ತಮಾಷೆ ಎಂದು ಮದುಮಗನ ತಂಗಿ ಮಾಡಿದ ಈ ಒಂದು ಕೆಲಸಕ್ಕೆ ಮದುವೆ ಮನೆಯಲ್ಲಿ ನಡೆದ್ದಡೇನು ಗೊತ್ತೇ?? ಯಾರಾದರೂ ಹೀಗೆ ಮಾಡುತ್ತಾರೆಯೇ ಎಂದ ನೆಟ್ಟಿಗರು.

290

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗ ಎಲ್ಲರೂ ಕೂಡ ಮದುವೆ ಆಗುವ ಮುನ್ನ ಬ್ಯಾಚುಲರ್ ಪಾರ್ಟಿ ಮಾಡುತ್ತಾರೆ ಎನ್ನುವುದು ನಿಮಗೆ ತಿಳಿದಿದೆ. ಕೇವಲ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಮದುವೆಯಾಗುವ ಮುನ್ನ ತಮ್ಮ ಗೆಳೆಯ ಹಾಗೂ ಗೆಳತಿಯರೊಂದಿಗೆ ಈ ರೀತಿಯ ಸಂತೋಷಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈಗ ಮದುವೆ ಆಗುವ ಸಂದರ್ಭದಲ್ಲಿ ಹುಡುಗಿಗೆ ಹುಡುಗನ ತಂಗಿಯೊಬ್ಬಳು ಮಾಡಿದ ತಮಾಷೆಯಿಂದ ಈಗ ನಡೆದಿರುವುದು ಏನು ಎಂದು ತಿಳಿದರೆ ನೀವು ಕೂಡ ಬೆಚ್ಚಿ ಬೀಳುತ್ತೀರಿ. ಹಾಗಿದ್ದರೆ ಇದು ಏನು ಕಥೆ ಎನ್ನುವುದನ್ನು ತಿಳಿಯೋಣ ಬನ್ನಿ.

ಇನ್ನು ಇಲ್ಲಿ ನಿಜವಾಗಿ ಹೇಳಬೇಕೆಂದರೆ ಗಂಡಿನ ತಂಗಿ ಹೆಣ್ಣಿನ ಸಹೋದರಿಯ ಕುರಿತಂತೆ ಈ ಸಂದರ್ಭದಲ್ಲಿ ತಮಾಷೆಯಾಗಿ ಮಾತನಾಡುತ್ತಾಳೆ. ಈ ಪಾರ್ಟಿಯ ಸಂದರ್ಭದಲ್ಲಿ ಎಲ್ಲರೂ ಕೂಡ ಮದುವೆಯಾಗುವ ಹುಡುಗಿಯನ್ನು ಸಂತೋಷದಲ್ಲಿ ನೋಡಬೇಕು ಎನ್ನುವುದನ್ನು ಆಸೆ ಪಟ್ಟಿದ್ದರು. ಆದರೆ ಆ ಹುಡುಗಿ ಮದುವೆ ಆಗುವ ಹುಡುಗಿಯ ಸಹೋದರಿಯ ಕುರಿತಂತೆ ಮಾತನಾಡಿ ಎಲ್ಲರನ್ನು ಭಾವುಕತೆಗೆ ತಳ್ಳುತ್ತಾರೆ. ಯಾಕೆಂದರೆ ಮದುವೆ ಆಗುವ ಹುಡುಗಿಯ ಸಹೋದರಿ ಕೆಲವು ವರ್ಷಗಳ ಹಿಂದೆಯೇ ಮರಣವನ್ನು ಹೊಂದಿದ್ದಳು.

ಮದುವೆ ಹೆಣ್ಣುಮಗಳ ಬ್ಯಾಚುಲರ್ ಪಾರ್ಟಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಮದುಮಗನ ತಂಗಿ ಸರ್ಪ್ರೈಸ್ ಅತಿಥಿಯನ್ನು ಕರೆತರುವುದಾಗಿ ಹೇಳುತ್ತಾಳೆ. ಆಗ ಅಲ್ಲಿ ಆಕೆ ಅಸ್ತಿಪಂಜರದ ಜೊತೆಗೆ ಬರುತ್ತಾಳೆ. ಅಸ್ತಿಪಂಜರಕ್ಕೆ ಮದುಮಗಳ ಸಹೋದರಿಯ ಬಟ್ಟೆಯನ್ನು ಹಾಕಿಕೊಂಡು ಬರಲಾಗುತ್ತದೆ. ನಿಜವಾಗಿ ಹೇಳಬೇಕೆಂದರೆ ಕೆಲವು ಸಮಯಗಳ ಹಿಂದಷ್ಟೇ ಅತಿ ಚಿಕ್ಕ ವಯಸ್ಸಿನಲ್ಲಿ ಮದುಮಗಳ ಸಹೋದರಿ ಮರಣವನ್ನು ಹೊಂದಿರುತ್ತಾಳೆ.

ಇದು ನೆರೆದವರಲ್ಲಿ ದುಃಖವನ್ನು ಮನೆ ಮಾಡಿಸಿತ್ತು. ಇಷ್ಟು ಮಾತ್ರವಲ್ಲದೆ ಮದುಮಗಳು ಹಾಗೂ ಆಕೆಯ ಪರಿವಾರದವರು ಇದರಿಂದಾಗಿ ಸಾಕಷ್ಟು ದುಃಖಿತರಾಗುತ್ತಾರೆ. ಎಲ್ಲರೂ ಎಷ್ಟು ಕೋಪಗೊಳ್ಳುತ್ತಾರೆ ಎಂದರೆ ಮದುವೆ ನಿಲ್ಲುವ ಸ್ಥಳ ಮಟ್ಟಿಗೆ ಹೋಗುತ್ತದೆ. ಇದನ್ನು ತಿಳಿದಂತಹ ಮದುಮಗ ತನ್ನ ತಂಗಿ ಮಾಡಿದ ಕೆಲಸಕ್ಕೆ ಆಕೆಗೆ ಸರಿಯಾಗಿ ಗದರುತ್ತಾನೆ. ತನ್ನ ಮದುವೆಯನ್ನು ಮುರಿಯದಂತೆ ಕಾಪಾಡಿಕೊಳ್ಳಲು ತನ್ನ ತಂಗಿಯನ್ನು ಮದುವೆಗೆ ಬಾರದಂತೆ ತಾಕೀತು ಕೂಡ ಮಾಡುತ್ತಾನೆ.

ಮದುಮಗ ಇಂತಹ ತೀರ್ಮಾನವನ್ನು ಮಾಡಿದ ನಂತರವೇ ಮದುಮಗಳು ಆತನನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾಳೆ. ನಂತರ ಇಬ್ಬರೂ ಮದುವೆಯು ಕೂಡ ಸಾಂಗವಾಗಿ ನೆರವೇರಿದೆ ಎಂಬುದಾಗಿ ಕೂಡ ಸುದ್ದಿ ತಿಳಿದು ಬರುತ್ತದೆ. ಒಟ್ಟಾರೆಯಾಗಿ ಒಂದು ಚಿಕ್ಕ ವಿಷಯ ಆದರೂ ಕೂಡ ಅದರ ಹಿಂದೆ ಅಡಗಿರುವ ಅಂತಹ ಕೆಲವೊಂದು ಅವ್ಯಕ್ತ ಭಾವನೆಗಳು ಸಾಕಷ್ಟು ದುಃಖವನ್ನು ಮೂಡಿಸುತ್ತವೆ ಎನ್ನುವುದಕ್ಕೆ ಇದೇ ಮದುವೆ ಕಾರಣವಾಗಿದೆ.

ಮದುವೆಯಂತಹ ಸಮಾರಂಭಗಳಲ್ಲಿ ತಮಾಷೆ ಮಾಡುವುದು ತಪ್ಪಲ್ಲ ಆದರೆ ಬೇರೆಯವರ ಭಾವನೆಗೆ ಧಕ್ಕೆ ತರುವಂತಹ ವಿಚಾರಗಳನ್ನು ಮಾಡುವುದು ನಿಜಕ್ಕೂ ಕೂಡ ತರವಲ್ಲ. ಇಂತಹ ಕಾರ್ಯಗಳು ಖಂಡಿತವಾಗಿ ಸಂಬಂಧಗಳ ನಡುವೆ ಬಿರುಕು ಮೂಡಿಸುವಂತಹ ಕಾರ್ಯಗಳಾಗಿ ಮಾರ್ಪಾಡಾಗುತ್ತದೆ. ಹೀಗಾಗಿ ಪ್ರತಿಯೊಬ್ಬರ ಜೊತೆಗೆ ಮಾತನಾಡುವಾಗ ಹಾಗೂ ವ್ಯವಹರಿಸುವಾಗ ಅದರ ಕುರಿತಂತೆ ಸಾವಿರ ಬಾರಿ ಯೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ಇದೇ ಮದುವೆಯನ್ನು ತೆಗೆದುಕೊಳ್ಳಿ ಸಹೋದರಿಯನ್ನು ಕಳೆದುಕೊಂಡಿರುವ ದುಃಖದಲ್ಲಿ ಆ ಮದುಮಗಳು ಇರಬೇಕಾದರೆ ಇದೇ ಸಂದರ್ಭದಲ್ಲಿ ಮದುಮಗನ ತಂಗಿ ಕೇವಲ ಚೇಷ್ಟೆ ಗಾಗಿ ಮತ್ತೆ ಮಧುಮಗಳ ಮುಖದಲ್ಲಿ ದುಃಖ ಮೂಡುವಂತೆ ಮಾಡುತ್ತಾಳೆ. ಅದರಿಂದ ಅವರಿಗೆ ದುಃಖವಾಗುತ್ತದೆ ಎನ್ನುವುದು ಗೊತ್ತಿದ್ದ ಮೇಲೆ ಕೂಡ ಹಾಗೆ ಮಾಡುವುದು ನಿಜಕ್ಕೂ ಕೂಡ ಅಕ್ಷಮ್ಯ ಅಪರಾಧ ಎಂದರೆ ತಪ್ಪಾಗಲಾರದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.