ರೋಹಿತ್ ನಾಯಕತ್ವಕ್ಕೆ ಕುತ್ತು ಬಂದಿರುವ ಸಮಯದಲ್ಲಿ ಮತ್ತೊಬ್ಬ ನಾಯಕನ ಬಗ್ಗೆ ಚರ್ಚೆ, ರೋಹಿತ್ ನಾಯಕತ್ವ ಕಳೆದುಕೊಂಡರೆ ಮುಂದಿನ ನಾಯಕ ಯಾರಾಗಬಹುದು ಗೊತ್ತೇ??

12

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರೋಹಿತ್ ಶರ್ಮಾ ರವರು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಐದು ಬಾರಿ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಇದೇ ಗಮನಾರ್ಹ ಸಾಧನೆಯನ್ನು ಅವಲೋಕಿಸಿ ರುವ ಬಿಸಿಸಿಐ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ಸಂಪೂರ್ಣ ನಾಯಕತ್ವವನ್ನು ವಹಿಸಿತ್ತು. ಭಾರತೀಯ ಕ್ರಿಕೆಟ್ ತಂಡದ ಸಂಪೂರ್ಣ ನಾಯಕತ್ವವನ್ನು ವಹಿಸಿಕೊಂಡ ರೋಹಿತ್ ಶರ್ಮ ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕನಾಗಿ ಉತ್ತಮ ಫಲಿತಾಂಶವನ್ನು ತರುವಲ್ಲಿ ಯಶಸ್ವಿಯಾದರು.

ಆದರೆ ಮತ್ತೆ ಐಪಿಎಲ್ ಗೆ ಬಂದ ನಂತರ ಈಗ ಅದರಲ್ಲೂ ಈ ಬಾರಿಯ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಆಡಿರುವ 5ಕ್ಕೆ 5 ಪಂದ್ಯಗಳಲ್ಲಿ ಕೂಡ ಹೀನಾಯವಾಗಿ ಸೋತಿರುವುದು ಈಗ ಅವರ ನಾಯಕತ್ವದ ಕುರಿತಂತೆ ಪ್ರಶ್ನೆ ಏಳುವಂತೆ ಮಾಡಿದೆ. ಹೌದು ನಾಯಕನಾಗಿ ತಂಡದ ಗೆಲುವಿನಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತಿಲ್ಲ ಹಾಗೂ ಬ್ಯಾಟ್ಸ್ಮನ್ ಆಗಿ ಕೂಡ ತಂಡದಲ್ಲಿ ರೋಹಿತ್ ಶರ್ಮಾ ರವರು ಅಷ್ಟೊಂದು ರನ್ ಗಳನ್ನು ಗಳಿಸುತ್ತಿಲ್ಲ. ಹೀಗಾಗಿ ಇದು ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಯಾವುದೇ ಪರಿಣಾಮ ಬೀರಬಾರದು ಎಂದರೆ ರೋಹಿತ್ ಶರ್ಮಾ ರವರು ಮುಂಬೈ ಇಂಡಿಯನ್ಸ್ ತಂಡದಿಂದ ನಾಯಕತ್ವ ಸ್ಥಾನದಿಂದ ಕೆಳಗಿಳಿಯಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದೋ ಮುಂಬೈ ಇಂಡಿಯನ್ಸ್ ತಂಡ ಅವರನ್ನು ನಾಯಕತ್ವದಿಂದ ಕೆಳಗಿಳಿಸಿಲಿದೆ ಅಥವಾ ಸ್ವತಹ ರೋಹಿತ್ ಶರ್ಮಾ ರವರೇ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎನ್ನುವುದಾಗಿ ಕೇಳಿಬರುತ್ತಿವೆ.

ಒಂದು ವೇಳೆ ರೋಹಿತ್ ಶರ್ಮಾ ರವರು ನಾಯಕತ್ವದಿಂದ ಕೆಳಗಿಳಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಯಾರು ಮುನ್ನಡೆಸಲಿದ್ದಾರೆ ಎನ್ನುವುದಾಗಿ ಹಲವಾರು ಪ್ರಶ್ನೆ ಹಾಗೂ ಗೊಂದಲಗಳು ಮೂಡಿಬರಬಹುದು. ಈ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ತಂಡದ ಎದುರಿಗೆ ಮೂರು ಆಯ್ಕೆಗಳಿವೆ. ಈಗಾಗಲೇ ಹಲವಾರು ತಂಡಗಳು ನಾಯಕತ್ವವನ್ನು ವಹಿಸಿಕೊಂಡಿರುವ ಅನುಭವವನ್ನು ಹೊಂದಿರುವ ಕಿರನ್ ಪೊಲಾರ್ಡ್ ಅಥವಾ ತಂಡದ ಭರವಸೆ ಬ್ಯಾಟ್ಸಮನ್ ಆಗಿರುವ ಸೂರ್ಯ ಕುಮಾರ್ ಯಾದವ್ ಇಲ್ಲವೇ ತಂಡದ ನಂಬಿಕಸ್ಥ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ರವರು ನಾಯಕನಾಗುವ ಸಾಧ್ಯತೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.