೆ ಹಲವಾರು ಯೋಜನೆಗಳ ಸೌಲಭ್ಯ ಕೂಡ ನಿಮಗೆ ಸಿಗುತ್ತದೆ.

ಈ ಯೋಜನೆಯಲ್ಲಿ ಯಾವುದೇ ನೆಟ್ವರ್ಕ್ ಗಳಿಗೂ ಕೂಡ ಮಾತನಾಡಬಹುದಾ ದಂತಹ ಅನ್ಲಿಮಿಟೆಡ್ ಕರೆ ಸೇವೆಗಳು ಕೂಡ ಸಿಗುತ್ತವೆ. 24gb ಸ್ಪೀಡ್ ಇಂಟರ್ನೆಟ್ ಸೇವೆ ಕೂಡ ಲಭ್ಯವಿರುತ್ತದೆ. ಈ ಎಲ್ಲಾ ಯೋಜನೆಗಳೊಂದಿಗೆ 4g ಸ್ಮಾರ್ಟ್ ಫೋನ್ ಅನ್ನು ಕೂಡ ಒದಗಿಸಲಾಗುತ್ತದೆ. ಇದರ ಕುರಿತಂತೆ ಇನ್ನಷ್ಟು ಹೆಚ್ಚು ತಿಳಿಯೋಣ ಬನ್ನಿ. ಇದು ಜಿಯೋ ಸಂಸ್ಥೆಯದ್ದೇ ಸ್ಮಾರ್ಟ್ ಫೋನ್ ಆಗಿದ್ದು ಇದರ ಬೆಲೆ 2999 ರೂಪಾಯಿ ಆಗಿರುತ್ತದೆ. ಇದರಲ್ಲಿ ಡ್ಯುಯಲ್ ಸಿಮ್ ಬಳಕೆ ಮಾಡಬಹುದಾಗಿದೆ. 2.4 ಇಂಚಿನ ಸ್ಕ್ರೀನ್ ಸೌಲಭ್ಯವಿದೆ ಹಾಗೂ 1500 ಎಂ ಎ ಹೆಚ್ ಬ್ಯಾಟರಿಯ ಬಾಳಿಕೆ ಕೂಡ ಬರುತ್ತದೆ. ಮೆಮೊರಿ ಕಾರ್ಡ್ ಮೂಲಕ 128gb ವರೆಗೆ ಸ್ಟೋರೇಜ್ ಮಾಡಬಹುದಾಗಿದೆ. ಸಮಾಧಾನಕರ ರೀತಿಯ ಕ್ಯಾಮೆರಾ ಕ್ಲಾರಿಟಿ ಕೂಡ ಇದೆ. ಇದರಲ್ಲಿ ಇಂಗ್ಲೀಷ್ ಸೇರಿದಂತೆ 18 ಭಾಷೆಗಳ ಧ್ವನಿವರ್ಧಕ ಸಹಾಯ ಕೂಡ ಸಿಗಲಿದೆ. ನೀವು ಕೂಡ ಇದನ್ನು ಪಡೆಯಲು ಇಚ್ಚಿಸಿದರೆ ಜಿಯೋ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.