ಕೆಜಿಎಫ್ 2 ಗೆ ಸೇರಿಕೊಂಡ ಮೇಲೆ ಶ್ರೀನಿಧಿ ಶೆಟ್ಟಿ ರವರ ಮನೆಯವರ ಕಡೆಯಿಂದ ಏನೆಲ್ಲಾ ಪ್ರಶ್ನೆಗಳು ಎದುರಾದವು ಗೊತ್ತೇ?? ಟಾಪ್ ಚಿತ್ರವಾದರೂ ಎಷ್ಟೆಲ್ಲಾ ಪ್ರಶ್ನೆಗಳು ಗೊತ್ತೇ??

48

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಾಪ್ಟರ್ 2 ಚಿತ್ರ ನಾಳೆ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಅಮೇರಿಕಾದಂತಹ ದೇಶಗಳಲ್ಲಿ ಇಂದೇ ಬಿಡುಗಡೆಯಾಗಲಿದೆ. ಹಲವಾರು ವರ್ಷಗಳ ಪರಿಶ್ರಮದ ಫಲ ನಾಳೆ ದೊರಕಲಿದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಈ ಚಿತ್ರದ ಕುರಿತಂತೆ ಈಗಾಗಲೇ ದೊಡ್ಡಮಟ್ಟದ ಜನಪ್ರಿಯತೆ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಇದೆ. ಒಟ್ಟಾರೆಯಾಗಿ ಎಂಟು ವರ್ಷಗಳ ಪರಿಶ್ರಮ ಕೆಜಿಎಫ್ ಸರಣಿ ಚಿತ್ರದ ಯಶಸ್ಸು ಎಂದರೆ ತಪ್ಪಾಗಲಾರದು.

ಕೆಜಿಎಫ್ ಚಾಪ್ಟರ್ 1ರಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ಅವರ ಎರಡನೇ ಚಿತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶ್ರೀನಿಧಿ ಶೆಟ್ಟಿಯವರಿಗೆ ಕೆಜಿಎಫ್ ಚಾಪ್ಟರ್ 1 ಮೊದಲ ಚಿತ್ರವಾಗಿತ್ತು. ಮಂಗಳೂರು ಮೂಲದ ಶ್ರೀನಿಧಿ ಶೆಟ್ಟಿಯವರಿಗೆ ಚಿತ್ರರಂಗ ಅಂದಿನ ಕಾಲದಲ್ಲಿ ಹೊಸದಾಗಿತ್ತು. ಇನ್ನು ಸಾಮಾನ್ಯವಾಗಿ ಹೊಸ ನಟಿಯರು ಎಂದರೆ ಖಂಡಿತವಾಗಿ ಒಂದಾದಮೇಲೊಂದರಂತೆ ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಯಾಕೆಂದರೆ ಪ್ರಾರಂಭದಲ್ಲಿ ಅವರಿಗೆ ಎಷ್ಟು ಸಿನಿಮಾಗಳಲ್ಲಿ ನಟಿಸುತ್ತಾರೆ ಅಷ್ಟು ಜನಪ್ರಿಯತೆ ಹಾಗೂ ಬೇಡಿಕೆ ಹೆಚ್ಚಾಗುತ್ತದೆ. ಆದರೆ ನಿಮಗೆ ತಿಳಿದಿರಲಿ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಚಾಪ್ಟರ್ 1 ಬಿಟ್ಟರೆ ನಟಿಸಿದ್ದು ಕೇವಲ ತಮಿಳು ಚಿತ್ರರಂಗದ ಸ್ಟಾರ್ ನಟನಾಗಿರುವ ವಿಕ್ರಂ ರವರ ಕೋಬ್ರಾ ಸಿನಿಮಾದಲ್ಲಿ.

ಇನ್ನೇನು ಅದು ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಈ ಕುರಿತಂತೆ ಶ್ರೀನಿಧಿ ಶೆಟ್ಟಿ ಅವರ ತಂದೆ-ತಾಯಿಯವರಿಗೆ ಬೇರೆ ನಟಿಯರನ್ನು ಹೋಲಿಸಿ ಬೇರೆಯವರು ಯಾಕೆ ನಿಮ್ಮ ಮಗಳು ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎನ್ನುವುದಾಗಿ ಪ್ರಶ್ನೆಯನ್ನು ಮಾಡುತ್ತಿದ್ದರಂತೆ. ಅದಕ್ಕೆ ನಟಿ ಶ್ರೀನಿಧಿ ಶೆಟ್ಟಿ ಅವರು ಹೇಳುವ ಧೈರ್ಯದ ಉತ್ತರವೇನೆಂದರೆ ಕೆಜಿಎಫ್ ಚಾಪ್ಟರ್ 2 ಸಾಮಾನ್ಯ ಸಿನಿಮಾವಲ್ಲ. ಇದರಲ್ಲಿ ನಟಿಸಿರುವ ರವೀನ ತಂಡನ್ ಪ್ರಕಾಶ್ ರೈ ಸೇರಿದಂತೆ ಮುಂತಾದ ಕಲಾವಿದರೊಂದಿಗೆ ನಟಿಸುವುದು ಒಂದೊಂದು ಸಿನಿಮಾದಲ್ಲಿ ನಟಿಸಿರುವ ಅನುಭವವನ್ನು ಪಡೆದಂತೆ ಎನ್ನುವುದಾಗಿ ಮಾತನಾಡುತ್ತಾರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ನಟಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ. ಈಗಾಗಲೇ ರೀನಾ ಪಾತ್ರದ ಮೂಲಕ ಕೆಜಿಎಫ್ ಚಾಪ್ಟರ್ 1ರಲ್ಲಿ ಮಿಂಚನ್ನು ಹರಿಸಿರುವ ಶ್ರೀನಿಧಿ ಶೆಟ್ಟಿ ಚಾಪ್ಟರ್ 2ರಲ್ಲಿ ಕೂಡ ಪ್ರೇಕ್ಷಕರ ಮನ ಗೆಲ್ಲುವುದಕ್ಕೆ ಸಿದ್ಧರಾಗಿದ್ದಾರೆ.