ಅಂದಿನ ಕಾಲದಲ್ಲಿಯೇ ಭರ್ಜರಿ ಯಶಸ್ಸು ಕಂಡಿದ್ದ ಎಡಕಲ್ಲು ಗುಡ್ಡದ ಮೇಲೆ ಸಿನೆಮಾವನ್ನು ಮೊದಲು ಜಯಂತಿ ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತೇ??

50

ನಮಸ್ಕಾರ ಸ್ನೇಹಿತರೇ ನಟಿ ಜಯಂತಿ ಅಮ್ಮನವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಅಭಿನಯ ಶಾರದೆ ಎನ್ನುವುದಾಗಿ ಗುರುತಿಸಿಕೊಂಡಿದ್ದರು. ಇನ್ನು ಇವರು ಜನಿಸಿದ್ದು ಬಳ್ಳಾರಿ ಜಿಲ್ಲೆಯಲ್ಲಿ. ಇವರ ಮೂಲ ಹೆಸರು ಕಮಲಕುಮಾರಿ ಎನ್ನುವುದಾಗಿ. ಇನ್ನು ಮದ್ರಾಸಿಗೆ ಬಂದಂತಹ ನಟಿ ಜಯಂತಿ ಅವರು 13ನೇ ವಯಸ್ಸಿನಲ್ಲಿ ಜೇನುಗೂಡು ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಇಲ್ಲಿಂದಲೇ ಅವರಿಗೆ ಸಿನಿಮಾದಲ್ಲಿ ಹೇಗೆ ನಟಿಸಬೇಕು ಸಿನಿಮಾದಲ್ಲಿ ಹೇಗಿರುತ್ತಾರೆ ಎನ್ನುವುದರ ಆದ ಅನುಭವ ಅರಿವಾಗಿದ್ದು.

ಮೊದಲ ಬಾರಿಗೆ ನಟಿ ಜಯಂತಿ ರವರು ನಾಯಕಿಯಾಗಿ ಕಾಣಿಸಿಕೊಂಡಿದ್ದ ಚಂದವಳ್ಳಿಯ ತೋಟ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಅವರು ನಟಸಾರ್ವಭೌಮ ರಾಜಕುಮಾರ್ ಅವರ ಜೊತೆಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ರಾಷ್ಟ್ರಪತಿಯವರ ರಜತ ಪದಕದ ಬಹುಮಾನ ಕೂಡ ಸಿಗುತ್ತದೆ. ರಾಜಕುಮಾರ್ ಅವರೊಂದಿಗೆ ಸಾಕಷ್ಟು ಸ್ನೇಹ ಭಾವವನ್ನು ಹೊಂದಿದ್ದ ಜಯಂತಿ ರವರು ಅವರೊಂದಿಗೆ ಹೆಚ್ಚಿನ ಸಿನಿಮಾದಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ. ಕೇವಲ ಅಣ್ಣಾವ್ರು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಹಲವಾರು ಘಟಾನುಘಟಿ ನಟರೊಂದಿಗೆ ಕೂಡ ನಟಿಸಿದ್ದಾರೆ.

ನಟಿ ಜಯಂತಿ ರವರು ಪ್ರಮುಖವಾಗಿ ಎಲ್ಲರಿಗೂ ಇಷ್ಟವಾಗುತ್ತಿದ್ದುದು ಯಾವುದು ಐಕಾನಿಕ್ ನಟನೆಯ ಮೂಲಕ. ಎಲ್ಲ ಯಾಕೆ ಹೇಳಿ ನಾಗರಹಾವು ಚಿತ್ರದಲ್ಲಿ ಒನಕೆ ಒಬ್ಬವ್ವನ ಪಾತ್ರದಲ್ಲಿ ಕೆಲವೇ ಕೆಲವು ನಿಮಿಷಗಳ ಕಾಲ ಅವರು ನಮಗೆ ಕಾಣಿಸುತ್ತಾರೆ. ಆದರೂ ಕೂಡ ಇಂದಿಗೂ ಆ ಸಣ್ಣ ಪಾತ್ರವೂ ಕೂಡ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಇನ್ನು ಪ್ರತಿಯೊಬ್ಬ ಕನ್ನಡ ಸಿನಿಮಾ ಪ್ರೇಕ್ಷಕರು ಕೂಡ ಜಯಂತಿಯವರ ಸಿನಿಮಾ ಜೀವನದ ಪ್ರಮುಖ ಚಿತ್ರವಾಗಿರುವ ಎಡಕಲ್ಲು ಗುಡ್ಡದ ಮೇಲೆ ಸಿನಿಮಾವನ್ನು ಪ್ರತಿ ಬಾರಿಯೂ ಕೂಡ ನೆನಪಿಸಿಕೊಳ್ಳುತ್ತಾರೆ.

ನಟಿ ಜಯಂತಿ ಅವರ ಸಿನಿಮಾ ಕರಿಯರ್ ನಲ್ಲಿ ಎಡಕಲು ಗುಡ್ಡದ ಮೇಲೆ ಸಿನಿಮಾ ಒಂದು ಮಹತ್ವವಾದ ತಿರುವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಆದರೆ ನಿಮಗೆ ಗೊತ್ತಿಲ್ಲದ ಇರುವಂತಹ ಒಂದು ವಿಚಾರವನ್ನು ಇಂದಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿದ್ದೇವೆ. ಮೊದಲಿಗೆ ನಟಿ ಜಯಂತಿ ರವರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರು ಚಿತ್ರದ ಕಥೆಯನ್ನು ವಿವರಿಸಿದಾಗ ನಟಿಸಲು ಒಪ್ಪಿರಲಿಲ್ಲ. ಇಲ್ಲಿ ಋಣಾತ್ಮಕ ವಿಚಾರಗಳು ಈ ಪಾತ್ರದಲ್ಲಿ ಹೆಚ್ಚಾಗಿದೆ ನನ್ನ ಬದಲು ಈ ಪಾತ್ರಕ್ಕಾಗಿ ಬೇರೆಯವರನ್ನು ಆಯ್ಕೆ ಮಾಡಬಹುದಲ್ಲ ಎನ್ನುವ ಪುಟ್ಟಣ್ಣ ಕಣಗಾಲ್ ಅವರಿಗೆ ಸೂಚಿಸಿದ್ದರು.

ನಿಮಗೆ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎನ್ನುವುದಾಗಿ ಪುಟ್ಟಣ್ಣ ಕಣಗಲ್ ರವರನ್ನು ಕರೆಯುತ್ತಾರೆ. ಅವರು ಸುಖಾಸುಮ್ಮನೆ ಯಾವುದಾದರೂ ವ್ಯಕ್ತಿಯನ್ನು ಅಥವಾ ನಟ-ನಟಿಯರನ್ನು ಒಂದು ಪಾತ್ರಕ್ಕೆ ಆಯ್ಕೆ ಮಾಡುವುದಿಲ್ಲ. ಆ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯವನ್ನು ಒದಗಿಸಬಲ್ಲರು ಎಂದು ಅವರಿಗೆ ಭರವಸೆ ಸಿಕ್ಕ ಮೇಲೆ ಅವರಿಗಾಗಿ ಆ ಪಾತ್ರವನ್ನು ನೀಡುತ್ತಾರೆ. ಇಲ್ಲಿ ಕೂಡ ಅವರು ತಾವು ಹೆಣೆದಿರುವ ಪಾತ್ರದ ಕುರಿತಂತೆ ಹಾಗು ತಾವು ಆಯ್ಕೆ ಮಾಡಿರುವ ನಟಿಯ ಕುರಿತಂತೆ ಭರವಸೆಯನ್ನು ಹೊಂದಿದ್ದರು.

ತಾಯಿ ದಯವಿಟ್ಟು ನೀವು ಈ ಪಾತ್ರದಲ್ಲಿ ನಟಿಸಿ ಖಂಡಿತವಾಗಿ ಪಾತ್ರ ನಿಮಗೆ ಒಂದು ದೊಡ್ಡ ಹೆಸರನ್ನು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಅವರು ಹೇಳಿಬಿಡುತ್ತಾರೆ. ಈ ಪಾತ್ರಕ್ಕೆ ನೀವು ಬಿಟ್ಟರೆ ಬೇರೆ ಯಾರೂ ಕೂಡ ನಟಿಸಲು ಸಾಧ್ಯವೇ ಇಲ್ಲ ಎನ್ನುವುದಾಗಿ ಹೇಳಿಬಿಡುತ್ತಾರೆ. ಅಷ್ಟರಮಟ್ಟಿಗೆ ಜಯಂತಿ ರವರು ಆ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಪುಟ್ಟಣ್ಣ ಕಾನ್ಫಿಡೆಂಟ್ ಆಗಿದ್ದರು. ಆಗ ಜಯಂತಿ ರವರು ನಿಮ್ಮ ಮೇಲೆ ಇರುವಂತಹ ಭರವಸೆ ಮೇಲೆ ನಾನು ಈ ಸಿನಿಮಾದ ಪಾತ್ರವನ್ನು ಮಾಡುತ್ತೇನೆ ಎಂಬುದಾಗಿ ನಟಿಸುತ್ತಾರೆ.

ಸಿನಿಮಾ ಯಾವ ಮಟ್ಟಕ್ಕೆ ದೊಡ್ಡ ಯಶಸ್ಸನ್ನು ಕಂಡಿದೆ ಎಂಬುದು ನಿಮಗೆಲ್ಲಾ ಈಗಾಗಲೇ ತಿಳಿದಿರುವಂತಹ ವಿಚಾರ. ಅದಾದ ಮೇಲೆ ಹಲವಾರು ಬಾರಿ ತಮ್ಮ ಸಿನಿಮಾ ಜೀವನದಲ್ಲಿ ಎಡಕಲ್ಲು ಗುಡ್ಡದಮೇಲೆ ಬೀರಿರುವಂತಹ ಯಶಸ್ಸಿನ ಪ್ರಭಾವವನ್ನು ಆಗಾಗ ನಟಿ ಜಯಂತಿ ರವರು ಹೇಳಿಕೊಂಡಿದ್ದಾರೆ. ತಮ್ಮ ಅಭಿನಯದಿಂದಲೇ ಕನ್ನಡ ತಮಿಳು ತೆಲುಗು ಮರಾಠಿ ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿರುವಂತಹ ನಟಿ ಜಯಂತಿ ಅಮ್ಮನವರು ಇಂದಿಗೂ ಕೂಡ ಅವರು ನಮ್ಮ ಜೊತೆಗೆ ಇಲ್ಲದೆ ಇರಬಹುದು ಆದರೆ ಅವರ ನಟನೆಯ ಮೂಲಕ ಸದಾಕಾಲ ಅವರು ಅಮರರಾಗಿ ಇರುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.