ಭಾರತದ ಭವಿಷ್ಯದ ಆಟಗಾರರನ್ನು ಆಯ್ಕೆ ಮಾಡಿ, ಈತ ಮೂರು ಮಾದರಿಗಳಲ್ಲಿ ಮಿಂಚುತ್ತಾನೆ ಎಂದ ಬಟ್ಲರ್. ಯಾರಂತೆ ಗೊತ್ತೇ ಆ ಯುವ ಕ್ರಿಕೆಟಿಗ??

11

ನಮಸ್ಕಾರ ಸ್ನೇಹಿತರೇ ಜೋಸ್ ಬಟ್ಲರ್ , ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ. ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಬಟ್ಲರ್, ಇಂಗ್ಲೆಂಡ್ ತಂಡದ ಉಪನಾಯಕ ಸಹ. ಇನ್ನು ಐಪಿಎಲ್ ನಲ್ಲಿಯೂ ಭರ್ಜರಿ ಹವಾ ಇಟ್ಟಿರುವ ಬಟ್ಲರ್ ಸದ್ಯ ರಾಜಸ್ಥಾನ ರಾಯಲ್ಸ್ ತಂಡದ ಆಧಾರ ಸ್ತಂಭ. ಈಗಾಗಲೇ ಒಂದು ಶತಕ ಗಳಿಸಿ ಆರೆಂಜ್ ಕ್ಯಾಪ್ ಧರಿಸಿರುವ ಬಟ್ಲರ್ ಸದ್ಯ ತಮ್ಮ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಯೂನಿಟ್ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಒಬ್ಬ ಭಾರತದ ಎಲ್ಲಾ ಮಾದರಿಯ ಕ್ರಿಕೇಟ್ ಗೆ ಹೇಳಿಮಾಡಿಸಿದಂತಹ ಆಟಗಾರ ಎಂದು ಶ್ಲಾಘಿಸಿದ್ದಾರೆ. ಬನ್ನಿ ಆ ಆಟಗಾರ ಯಾರು ಎಂಬುದನ್ನು ತಿಳಿಯೋಣ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಭಾರತದ ತ್ರಿವಳಿ ಬೌಲರ್ ಗಳಾದ ಆರ್.ಅಶ್ವಿನ್, ಯುಜವೇಂದ್ರ ಚಾಹಲ್ ಹಾಗೂ ಕನ್ನಡಿಗ ಪ್ರಸಿದ್ದ್ ಕೃಷ್ಣ ಇದ್ದಾರೆ. ಅದರಲ್ಲೂ ಕನ್ನಡಿಗ ಪ್ರಸಿದ್ದ್ ಕೃಷ್ಣ ಈಗಾಗಲೇ ಹೆಚ್ಚು ಭರವಸೆ ಮೂಡಿಸಿದ್ದಾರೆ. ತಮ್ಮ ವೇಗ ಹಾಗೂ ಬೌನ್ಸ್ ನಿಂದ ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳಿಗೆ ನಡುಕ ಹುಟ್ಟಿಸಿದ್ದಾರೆ.

ಪ್ರಸಿದ್ಧ್ ಬಗ್ಗೆ ಮಾತನಾಡಿರುವ ಜೋಸ್ ಬಟ್ಲರ್, ಇವರು ಭಾರತ ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ. ಟಿ 20, ಏಕದಿನ ಹಾಗೂ ಟೆಸ್ಟ್ ತಂಡ ಹೀಗೆ ಮೂರು ಮಾದರಿ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರನ್ನು ಭಾರತ ತಂಡ ಸರಿಯಾಗಿ ಬಳಸಿಕೊಂಡರೇ, ವಿಶ್ವದರ್ಜೆಯ ಬೌಲರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡ ಈ ಭಾರಿಯ ಐಪಿಎಲ್ ಕಪ್ ಗೆಲ್ಲುವ ವಿಶ್ವಾಸ ಮೂಡಿಸಿದೆ. ಬ್ಯಾಟಿಂಗ್,ಬೌಲಿಂಗ್, ಫೀಲ್ಡಿಂಗ್ ಹೀಗೆ ಮೂರು ವಿಭಾಗದಲ್ಲಿ ಬಲಿಷ್ಠವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.