ಸ್ವಂತ ಬಿಸಿನೆಸ್ ಆರಂಭ ಮಾಡಿ, ಉತ್ತಮ ಆದಾಯದ ಕನಸು ನಿಮಗಿದೆಯೇ?? ಹಾಗಿದ್ದರೆ ಕಡಿಮೆ ಹಣದಲ್ಲಿ ಉತ್ತಮ ಆದಾಯ ಗಳಿಸಬಹುದಾದ ಬಿಸಿನೆಸ್ ಯಾವುದು ಗೊತ್ತೇ ??

17

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಕಾರಣದಿಂದಾಗಿ ಎಲ್ಲರೂ ಕೂಡ ಕೆಲಸದಿಂದ ಹೋಗುವಂತ ಪರಿಸ್ಥಿತಿ ಒಂದು ಕಾಲದಲ್ಲಿ ನಿರ್ಮಾಣವಾಗಿತ್ತು. ಇಂದಿನ ದಿನದಲ್ಲಿ ಕೂಡ ಇಂತಹ ಪರಿಸ್ಥಿತಿ ಮತ್ತೆ ಬರೋದಿಲ್ಲ ಎಂದು ಹೇಳಲಿಕ್ಕೆ ಆಗುವುದಿಲ್ಲ. ಹೀಗಾಗಿ ಯಾವುದಾದರೂ ಕೆಲಸ ಮಾಡುವ ಬದಲು ಸ್ವಂತ ಉದ್ದಿಮೆಯನ್ನು ಆರಂಭಿಸುವುದು ಸೂಕ್ತವಾದದ್ದು ಎಂಬುದಾಗಿ ಊಹಿಸಲಾಗಿದೆ. ಈ ಸಂದರ್ಭದಲ್ಲಿ ಬ್ಯುಸಿನೆಸ್ ಮಾಡುವುದು ಅಷ್ಟೊಂದು ಸುಲಭವಲ್ಲ. ಯಾಕೆಂದರೆ ನಾವು ಪ್ರಾರಂಭಿಸುವ ವ್ಯಾಪಾರದ ಕುರಿತಂತೆ ಸರಿಯಾದ ಮಾಹಿತಿಗಳನ್ನು ತಿಳಿದುಕೊಳ್ಳದೆ ವ್ಯಾಪಾರಕ್ಕೆ ಹೋದರೆ ಖಂಡಿತವಾಗಿ ನಷ್ಟವೇ ಆಗುತ್ತದೆ.

ನಾವು ವ್ಯಾಪಾರ ಮಾಡುವ ವ್ಯಾಪಾರ ಕ್ಷೇತ್ರದ ಕುರಿತಂತೆ ಸರಿಯಾದ ಮಾಹಿತಿಗಳನ್ನು ಸಾಧಕ-ಬಾದಕಗಳನ್ನು ಮೊದಲು ತಿಳಿದುಕೊಳ್ಳಬೇಕು. ನಂತರವೇ ಅವ್ಯವಹಾರಕ್ಕೆ ಕೈಹಾಕಿದರೆ ಲಾಭವನ್ನು ನಾವು ಪಡೆಯಲು ಸಾಧ್ಯ. ಅದರಲ್ಲೂ ಇತ್ತೀಚಿನ ಪರಿಸ್ಥಿತಿಗಳು ಅನಿಶ್ಚಿತತೆ ಯಿಂದ ಕೂಡಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಒಮ್ಮೆ ಇನ್ವೆಸ್ಟ್ಮೆಂಟ್ ಮಾಡಿ ವ್ಯವಹಾರವನ್ನು ಆರಂಭಿಸಿದರೆ ಅದು ಕೇವಲ ಲಾಭವನ್ನು ನೀಡಬೇಕು ಅಂತಹ ವ್ಯಾಪಾರವನ್ನು ನಾವು ಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹ ವ್ಯಾಪಾರ ಯಾವುದು ಎಂದು ಹುಡುಕಿದರೆ ನ್ಯಾಪ್ಕಿನ್ ವ್ಯಾಪಾರ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಟಿಶ್ಯೂ ಪೇಪರ್ ವ್ಯಾಪಾರ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಲಾಭವನ್ನು ತಂದು ಕೊಡುತ್ತಿರುವ ವ್ಯಾಪಾರವಾಗಿದೆ ಎಂದರೆ ತಪ್ಪಾಗಲಾರದು. ಇದು ದೊಡ್ಡ ಮಟ್ಟದ ಲಾಭವನ್ನು ತಂದು ಕೊಡುತ್ತದೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇದಕ್ಕೆ ತಗಲುವ ಅಂತಹ ಆರಂಭಿಕ ಬಂಡವಾಳ ಎಷ್ಟು ಎನ್ನುವುದನ್ನು ಕೂಡ ನಾವು ತಿಳಿದುಕೊಳ್ಳಬೇಕು.

ನ್ಯಾಪ್ಕಿನ್ ವ್ಯಾಪಾರವನ್ನು ಮಾಡಲು ಅಂದರೆ ಈ ಉದ್ಯಮವನ್ನು ಪ್ರಾರಂಭಿಸಲು ಸರಕಾರದಿಂದ ಕೂಡ ಬೆಂಬಲ ದೊರಕುತ್ತದೆ ಎಂಬುದಾಗಿ ಕೇಳಿಬಂದಿದೆ. ಇನ್ನು ಈ ವ್ಯಾಪಾರ ಮಾಡಲು ಸರಿಸುಮಾರಿಗೆ ಎಷ್ಟು ಬಜೆಟ್ ಬೇಕು ಎನ್ನುವುದರ ಕುರಿತಂತೆ ನಿಮಗೆ ಹೇಳುತ್ತೇವೆ ಬನ್ನಿ. ಇದರಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಸಾಕು ಮತ್ತೆ ಟರ್ನ್ ಓವರ್ ಆಗುತ್ತಲೇ ಇರುತ್ತದೆ. ಮೊದಲಿಗೆ ಮಿಷನ್ ಗಳಿಗಾಗಿ 4.40 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ನಂತರ ರಾ ಮೆಟೀರಿಯಲ್ ಗಾಗಿ ಸರಿಸುಮಾರು 7.13 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಕೊನೆಯದಾಗಿ ಸಾರಿಗೆ ಮೆಂಟೇನೆನ್ಸ್ ಕರೆಂಟ್ ಬಿಲ್ ಸ್ಟೇಷನರಿ ಹೀಗೆ ಇತ್ಯಾದಿ ವಿಚಾರಗಳಿಗಾಗಿ ಎಲ್ಲ ಒಟ್ಟು ಸೇರಿ ಬರೋಬ್ಬರಿ ಹನ್ನೊಂದು ಲಕ್ಷ ರೂಪಾಯಿವರೆಗೆ ಮೊದಲಿಗೆ ಖರ್ಚಾಗುತ್ತದೆ. ಇದಾದ ನಂತರ ವ್ಯಾಪಾರವನ್ನು ಚೆನ್ನಾಗಿ ಮಾಡಿಕೊಂಡು ಹೋದರೆ ಖಂಡಿತವಾಗಿ ನೀವು ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳಲಿದ್ದೀರಿ.