ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಇವರು ಯಾರು ಗೊತ್ತೇ?? ಕನ್ನಡದ ಸ್ಟಾರ್ ನಟಿಯ ತಂಗಿ ಗೊತ್ತೇ??

1,370

ನಮಸ್ಕಾರ ಸ್ನೇಹಿತರೇ ಲಾಕ್ಡೌನ್ ನಂತರದ ದಿನಗಳಲ್ಲಿ ನಮ್ಮ ಕನ್ನಡ ಮನೋರಂಜನೆ ಕ್ಷೇತ್ರದಲ್ಲಿ ಕೇವಲ ಸಿನಿಮಾ ಚಿತ್ರಮಂದಿರಗಳು ಮಾತ್ರವಲ್ಲದೆ ಧಾರವಾಹಿ ಹಾಗೂ ಕಿರುತೆರೆ ಕ್ಷೇತ್ರವು ಕೂಡ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ನೋಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಕ್ಷೇತ್ರದಲ್ಲಿ ಕೇವಲ ಧಾರವಾಹಿಗಳು ಮಾತ್ರವಲ್ಲದೆ ರಿಯಾಲಿಟಿ ಶೋ ಕಾರ್ಯಕ್ರಮಗಳು ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿವೆ. ಅದರಲ್ಲೂ ಕ್ವಾಲಿಟಿ ಗುಣಮಟ್ಟದ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಲ್ಲಿ ಜೀ ಕನ್ನಡ ವಾಹಿನಿ ಹಾಗೂ ಕಲರ್ಸ್ ಕನ್ನಡ ವಾಹಿನಿ ಎರಡು ಕೂಡ ದೊಡ್ಡಮಟ್ಟದ ಪೈಪೋಟಿಯನ್ನು ಪರಸ್ಪರ ನೀಡುತ್ತಿವೆ.

ಇನ್ನು ಎರಡು ವಾಹಿನಿಗಳು ಕೂಡ ಹಲವಾರು ಬಗೆಯ ವಿವಿಧ ವಿಧಗಳ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಪ್ರಸಾರವನ್ನು ಆರಂಭಿಸುತ್ತಲೇ ಇರುತ್ತವೆ. ಕಾಮಿಡಿ ಅಮ್ಮ ಮಕ್ಕಳ ನಡುವಿನ ಬಾಂಧವ್ಯವನ್ನು ತೋರಿಸುವಂತಹ ರಿಯಾಲಿಟಿ ಶೋಗಳು ಡ್ಯಾನ್ಸಿಂಗ್ ಶೋಗಳು ಸಿಂಗಿಂಗ್ ಶೋಗಳು ಹೀಗೆ ಹತ್ತು ಹಲವಾರು ಬಗೆಯ ರಿಯಲಿಟಿ ಶೋ ಕಾರ್ಯಕ್ರಮಗಳನ್ನು ಎರಡು ವಾಹಿನಿಗಳು ತೋರಿಸುವಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲೂ ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವನ್ನು ಆರಂಭಿಸಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಪ್ರಾರಂಭದಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ. ಇದು ಪಕ್ಕಾ ಕಾಮಿಡಿ ಕಾರ್ಯಕ್ರಮವಾಗಿದ್ದು ಪ್ರತಿಭಾವಂತ ಅಂದರೆ ಶನಿವಾರ ಹಾಗೂ ಭಾನುವಾರ ಪ್ರಸಾರವನ್ನು ಕಾಣುತ್ತದೆ.

ಇದಕ್ಕೂ ಮುನ್ನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ಸೂಪರ್ ಹಿಟ್ ರಿಯಾಲಿಟಿ ಶೋ ಕಾರ್ಯಕ್ರಮಗಳು ಯಶಸ್ಸನ್ನು ಪಡೆದುಕೊಂಡಿದ್ದವು. ಮೊದಲನೇದಾಗಿ ದಂಪತಿಗಳ ಅರ್ಥಪೂರ್ಣ ರಿಯಾಲಿಟಿ ಶೋ ಆಗಿರುವ ರಾಜ ರಾಣಿ ಯಶಸ್ಸನ್ನು ಪಡೆದುಕೊಂಡಿತ್ತು. ಅದಾದನಂತರ ಅಮ್ಮ ಮಕ್ಕಳ ಸೂಪರ್ ಹಿಟ್ ರಿಯಾಲಿಟಿ ಶೋ ಕಾರ್ಯಕ್ರಮ ವಾಗಿರುವ ನಮ್ಮಮ್ಮ ಸೂಪರ್ ಸ್ಟಾರ್ ಇತ್ತೀಚಿಗಷ್ಟೇ ಯಶಸ್ವಿಯಾಗಿ ಪೂರ್ಣಗೊಂಡಿತು. ಅದಾದನಂತರ ಈ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ತನ್ನ ಪ್ರಸಾರವನ್ನು ಆರಂಭಿಸಿದೆ. ಸೃಜನ್ ಲೋಕೇಶ್ ಹಾಗೂ ನಟಿ ಶ್ರುತಿ ಅವರು ಈ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಂಡರೆ ನಿರೂಪಕರಾಗಿ ಬಿಗ್ ಬಾಸ್ ಖ್ಯಾತಿಯ ಪಾವಗಡ ಮಂಜ ಹಾಗೂ ಕ್ರಿಕೆಟ್ ನಿರೂಪಕಿಯಾಗಿ ಇರುವ ರೀನ ಡಿಸೋಜ ಅವರು ಕಾಣಿಸಿಕೊಂಡಿದ್ದಾರೆ.

ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಸ್ಪರ್ಧಿಗಳಾಗಿ ಯಾರೆಲ್ಲ ಬರುತ್ತಿದ್ದಾರೆ ಎಂದು ನೋಡುವುದಾದರೆ ಚಂದನ್ ಶೆಟ್ಟಿ ಅವರ ಪತ್ನಿ ನಿವೇದಿತ ಗೌಡ ಎಲ್ಲರ ಮೆಚ್ಚಿನ ವಂಶಿಕ ಹರಿಣಿ ಶ್ರೀಕಾಂತ್ ಹಾಗೂ ಅವರ ಪತಿ ಶ್ರೀಕಾಂತ್ ಬಿಗ್ ಬಾಸ್ ಖ್ಯಾತಿಯ ಅಯ್ಯಪ್ಪ ಹೀಗೆ ಮುಂತಾದವರು ಬರುತ್ತಿದ್ದಾರೆ. ಅದರಲ್ಲೂ ಈ ಕಾರ್ಯಕ್ರಮದಲ್ಲಿ ಈಗ ಸುದ್ದಿಯಾಗುತ್ತಿರುವುದು ನಮ್ಮನೆಯುವರಾಣಿ ಖ್ಯಾತಿಯ ನಟಿ ಅಂಕಿತ ಅಮರ್ ಅವರ ತಂಗಿ ಆಗಿರುವ ಅನನ್ಯ ಅಮರ್ ರವರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಸೇರಿದಂತೆ ಹಲವೆಡೆ ಅಂಕಿತಾ ಅಮರ ರವರಿಗೆ ಅಭಿಮಾನಿಗಳ ಸಂಖ್ಯೆ ಹಾಗೂ ಜನಪ್ರಿಯತೆ ಹೆಚ್ಚಿದೆ. ಅವರ ತಂಗಿ ಆಗಿರುವ ಅನನ್ಯ ಅಮರ್ ರವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದಾಗಲೇ ಅಂಕಿತ ಅಮರ್ ರವರು ಕಿರುತೆರೆ ಲೋಕದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿ ಈಗಾಗಲೇ ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಈಗ ಅವರ ತಂಗಿ ಆಗಿರುವ ಅನನ್ಯ ಅಮರ್ ರವರು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಕಂಟೆಂಟ್ ಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮದೇ ಆದಂತಹ ಹಿಂಬಾಲಕರನ್ನು ಹೊಂದಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಅನನ್ಯ ಅಮರ್ ರವರ ಪ್ರತಿಭೆಯನ್ನು ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಸಾಬೀತುಪಡಿಸುವಂತಹ ಅವಕಾಶ ಸಿಕ್ಕಿದೆ.

ಅಕ್ಕನ ಹಾಗೆ ಅನನ್ಯ ಅಮರ್ ಅವರು ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಆಶಿಸೋಣ. ಈಗಾಗಲೇ ನಿಮಗೆ ತಿಳಿದಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನಲ್ ಸೃಷ್ಟಿಸಿರುವ ಪ್ರತಿಭೆಗಳಿಗೆ ಕಿರುತೆರೆಯ ವಾಹಿನಿಗಳು ಸಾಕಷ್ಟು ಅವಕಾಶವನ್ನು ನೀಡುತ್ತಿದ್ದು ಅನನ್ಯ ಅಮರ್ ಅವರಿಗೆ ಕೂಡ ಇದೇ ಮಾದರಿಯಲ್ಲಿ ಬಿತ್ತಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಒಂದು ಉತ್ತಮ ಅವಕಾಶ ದೊರಕಿದೆ. ಅದನ್ನು ಅವರು ಸದುಪಯೋಗಪಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಹಾಗೂ ಜನರ ಮೆಚ್ಚುಗೆಯನ್ನು ಪಡೆಯಲಿ. ಅಕ್ಕನಂತೆ ಕಿರುತೆರೆಯ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲಿ ಎಂಬುದಾಗಿ ಹಾರೈಸೋಣ.