ಕರುನಾಡಿನ ಮಗ, ರಾಕಿಂಗ್ ಸ್ಟಾರ್ ಯಶ್ ರವರ ಬಗ್ಗೆ ಇಂಟೆರೆಸ್ಟಿಂಗ್ ವಿಷಯವನ್ನು ತೆರೆದಿಟ್ಟ ಯಶ್ ರವರ ತಾಯಿ. ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್ ರವರು ಈಗಾಗಲೇ ಯಾವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎನ್ನುವುದು ನಿಮಗೆಲ್ಲ ಗೊತ್ತಿರುವಂತಹ ವಿಚಾರ. ಒಂದು ಕಾಲದಲ್ಲಿ ನವೀನ್ ಗೌಡ ಆಗಿದ್ದ ಇವರು ಇಂದು ಇಡೀ ದೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ಎನ್ನುವ ಜನಪ್ರಿಯತೆಗೆ ಪಾತ್ರರಾಗಿದ್ದಾರೆ. ಕನ್ನಡದ ಹಿರಿಮೆಯನ್ನು ಕನ್ನಡ ಚಿತ್ರರಂಗದ ನಿಜವಾದ ಸಾಮರ್ಥ್ಯವನ್ನು ಜಾಗತಿಕವಾಗಿ ಸಾಬೀತುಪಡಿಸಿದಂತಹ ನಟ ಎಂದರೆ ತಪ್ಪಾಗಲಾರದು.
ಪ್ರತಿಯೊಬ್ಬ ವ್ಯಕ್ತಿ ಕೂಡ ಜೀವನದಲ್ಲಿ ಏನನ್ನಾದರೂ ಸಾಧಿಸಲು ಅವರ ಜೀವನದಲ್ಲಿ ಸರಿಯಾದ ಗುರು ಹಾಗೂ ಗುರಿ ಇರಬೇಕು ಎನ್ನುವುದಾಗಿ ಹೇಳುತ್ತಾರೆ. ಯಶ್ ಜೀವನದಲ್ಲಿ ಕೂಡ ಅವರ ತಾಯಿಯವರಿಗೆ ದೇವರು ಹಾಗೂ ಗುರು ಎಲ್ಲಾ ಕೂಡ ಆಗಿದ್ದರು. ಪ್ರತಿಯೊಂದು ವಿಚಾರಗಳನ್ನು ರಾಕಿಂಗ್ ಸ್ಟಾರ್ ಯಶ್ ರವರು ಮೊದಲಿಗೆ ಹೇಳುತ್ತಿದ್ದದ್ದು ತಮ್ಮ ತಾಯಿಯವರ ಬಳಿ. ಚಿಕ್ಕವಯಸ್ಸಿನಿಂದಲೂ ಕೂಡ ತಮ್ಮ ಮಕ್ಕಳನ್ನು ತಾಯಿ ಪುಷ್ಪ ರವರು ಶ್ರೀಮಂತರ ಮಕ್ಕಳಂತೆ ಬೆಳೆಸಿದವರು. ತಂದೆ ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದರು. ಗಂಡ ದುಡಿದುಕೊಂಡು ಬಂದಂತಹ ಹಣವನ್ನು ಮಕ್ಕಳಿಗಾಗಿ ಖರ್ಚು ಮಾಡಬೇಡ ಉಳಿತಾಯ ಮಾಡುವುದಾಗಿ ಉಳಿದ ಸಂಬಂಧಿಕರು ಹೇಳುತ್ತಿದ್ದರಂತೆ. ಆದರೆ ಕಷ್ಟ ಇದ್ದರೂ ಕೂಡ ಸಂಬಂಧಿಕರು ಯಶ್ ಹಾಗೂ ಯಶ್ ರವರ ಕುಟುಂಬಕ್ಕೆ ಯಾವುದೇ ಸಹಾಯವನ್ನು ಮಾಡಿಲ್ಲ.

ರಾಕಿಂಗ್ ಸ್ಟಾರ್ ಯಶ್ ರವರನ್ನು ಚಿಕ್ಕವಯಸ್ಸಿನಿಂದಲೂ ಕೂಡ ಅವರಿಗೆ ಬೇಕಾದದ್ದನ್ನು ಅವರಿಗೆ ಸಿಗುವಂತೆ ಮಾಡಿದವರು ತಾಯಿ ಪುಷ್ಪ. ಮಗ ಏನೇ ಇಷ್ಟಪಟ್ಟರು ಕೂಡ ಅದನ್ನು ಸಾಲ ಸೋಲ ಮಾಡಿಯಾದರೂ ತಂದುಕೊಟ್ಟವರು. ಇನ್ನು ಪ್ರೀತಿಯ ವಿಚಾರದಲ್ಲಿ ಕೂಡ ತಾಯಿಯ ಬಳಿ ಬಂದು ಮೊದಲಬಾರಿ ರಾಕಿಂಗ್ ಸ್ಟಾರ್ ಯಶ್ ರವರು ಹೇಳಿದಾಗ ನೀನು ಜೀವನದಲ್ಲಿ ಸ್ವಾವಲಂಬಿಯಾದ ಮೇಲೆ ನಿನ್ನ ಕಾಲಿನ ಮೇಲೆ ನಿಂತುಕೊಂಡ ಮೇಲೆ ಮದುವೆಯಾಗುವಂತೆ ಎಂಬುದಾಗಿ ಸಲಹೆ ನೀಡಿದ್ದರಂತೆ.
ಇಂದು ಜಾಗತಿಕ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಬೆಳೆದು ನಿಂತಿದ್ದಾರೆ. ಈ ಕುರಿತಂತೆ ನಿಮಗೆ ಎಷ್ಟು ಸಂತೋಷವಿದೆ ಎಂಬುದಾಗಿ ತಾಯಿ ಪುಷ್ಪ ರವರನ್ನು ಸಂದರ್ಶನದಲ್ಲಿ ಕೇಳಿದರೆ. ನನ್ನ ಮಗನ ಬಗ್ಗೆ ನನಗೆ ಗೊತ್ತು ಇದೇನು ಅಲ್ಲ ಆತ ಬೆಳೆಯೋದು ಇನ್ನುಮುಂದೆ ತುಂಬಾನೇ ಇದೆ ಎಂಬುದಾಗಿ ಹೇಳುತ್ತಾರೆ. ತನ್ನ ಮಗುವಿನ ಸಾಮರ್ಥ್ಯದ ಗುರಿ ತಂದೆ-ತಾಯಿಗಳ ಇನ್ಯಾರಿಗೆ ಗೊತ್ತಿರುತ್ತದೆ ಹೇಳಿ. ಇದೇ ಏಪ್ರಿಲ್ 14ರಂದು ಬಿಡುಗಡೆಯಾಗುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ರವರ ಯಶಸ್ಸು ಎನ್ನುವುದು ಬಾನಂಗಳ ವನ್ನು ತಲುಪಲಿ ಎಂದು ಹಾರೈಸೋಣ.