ಅತ್ತಿಗೆಗಾಗಿ ಅದೊಂದು ವಿಚಾರದಲ್ಲಿ ಅಪ್ಪು ರವರು ಅದೆಂತಹ ತ್ಯಾಗ ಮಾಡಿದ್ದರು ಗೊತ್ತೇ?? ದೊಡ್ಮನೆ ಕಿರಿಮಗ ಮಾಡಿದ್ದೇನು ಗೊತ್ತೇ??

41

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ದಿನದಂದು ಹಾಗೂ ಅವರ ಅಂತಿಮ ದರ್ಶನದ ದಿನದಂದು 25 ಲಕ್ಷಕ್ಕೂ ಅಧಿಕ ಜನರು ಕಂಠೀರವ ಸ್ಟೇಡಿಯಂನಲ್ಲಿ ಅವರ ದರ್ಶನವನ್ನು ಮಾಡಿ ಹೋಗಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನು ಬಿಟ್ಟು ಅಗಲಿ ಹಲವಾರು ತಿಂಗಳುಗಳೇ ಕಳೆದಿದ್ದರೂ ಕೂಡ ಇಂದಿಗೂ ಅವರ ಸಮಾಧಿ ದರ್ಶನ ಮಾಡಲು ಸಾವಿರಾರು ಅಭಿಮಾನಿಗಳು ಈಗಲೂ ಕೂಡ ಹೋಗುತ್ತಿದ್ದಾರೆ. ಅವರು ನಮ್ಮನ್ನು ದೈಹಿಕವಾಗಿ ಆಗಿರಬಹುದು ಆದರೆ ಮಾನಸಿಕವಾಗಿ ಇಂದಿಗೂ ಕೂಡ ನಮ್ಮ ಜೊತೆಯಲ್ಲೇ ಇದ್ದಾರೆ. ಅದರಲ್ಲೂ ಅವರು ಮಾಡಿರುವಂತಹ ಸಾಮಾಜಿಕ ಕಾರ್ಯಗಳ ಕುರಿತಂತೆ ತಿಳಿದು ಜನ ನಮ್ಮ ಕುಟುಂಬದಲ್ಲಿ ಒಬ್ಬರನ್ನು ಕಳೆದುಕೊಂಡಿರುವಷ್ಟರಮಟ್ಟಿಗೆ ದುಃಖವನ್ನು ಪಟ್ಟಿದ್ದರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಬ್ಬರು ನಾಯಕನಟ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜ ಸೇವಕನಾಗಿ ಸಮಾಜಕ್ಕೆ ಹಾಗೂ ಕಷ್ಟದಲ್ಲಿರುವವರಿಗೆ ಯಾವೆಲ್ಲ ಸಹಾಯ ಮಾಡಿದ್ದಾರೆ ಎನ್ನುವುದು ಅವರ ಮರಣದ ನಂತರ ತಿಳಿದುಬಂದಿದೆ. ನಿಜಕ್ಕೂ ಕೂಡ ಅವರು ಮಾಡಿರುವ ಕೆಲಸಗಳು ಅಧಿಕಾರದಲ್ಲಿರುವ ಜನನಾಯಕರು ಕೂಡ ಮಾಡುವುದು ಅಸಾಧ್ಯವಾಗಿದೆ. ಅಷ್ಟರಮಟ್ಟಿಗೆ ಸಮಾಜಕ್ಕೆ ಉಪಯೋಗಕಾರಿ ಆಗುವಂತಹ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇನ್ನೊಂದು ಸಮಯದಲ್ಲಿ ತಮ್ಮ ಅತ್ತಿಗೆ ಆಗಿರುವ ಗೀತಕ್ಕ ನವರಿಗೆ ಮಾಡಿರುವಂತಹ ಸಹಾಯ ಅಥವಾ ಬೆಂಬಲವನ್ನು ಕೂಡ ಇಂದಿನ ವಿಚಾರದಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ.

ನಮಗೆಲ್ಲರಿಗೂ ತಿಳಿದಿರುವಂತೆ ಮೈಸೂರಿನಲ್ಲಿರುವ ಶಕ್ತಿಧಾಮ ವನ್ನು ಪ್ರಾರಂಭಿಸಿದ್ದು ದೊಡ್ಡಮನೆಯ ಶಕ್ತಿಯಾಗಿರುವ ಪಾರ್ವತಮ್ಮನವರು. ಪಾರ್ವತಮ್ಮನವರು ಅನಾಥ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ವಸತಿ ಸೌಲಭ್ಯ ಗಳನ್ನು ಒದಗಿಸುವಂತಹ ಕಾರ್ಯವನ್ನು ಶಕ್ತಿಧಾಮ ಮೂಲಕ ಮಾಡಿದ್ದಾರೆ. ಇದರಿಂದಾಗಿ ಅವರಿಗೆ ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಲು ಕೂಡ ಇಲ್ಲಿ ಹೇಳಿಕೊಡಲಾಗುತ್ತದೆ. ಇಂದಿಗೂ ಕೂಡ ಇಲ್ಲಿಂದ ಬದುಕಿನ ಪಾಠಗಳನ್ನು ಕಲಿಸಿಕೊಂಡು ಹೋಗಿರುವಂತಹ ಹೆಣ್ಣು ಮಕ್ಕಳು ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ಕೂಡ ಪಡೆದುಕೊಂಡವರಿದ್ದಾರೆ. 2017 ರಲ್ಲಿ ಪಾರ್ವತಮ್ಮ ರವರು ನಮ್ಮನ್ನೆಲ್ಲಾ ಅಗಲಿ ಹೋದಾಗ ಶಕ್ತಿದಾಮ ವನ್ನು ಯಾರು ಮುನ್ನಡೆಸಿಕೊಂಡು ಹೋಗಬೇಕು ಎನ್ನುವುದರ ಕುರಿತಂತೆ ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದವು.

ಆಗ ದೊಡ್ಡ ಮನೆಯ ಕುಟುಂಬದ ಸದಸ್ಯರು ಸೇರಿದಂತೆ ಶಕ್ತಿಗಳ ನಡುವೆ ಯಾರನ್ನು ಶಕ್ತಿಧಾಮ ದ ಮುಖ್ಯಸ್ಥರನ್ನಾಗಿ ಮಾಡುವುದು ಎನ್ನುವುದರ ಕುರಿತಂತೆ ಚರ್ಚೆಗಳು ದೊಡ್ಡಮಟ್ಟದಲ್ಲಿ ನಡೆದವು. ಆಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತನ್ನ ಅಮ್ಮನಂತೆ ಅತ್ತಿಗೆ ಅವರನ್ನು ಕೂಡ ಹತ್ತಿರದಿಂದ ನೋಡಿದವರು. ಹೀಗಾಗಿ ಅತ್ತಿಗೆಯ ಕುರಿತಂತೆ ಸಾಕಷ್ಟು ಬಲ್ಲವರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು, ಗೀತಕ್ಕನೇ ಶಕ್ತಿ ಧಾಮವನ್ನು ಮುನ್ನಡೆಸಿಕೊಂಡು ಹೋಗಲಿ ಎಂಬುದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಅತ್ತಿಗೆಯ ಬೆಂಬಲಕ್ಕೆ ನಿಲ್ಲುತ್ತಾರೆ. ಆಗ ಶಕ್ತಿಧಾಮ ದ ಜವಾಬ್ದಾರಿಯನ್ನು ಗೀತಕ್ಕನವರಿಗೆ ವಹಿಸಿ ಕೊಡಲಾಗುತ್ತದೆ.

ನಿಮಗೆ ಗೊತ್ತಿದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಗಳಿಂದ ಬಂದಂತಹ ಹಣವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಶಕ್ತಿ ಧಾಮದ ಕಾರ್ಯಕ್ರಮಗಳಿಗಾಗಿ ಅಥವಾ ಶಕ್ತಿ ಧಾಮವನ್ನು ಮುನ್ನಡೆಸಲು ವಿನಿಯೋಗಿಸಿದ್ದಾರೆ. ಆಗಾಗ ಶಕ್ತಿಧಾಮ ಕ್ಕೆ ಬಂದು ಮಕ್ಕಳ ಜೊತೆಗೆ ಸಂತೋಷದ ಸಮಯಗಳನ್ನು ಕೂಡ ಕಳೆದು ಹೋಗುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದಿಂದಾಗಿ ಶಕ್ತಿದಾಮ ಕೂಡ ಅನಾಥವಾಯಿತು ಎಂದು ಭಾವಿಸಲಾಗಿತ್ತು.

ಆದರೆ ಈಗ ಮತ್ತೊಮ್ಮೆ ಶಿವಣ್ಣ ಹಾಗೂ ಗೀತಕ್ಕ ಮೈಸೂರಿಗೆ ಬಂದು ಶಕ್ತಿಧಾಮ ದ ಕುರಿತಂತೆ ಎಲ್ಲಾ ವಿಚಾರಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಏನು ಮಾಡಬೇಕು ಹಾಗೂ ಏನೆಲ್ಲಾ ಸೌಲಭ್ಯಗಳ ಅವಶ್ಯಕತೆ ಇದೆ ಎಂಬುದಾಗಿ ತಿಳಿದು ಅದನ್ನು ಪೂರೈಸುವತ್ತ ಹಾಗೂ ಅಪ್ಪು ಅವರ ಕನಸನ್ನು ಈಡೇರಿಸುವತ್ತ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.