ಆಲಿಯಾ ಭಟ್ ಮದುವೆಯಾಗುತ್ತಿರುವ ರಣಬೀರ್ ಕಪೂರ್ ರವರ ಒಟ್ಟು ಆಸ್ತಿಯ ಮೂಲ್ಯ ಎಷ್ಟು ಗೊತ್ತೇ?? ಒಟ್ಟಾರೆ ಆಸ್ತಿ ಎಷ್ಟೆಲ್ಲ ಇದೆ ಗೊತ್ತೇ??

44

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳು ಎಂದ ಮೇಲೆ ಯಶಸ್ವಿಯಾಗಿಯೇ ಇರುತ್ತಾರೆ. ಹೀಗಾಗಿ ಅವರ ಆಸ್ತಿಯ ಲೆಕ್ಕಾಚಾರವೂ ಕೂಡ ದೊಡ್ಡಮಟ್ಟದಲ್ಲಿ ನಡೆಯುತ್ತದೆ. ಇಂದು ನಾವು ಮಾತನಾಡಲು ಹೊರಟಿರುವುದು ರಣಬೀರ್ ಕಪೂರ್ ಅವರ ಕುರಿತಂತೆ. ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ನಟಿಯಾಗಿರುವ ರಿಷಿ ಕಪೂರ್ ಹಾಗೂ ನೀತು ಸಿಂಗ್ ರವರ ಮಗನಾಗಿ ಇವರು ಜನಿಸುತ್ತಾರೆ. ಬಾಲಿವುಡ್ ಚಿತ್ರರಂಗದಲ್ಲಿ ಆರಂಭಿಕ ದಿನಗಳಲ್ಲಿ ಹೇಳಿಕೊಳ್ಳುವಷ್ಟು ನಟನಾ ಪ್ರದರ್ಶನವನ್ನಾಗಲಿ ಚಿತ್ರ ಯಶಸ್ವಿಯಾಗಲಿ ಪಡೆಯುವುದಿಲ್ಲ.

ಆದರೆ ಬರಬರುತ್ತಾ ಒಂದೊಂದು ಅದ್ಭುತ ಪಾತ್ರಗಳ ಮೂಲಕ ತಮ್ಮ ನಿಜವಾದ ಸಾಮರ್ಥ್ಯ ಏನೆಂಬುದನ್ನು ರಣಬೀರ್ ಕಪೂರ್ ರವರು ಬಾಲಿವುಡ್ ಪ್ರೇಕ್ಷಕರಿಗೆ ತೋರಿಸುತ್ತ ಹೋಗುತ್ತಾರೆ. ಈಗ ಬಾಲಿವುಡ್ ಚಿತ್ರರಂಗದ ಟಾಪ್ ನಟರಲ್ಲಿ ಅಗ್ರ ಸಾಲಿನಲ್ಲಿ ರಣಬೀರ್ ಕಪೂರ್ ಅವರು ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಅವರ ನಟನೆಗೆ ದೊಡ್ಡಮಟ್ಟದ ಮಹಿಳಾ ಅಭಿಮಾನಿಗಳ ಬಳಗವೇ ಇದೆ. ಮೊದಮೊದಲಿಗೆ ರಣಬೀರ್ ಕಪೂರ್ ಅವರ ಹೆಸರು ಹಲವಾರು ನಟಿಯರೊಂದಿಗೆ ಕೇಳಿಬಂದಿತ್ತಾದರೂ ಕೂಡ ಈಗ ಆಲಿಯಾ ಭಟ್ ಅವರೊಂದಿಗೆ ಮದುವೆಯಾಗುವುದು ಕನ್ಫರ್ಮ್ ಆಗಿದೆ. ಅತಿ ಶೀಘ್ರದಲ್ಲಿಯೇ ಇವರಿಬ್ಬರ ಮದುವೆ 80ರಿಂದ 100 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎನ್ನುವುದಾಗಿ ಕೇಳಿ ತಿಳಿದು ಬಂದಿದೆ. ಇನ್ನು ಅಭಿಮಾನಿಗಳು ಸೇರಿದಂತೆ ಹಲವಾರು ಸಿನಿಮಾ ಆಸಕ್ತರು ರಣಬೀರ್ ಕಪೂರ್ ಅವರ ಒಟ್ಟು ಆಸ್ತಿಯ ಕುರಿತಂತೆ ಸಾಕಷ್ಟು ಕುತೂಹಲ ರಾಗಿದ್ದಾರೆ.

ಅವರ ಕುತೂಹಲವನ್ನು ಕೂಡ ನಾವು ತಣಿಸುವ ಪ್ರಯತ್ನವನ್ನು ಮಾಡೋಣ. ಹೌದು ಗೆಳೆಯರೇ ರಣಬೀರ್ ಕಪೂರ್ ಅವರು ಪ್ರತಿಯೊಂದು ಸಿನಿಮಾಗೆ 50 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರಂತೆ. ಇದು ಸಂಭಾವನೆಯನ್ನು ಇದಕ್ಕಿಂತ ಹೆಚ್ಚಾಗಿ ಲಾಭದಲ್ಲಿ ಪಡೆಯುವಂತಹ ಹಣ ಎಂದು ಹೇಳಬಹುದಾಗಿದೆ. ಇನ್ನು ಜಾಹೀರಾತುಗಳಲ್ಲಿ ಕೂಡ ಕಾಣಿಸುವ ರಣಬೀರ್ ಕಪೂರ್ ಅವರು ಉತ್ತಮ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಒಟ್ಟಾರೆಯಾಗಿ ರಣಬೀರ್ ಕಪೂರ್ ಅವರ ಹೆಸರಿನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಇದೆ ಎಂದು ಕೇಳಿ ಬಂದಿದೆ. ಅತಿಶೀಘ್ರದಲ್ಲೇ ಆಲಿಯಾ ಭಟ್ ಅವರೊಂದಿಗೆ ಮದುವೆಯಾಗಲಿರುವ ರಣಬೀರ್ ಕಪೂರ್ ರವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸೋಣ.