ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆಯಲ್ಲಿ, ಆಲಿಯಾ ಭಟ್ ಧರಿಸಿರುವ ಬಟ್ಟೆ ಹಾಗೂ ಆಭರಣದ ಬೆಲೆ ಎಷ್ಟು ಗೊತ್ತಾ??

751

ನಮಸ್ಕಾರ ಸ್ನೇಹಿತರೇ ಬಹುತೇಕ ಎಲ್ಲರಿಗೂ ಏಪ್ರಿಲ್ 14 ಎಂದಾಕ್ಷಣ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಯಿತು ಎನ್ನುವುದಾಗಿ ಉತ್ತರ ನೀಡುತ್ತಾರೆ. ಆದರೆ ಆದಿನ ಬಾಲಿವುಡ್ ಚಿತ್ರರಂಗದ ಪ್ರೇಮ ಪಕ್ಷಿಗಳಾಗಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇಬ್ಬರು ಕೂಡ ಮದುವೆಯಾಗುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಬೇರೆಲ್ಲಾ ಸೆಲೆಬ್ರಿಟಿ ಗಳಂತೆ ದೂರದ ಅದ್ದೂರಿ ಪ್ರದೇಶಗಳಲ್ಲಿ ಹೋಗಿ ಆಡಂಬರದಿಂದ ಮದುವೆಯಾಗಿಲ್ಲ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇಬ್ಬರು ಕೂಡ ತಮ್ಮ ಮುಂಬೈನಲ್ಲಿ ಇರುವಂತಹ ಮನೆಯಲ್ಲಿಯೇ ಸಿಂಪಲ್ಲಾಗಿ ಮದುವೆಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಇಬ್ಬರ ಫೋಟೋಗಳು ಕೂಡ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ವೈರಲ್ ಆಗಿ ಓಡಾಡುತ್ತಿವೆ. ಇಬ್ಬರು ಕೂಡ ಅರೆ ಬಿಳಿ ಬಣ್ಣದ ಬಟ್ಟೆಯ ಕಾಂಬಿನೇಷನ್ನಲ್ಲಿ ಮಿಂಚುತ್ತಿದ್ದರು. ಕೊನೆಗೂ ಕೂಡ ತಮ್ಮ ನೆಚ್ಚಿನ ಜೋಡಿಗಳು ಮದುವೆಯಾಗುತ್ತಿರುವುದು ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ. ಇನ್ನು ಈ ಮದುವೆಯಲ್ಲಿ ಅತಿಥಿಗಳ ಸಂಖ್ಯೆ ಕೂಡ ಕೇವಲ ನಿರ್ದಿಷ್ಟ ವಾಗಿತ್ತು. ಯಾವುದೇ ಸಿನಿಮಾರಂಗದ ಹೆಚ್ಚಿನ ಸೆಲೆಬ್ರಿಟಿಗಳು ಈ ಮದುವೆಗೆ ಬಂದಂತಿಲ್ಲ ಎನ್ನುವಂತಿದೆ. ಮದುವೆಯಲ್ಲಿ ಮದುಮಗ ರಣಬೀರ್ ಕಪೂರ್ ಅವರು ಸಬ್ಯಸಾಚಿ ಡಿಸೈನ್ ಮಾಡಿರುವ ಶೇರ್ವಾನಿ ಯನ್ನು ತೊಟ್ಟಿದ್ದರು. ಈ ಶೇರ್ವಾನಿ ಯಲ್ಲಿ ಡೈಮಂಡ್ ಬಟನ್ ಗಳು ಕೂಡ ಇದ್ದವು.

ಇನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ವಿಚಾರವೇನೆಂದರೆ ಆಲಿಯಾ ಭಟ್ ರವರ ಬಟ್ಟೆಯ ಹಾಗೂ ಅವರು ತೊಟ್ಟುಕೊಂಡಿದ್ದ ಆಭರಣಗಳ ಬೆಲೆ ಎಷ್ಟು ಎನ್ನುವುದಾಗಿ. ಆಲಿಯಾ ಭಟ್ ರವರ ಬಟ್ಟೆಯನ್ನು ಕೂಡ ಡಿಸೈನ್ ಮಾಡಿರುವುದು ಸಬ್ಯಸಾಚಿ. ಕ್ರೀಂ ಬಣ್ಣದ ಸೀರಿ ಯಾಗಿರುವ ಇದು ಗೋಲ್ಡನ್ ಎಂಬ್ರಾಯ್ಡರಿ ಯನ್ನು ಹೊಂದಿದೆ. ಇನ್ನು ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಸೀರೆಯ ಬೆಲೆ ಬರೋಬ್ಬರಿ 50 ಲಕ್ಷ ರೂಪಾಯಿ. ಈ ಸೀರೆಯಲ್ಲಿ ಆಲಿಯಾ ಭಟ್ ರವರು ದೇವತೆಯಂತೆ ಕಾಣುತ್ತಿದ್ದರು. ಇನ್ನು ಆಲಿಯಾ ಭಟ್ ಅವರು ಧರಿಸಿದ್ದ ಆಭರಣಗಳ ಡಿಸೈನ್ ಕೂಡ ಸಾಕಷ್ಟು ವಿಭಿನ್ನವಾಗಿತ್ತು. ಇವುಗಳ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆಗಿದೆ. ಅದ್ದೂರಿಯಿಂದ ಮದುವೆ ಆಗದೆ ಇರಬಹುದು ಆದರೆ ಇವರ ಮದುವೆಯಲ್ಲಿ ಅದ್ದೂರಿತನ ಇಲ್ಲ ಎನ್ನುವ ಹಾಗಿಲ್ಲ. ಅದೇನೇ ಇರಲಿ ಇವರಿಬ್ಬರ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಹಾರೈಸೋಣ.