ಸಂಖ್ಯಾಶಾಸ್ತ್ರದ ಪ್ರಕಾರ ಈ ಮೂಲಾಂಕ ಹೊಂದಿರುವವರಿಗೆ ಆಗಲಿದೆ ಧನಲಾಭ, ಮೂಲಾಂಕ ಹೇಗೆ ತಿಳಿಯುವುದು, ಹಾಗೂ ಮುಂದಿನ ದಿನಗಳು ಹೇಗಿರಲಿವೆ ಗೊತ್ತೇ?

74

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಮೂಲಕ ಎನ್ನುವುದು ನಿಮಗೆ ಮೊದಲ ತಿಳಿದಿರಬೇಕು. ಮೂಲಕ ಎಂದರೆ ನಿಮ್ಮ ಜನ್ಮದಿನದ ತಾರೀಕನ್ನು ಕೂಡಿದಾಗ ಬರುವಂತಹ ಸಂಖ್ಯೆ. ಅಂದರೆ ಒಂದು ವೇಳೆ ನೀವು 17 ನೇ ತಾರೀಕು ಹುಟ್ಟಿದರೆ 1+ 7 = 8. ಆಗ 8 ನಿಮ್ಮ ಮೂಲಾಂಕ ವಾಗಿರುತ್ತದೆ. ಹೀಗೆ ಇದೇ ಏಪ್ರಿಲ್ ತಿಂಗಳ ಎರಡನೇ ವಾರದಿಂದ ಇವರಲ್ಲಿ ಕೆಲವರಿಗೆ ಶುಭ ಹಾಗೂ ಇನ್ನು ಕೆಲವರಿಗೆ ಅಶುಭದಿನಗಳು ಪ್ರಾರಂಭವಾಗಲಿವೆ ಎಂಬುದಾಗಿ ಉಲ್ಲೇಖವಾಗಿದೆ. ಹಾಗಿದ್ದರೆ ಯಾವ ಮೂಲಾಂಕ ದವರಿಗೆ ಯಾವ ಫಲ ಕಾದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೂಲಾಂಕ 1; ಪ್ರೀತಿಯಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಮಿತಿಮೀರಿದ ವೆಚ್ಚಗಳು ಹಾಗೂ ಕೆಲಸದಲ್ಲಿ ಆಗಾಗ ಕಂಡುಬರುವಂತಹ ಅಡೆತಡೆಗಳು ನಿಮ್ಮ ಮನಸ್ಸನ್ನು ಚಂಚಲಿತರನ್ನಾಗಿ ಮಾಡುತ್ತದೆ. ಯಾವುದೇ ವಿಚಾರವನ್ನು ಮನಸ್ಸಿಗೆ ಹೆಚ್ಚಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಹೇಗೆ ಇರುತ್ತೀರೋ ಅದೇ ಪರಿಕ್ರಮ ಗಳು ಚಲಾವಣೆಯಲ್ಲಿ ಇರಲಿ. ಬೇರೆ ಬದಲಾವಣೆಗಳನ್ನು ಮಾಡುವುದಕ್ಕೆ ಹೋಗುವುದು ಬೇಡ. ಇನ್ನು ನಿಮ್ಮ ಅದೃಷ್ಟದ ಬಣ್ಣ ಕೇಸರಿ ಹಾಗೂ ಅದೃಷ್ಟದ ಸಂಖ್ಯೆ 3.

ಮೂಲಾಂಕ 2; ಅತ್ಯಂತ ಶೀಘ್ರದಲ್ಲೇ ಆರ್ಥಿಕ ಲಾಭ ನಿಮ್ಮನ್ನು ಹುಡುಕಿಕೊಂಡು ಬರಲಿದ್ದು ನಿಮ್ಮ ವೈವಾಹಿಕ ಜೀವನದಲ್ಲಿ ಕೂಡ ಸಂತೋಷ ನೆಲೆಸಲಿದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳು ಕೂಡ ಎದುರಾಗ ಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವರಿಗೆ ಸಿಹಿ ಸುದ್ದಿ ಕೇಳಿ ಬರಲಿದೆ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕೂಡ ಕಾಡಲಿದೆ. ನಿಮ್ಮ ಅದೃಷ್ಟದ ಬಣ್ಣ ಕಂದು ಹಾಗೂ ನಿಮ್ಮ ಅದೃಷ್ಟದ ಸಂಖ್ಯೆ 5.

ಮೂಲಾಂಕ 3; ಹಣಕಾಸಿನಲ್ಲಿ ಅದೃಷ್ಟ ನಿಮ್ಮ ಸಾಥ್ ನೀಡಲಿದೆ. ಬಹುತೇಕ ಎಲ್ಲರ ವೈವಾಹಿಕ ಜೀವನ ಎನ್ನುವುದು ನೆಮ್ಮದಿಯಿಂದ ಸಾಗಲಿದೆ ಆದರೆ ಮಕ್ಕಳ ಕುರಿತಂತೆ ಯೋಚಿಸಬಹುದಾದಂತಹ ಸಮಯಗಳು ಕೂಡ ಬರಬಹುದಾಗಿದೆ. ಯಾವುದೇ ವಿದ್ಯುತ್ ಚಾಲಿತ ಯಂತ್ರೋಪಕರಣಗಳನ್ನು ಉಪಯೋಗಿಸುವಾಗ ನಿಗಾವಹಿಸಿ. ನಿಮ್ಮ ಅದೃಷ್ಟದ ಬಣ್ಣವು ಕೂಡ ಕೇಸರಿ ಹಾಗೂ ಅದೃಷ್ಟದ ಸಂಖ್ಯೆ 5.

ಮೂಲಾಂಕ 4; ಅವಿರತ ಪ್ರಯತ್ನದಿಂದಾಗಿ ಆರ್ಥಿಕ ಲಾಭವನ್ನು ಪಡೆಯಲು ನಿಮಗೆ ಸಾಧ್ಯವಾಗಲಿದೆ. ದಾಂಪತ್ಯ ಜೀವನದಲ್ಲಿ ಹಲವಾರು ನೆಗೆಟಿವ್ ವಿಚಾರಗಳು ನಿಮ್ಮನ್ನು ಕಾಡಲಿವೆ. ಕೊನೆಕ್ಷಣದಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಒಂದಾದರೂ ಕೆಲಸ ಉಳಿದುಕೊಳ್ಳುತ್ತದೆ. ಕೆಮ್ಮಿನ ಸಮಸ್ಯೆ ನಿಮ್ಮನ್ನು ಕಾಡಬಹುದು ಇದರಿಂದ ಸ್ವಲ್ಪ ಜಾಗೃತರಾಗಿರಿ. ನಿಮ್ಮ ಅದೃಷ್ಟದ ಬಣ್ಣ ಆಕಾಶ ನೀಲಿ ಹಾಗೂ ಅದೃಷ್ಟದ ಸಂಖ್ಯೆ 1.

ಮೂಲಾಂಕ 5; ಈ ವಾರ ನಿಮಗೆ ಹಲವಾರು ಶುಭ ಸುದ್ದಿಗಳು ಸಂತೋಷಪಡಿಸಲು ಕಾಯುತ್ತಿವೆ. ದೂರದ ಪ್ರವಾಸಗಳು ಕೂಡ ನಿಮ್ಮ ಜೀವನದಲ್ಲಿ ಸಂತೋಷವನ್ನು ತರಲಿವೆ. ಆರ್ಥಿಕ ಹೂಡಿಕೆಯ ಕುರಿತಂತೆ ಯಾವುದೇ ವಿಚಾರದಲ್ಲಿ ಕೂಡ ನೂರು ಬಾರಿ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಉತ್ತಮ. ಇವರ ಅದೃಷ್ಟ ಬಣ್ಣ ಕೂಡ ಆಕಾಶ ನೀಲಿ ಹಾಗೂ ಅದೃಷ್ಟದ ಸಂಖ್ಯೆ 1.

ಮೂಲಾಂಕ 6; ಒಂದೇ ಸಮನೆ ಬರದಿದ್ದರೂ ಕೂಡ ಆರ್ಥಿಕ ಲಾಭಗಳು ಒಂದೊಂದಾಗಿಯೇ ಕೈಸೇರಲಿದೆ. ನೀವು ಮಾಡುವ ಪ್ರಯಾಣ ದಿಂದಲೂ ಕೂಡ ನೀವು ಉತ್ತಮ ಲಾಭವನ್ನು ಪಡೆದುಕೊಳ್ಳುವುದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡಲಿದೆ. ಇವರ ಆದಷ್ಟು ಶಾಂತವಾಗಿರಲು ಪ್ರಯತ್ನಿಸಿ ಯಾಕೆಂದರೆ ಹೃದಯದ ಸಮಸ್ಯೆ ನಿಮ್ಮನ್ನು ಕಾಡುವುದು ದಟ್ಟವಾಗಿ ಕಾಣುತ್ತಿದೆ. ನಿಮ್ಮ ಅದೃಷ್ಟದ ಬಣ್ಣ ತಿಳಿ ನೇರಳೆ ಹಾಗೂ ಅದೃಷ್ಟದ ಸಂಖ್ಯೆ 3.

ಮೂಲಾಂಕ 7; ಆದಷ್ಟು ತಾಳ್ಮೆಯಿಂದ ಕೆಲಸ ಮಾಡಿ ಹಲವಾರು ಅಡೆತಡೆಗಳಿದ್ದರೂ ಕೂಡ ನಿಮ್ಮ ಕೆಲಸ ಪೂರ್ಣ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ಸಂಗಾತಿಯ ಕುರಿತಂತೆ ವಿಶೇಷವಾದ ಕಾಳಜಿಯನ್ನು ವಹಿಸಿ ಯಾಕೆಂದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕುಟುಂಬ ಕಲಹಗಳು ಅತಿಶೀಘ್ರದಲ್ಲಿ ನಿಮ್ಮ ಕುಟುಂಬಕ್ಕೆ ಕಾಲಿಡಲಿದೆ. ಎಷ್ಟೇ ಸಮಸ್ಯೆಗಳನ್ನು ಎದುರಿಸಿದರು ಕೂಡ ವಾರದ ಕೊನೆಯಲ್ಲಿ ಒಂದು ಒಳ್ಳೆ ಶುಭ ಸುದ್ದಿಯನ್ನು ಕೇಳಲಿದ್ದೀರಿ. ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ 2.

ಮೂಲಾಂಕ 8; ಇವರ ಆದಷ್ಟು ನೀವು ಅರ್ಧಕ್ಕೆ ನಿಂತಿರುವ ಅಂತಹ ಕೆಲಸಗಳ ಕುರಿತಂತೆ ಯೋಚಿಸುತ್ತಿರುತ್ತೀರಿ. ಪ್ರಯಾಣದ ಸಂದರ್ಭದಲ್ಲಿ ಹುಷಾರಾಗಿರಿ. ಕರುಳಿನ ಸಮಸ್ಯೆಯ ಕುರಿತಂತೆ ಜಾಗೃತರಾಗಿರಿ ಹಾಗೂ ವೈದ್ಯರನ್ನು ಕಾಣುವುದು ಉತ್ತಮ. ಅದೃಷ್ಟದ ಬಣ್ಣ ತಿಳಿ ನೇರಳೆ ಹಾಗೂ ಅದೃಷ್ಟದ ಸಂಖ್ಯೆ 3.

ಮೂಲಾಂಕ 9; ಇವರ ಸ್ವಲ್ಪ ಹೆಚ್ಚಿನ ಮಟ್ಟದ ಪರಿಶ್ರಮವನ್ನು ನಿಮ್ಮ ಕೆಲಸಗಳಲ್ಲಿ ವಿನಿಯೋಗಿಸುವುದು ನಿಮ್ಮ ಲಾಭಕ್ಕೆ ದಾರಿಯಾಗಲಿದೆ. ಪೋಷಕರಿಂದ ಸಿಹಿ ಸುದ್ದಿ ಕೂಡ ಕೇಳಿ ಬರುವ ನಿರೀಕ್ಷೆ ಇದೆ. ವಾಹನ ಚಲಾವಣೆ ಸಂದರ್ಭದಲ್ಲಿ ಜಾಗೃತರಾಗಿರಿ ಹಾಗೂ ನಿಮ್ಮ ವಸ್ತುಗಳನ್ನು ಬೇರೆಯವರು ಕದಿಯದಂತೆ ಹುಷಾರಾಗಿರಿ. ನಿಮ್ಮ ಅದೃಷ್ಟದ ಬಣ್ಣ ತಿಳಿ ಕೆಂಪು ಹಾಗೂ ಅದೃಷ್ಟದ ಸಂಖ್ಯೆ 1. ಇವುಗಳಲ್ಲಿ ನಿಮ್ಮ ಮೂಲಾಂಕ ಯಾವುದು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.