ಹನಿಮೂನ್ ಗಾಗಿ ಸೌತ್ ಆಫ್ರಿಕಾ ಗೆ ಹೋದ ನವದಂಪತಿಗಳು, ಆದರೆ ಅಲ್ಲಿ ನಡೆದ್ದಡೇನು ಗೊತ್ತೇ? ಸಿನಿಮಾ ಸ್ಟೋರಿಗಿಂತಲೂ ಹೆಚ್ಚು ಟ್ವಿಸ್ಟ್ ಆಗಿ ಕೊನೆಗೂ ನಿಂತದ್ದು ಎಲ್ಲಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಆ ನವವಿವಾಹಿತ ಜೋಡಿ ತಮ್ಮ ಹನಿಮೂನ್ ಕಳೆಯಲು ಸೌತ್ ಆಫ್ರಿಕಾದ ಕೇಪ್ ಟೌನ್ ಗೆ ಬಂದಿದ್ದರು. ರಾತ್ರಿ ಡಿನ್ನರ್ ಮುಗಿಸಿ ಟ್ಯಾಕ್ಸಿಯಲ್ಲಿ ತಮ್ಮ ರೂಮಿಗೆ ಹೋಗುತ್ತಿರಬೇಕಾದರೆ ಆಗಂತುಕರು ಬಂದು ಕಾರನ್ನು ಅಡ್ಡಗಟ್ಟಿ ಇಬ್ಬರನ್ನು ಕೂಡ ಬೇರ್ಪಡಿಸಿ ಹುಡುಗನಿಂದ ಹಣವನ್ನು ತೆಗೆದುಕೊಂಡು ಆಕೆಯನ್ನು ಕರೆದುಕೊಂಡು ಹೋಗಿ ಅಜ್ಞಾತ ಸ್ಥಳದಲ್ಲಿ ಮುಗಿಸುತ್ತಾರೆ. ಇದಾದ ನಂತರ ಅವರನ್ನು ಬಂಧಿಸಿದಾಗ ತಿಳಿದ ವಿಚಾರವೇನೆಂದರೆ ಆಕೆಯ ಗಂಡನ ಅವಳನ್ನು ಮುಗಿಸಲು ಸುಪಾರಿ ನೀಡಿದ್ದ ಎನ್ನುವುದಾಗಿ. ಮದುವೆಯಾದ ಹನಿಮೂನ್ ಸಂದರ್ಭದಲ್ಲಿ ಸ್ವತಹ ಗಂಡನೇ ಹಾಗೆ ಮಾಡುವುದಕ್ಕೆ ಹೇಳಿದ್ನಾ. ಇದೆಲ್ಲ ವಿಚಾರವನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಸ್ಟೋರಿಯ ಕಥಾನಾಯಕರು ಅನಿ ದೇವಾನಿ ಹಾಗೂ ಶ್ರೇನ್ ದೇವಾನಿ. ಇವರಿಬ್ಬರೂ ಕೂಡ ವಿದೇಶದಲ್ಲಿ ನೆಲೆಸಿರುವ ಭಾರತೀಯರು. ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇವರು ಮದುವೆಯಾಗಿರುತ್ತಾರೆ. 2010 ರಲ್ಲಿ ಇವರಿಬ್ಬರು ಮದುವೆಯಾಗಿರುತ್ತಾರೆ. ಮದುವೆ ಹಾಗೂ ನಿಶ್ಚಿತಾರ್ಥದ ಸಂದರ್ಭದಲ್ಲಿ ಕೂಡ ಇವರಿಬ್ಬರ ನಡುವೆ ಹಲವಾರು ವಿಚಾರಗಳಿಗಾಗಿ ವೈಮನಸ್ಸು ಉಂಟಾಗಿತ್ತು ಆದರೆ ಜೋಡಿಗಳ ನಡುವೆ ಇದೆಲ್ಲಾ ಕಾಮನ್ ಎಂದು ಇದನ್ನು ಹೆಚ್ಚಾಗಿ ಯಾರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಇಬ್ಬರು ಕೂಡ ಮದುವೆಯಾಗುತ್ತಾರೆ. ನಂತರ ಮದುವೆಯಾದ ಕೂಡಲೇ ಸೌತ್ ಆಫ್ರಿಕಾ ಗೆ ಹನಿಮೂನ್ ಗಾಗಿ ಹಾರುತ್ತಾರೆ.
ಇನ್ನು ಹೋಟೆಲ್ಗೆ ಕೂಡ ಚೆಕಿ ಇನ್ ಆಗುತ್ತಾರೆ. ಈ ಸಿಸಿಟಿವಿ ಫುಟೇಜ್ ಗಳು ಕೂಡ ಆಮೇಲೆ ಪೊಲೀಸರಿಗೆ ದೊರಕುತ್ತದೆ. ಹೋಟೆಲಿಂದ ಹೊರಗಡೆ ಬಂದಂತಹ ಶ್ರೇನಿ ಟ್ಯಾಂಗೋ ಎನ್ನುವ ಟ್ಯಾಕ್ಸಿ ಡ್ರೈವರ್ ಗೆ ಹೆಂಡತಿಯನ್ನು ಮುಗಿಸುವ ಅಂತಹ ಸುಪಾರಿ ನೀಡಲು ಬರುತ್ತಾನೆ ಆತ ಬೇಕಾಗುವಷ್ಟು ಹಣ ಕೂಡ ನೀಡುತ್ತೇನೆ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಟ್ಯಾಂಗೋ ನಾನು ಆ ಕೆಲಸವನ್ನು ಮಾಡುತ್ತಿಲ್ಲ ಆದರೆ ಅಂತಹ ಕೆಲಸ ಮಾಡುವವರು ನನಗೆ ಗೊತ್ತು ಎನ್ನುವುದಾಗಿ ಪರಿಚಯ ಮಾಡಿಕೊಡುತ್ತಾನೆ. ಹಾಗೂ ಅಲ್ಲಿ ಆನಿಯ ಮುಗಿಸಲು ಪ್ಲಾನಿಂಗ್ ಕೂಡ ನಡೆಯುತ್ತದೆ.
ನಂತರ ದಂಪತಿಗಳಿಬ್ಬರು ಕೂಡ ರಾತ್ರಿ ಪಕ್ಕದಲ್ಲೇ ಇರುವಂತಹ ಬಾರ್ ಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಸಿಕ್ಕಿರುವಂತಹ ಸಿಸಿಟಿವಿ ಹೋಟೆಲ್ಗಳಲ್ಲಿ ಇಬ್ಬರೂ ಕೂಡ ಸಂತೋಷವಾಗಿರುವಂತೆ ಕಾಣಿಸಲಿಲ್ಲ ಎಂಬುದಾಗಿ ಅವರು ಹೇಳುತ್ತಾರೆ. ಇನ್ನು ಸಿಸಿಟಿವಿ ಫೂಟೇಜ್ ನಲ್ಲಿ ಶ್ರೇನಿ ಒಬ್ಬನೇ ಬರುವಂತೆ ಕೂಡ ಕಾಣಿಸುತ್ತದೆ ಇಲ್ಲಿ ಆತ ಹಂತ’ಕರಿಗೆ ಸೂಚನೆ ನೀಡಿದ್ದಾನೆ ಎಂಬುದಾಗಿ ಹೇಳಲಾಗುತ್ತದೆ. ಇನ್ನು ಅವರು ಬರುವವರೆಗೂ ಕೂಡ ಅದೇ ಹೋಟೆಲ್ನಲ್ಲಿ ಕಾಯುತ್ತಾರೆ. ನಂತರ ಟ್ಯಾಂಗೋ ಟ್ಯಾಕ್ಸಿಯಲ್ಲಿ ಬರುತ್ತಾನೆ. ನಂತರ ನಿಮಗೆ ತಿಳಿದಿರುವಂತೆ ಆಕೆಯನ್ನು ಅಪಹರಿಸಿ ಮುಗಿಸಲಾಗುತ್ತದೆ.
ಮೊದಲಿಗೆ ಆಕೆಯ ಪತಿ ಬಳಿ ಕೇಳಿದಾಗ ಇದು ರಾಬರಿ ಅಂಡ್ ಮ’ರ್ಡರ್ ಎಂಬುದಾಗಿ ಹೇಳುತ್ತಾನೆ. ಪ್ರಕರಣವನ್ನು ಬೆನ್ನತ್ತಿದ್ದ ಸೌತ್ ಆಫ್ರಿಕಾ ಪೊಲೀಸರಿಗೆ ಟ್ಯಾಂಗೋ ಅತಿವೇಗವಾಗಿ ಸಿಕ್ಕಿಬೀಳುತ್ತಾನೆ. ಆತನ ಹೇಳಿಕೆ ಇಂದ ಆತನ ಸಹಚರರು ಕೂಡ ಸಿಕ್ಕಿಬೀಳುತ್ತಾರೆ ಆದರೆ ಎಲ್ಲರೂ ಕೂಡ ಬೊಟ್ಟುಮಾಡಿ ತೋರಿಸುವುದೇ ಶೇನಿ ದೇವಾನಿಯನ್ನು. ಮೊದಮೊದಲಿಗೆ ಪ್ರಕರಣವನ್ನು ಆನೀ ಯ ಗಂಡನ ಮೇಲೆ ತಗಲಿ ಹಾಕುವ ಪ್ರಯತ್ನ ಕೂಡ ನಡೆಯಿತು. ಆತನನ್ನೇ ತಪ್ಪಿತಸ್ಥ ಎಂಬುದಾಗಿ ಎಲ್ಲರೂ ಭಾವಿಸಿದರು

ಆದರೆ ಕೆಲವೇ ಸಮಯಗಳಲ್ಲಿ ಇದರ ಕುರಿತಂತೆ ಏನೋ ಸರಿ ಇಲ್ಲ ಎಂಬುದಾಗಿ ಪೊಲೀಸರಿಗೂ ಕೂಡ ಅನಿಸಿ ಪ್ರಕರಣವನ್ನು ಮತ್ತೆ ಪ್ರಾರಂಭಿಸಿ ಆರೋಪಿಗಳಿಂದ ಹೇಳಿಕೆಯನ್ನು ಪಡೆದುಕೊಳ್ಳಲು ಆರಂಭಿಸುತ್ತಾರೆ. ಆದರೆ ಇಲ್ಲಿ ಕೇವಲ ಟ್ಯಾಂಗೋ ಮತ್ತು ಆತನ ಸಹಚರರು ತಮ್ಮ ಶಿಕ್ಷಾವಧಿ ಕಡಿಮೆಯಾಗಲಿ ಎಂದು ತಾವು ಮಾಡಿದ ತಪ್ಪನ್ನು ಶೇನಿ ದೆವಾನಿ ಮೇಲೆ ಹಾಕಲು ಹೋಗಿದ್ದರು. ಆತ ಹೇಳಿದ ಮೆಸೇಜ್ ವಿಚಾರ ಕೇವಲ ಟ್ಯಾಕ್ಸಿಯನ್ನು ಬೇಗ ಬರಲು ಮಾತ್ರ ಆತ ಮೆಸೇಜ್ ಹಾಕಿದ್ದು ಅಷ್ಟೇ.
ಗಂಡ-ಹೆಂಡತಿ ನಡುವೆ ವೈಮನಸ್ಸು ಇದ್ದರೂ ಕೂಡ ಶೇನಿ ತನ್ನ ಹೆಂಡತಿಯನ್ನು ಸಂತೋಷವಾಗಿರಲು ಆಕೆ ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಟ್ಯಾಂಗೋ ಶೇನಿಗೆ ನನ್ನ ಹಣವನ್ನು ರೆಡಿ ಮಾಡಿ ಇಟ್ಟಿರು ಎನ್ನುವುದಾಗಿ ಮೆಸೇಜ್ ಹಾಕುತ್ತಾನೆ ಇದೆ ಮೆಸೇಜ್ ನಿಂದ ಇಡೀ ಪ್ರಕರಣದ ರೂಪವನ್ನೇ ಬದಲಾಯಿಸಿರುತ್ತಾನೆ. ಇದು ನಿಜವಾಗಿ ಕೇವಲ ಟ್ಯಾಕ್ಸಿಯ ಬಾಡಿಗೆ ಹಣ ಆಗಿರುತ್ತದೆ ಎಂಬುದು ನಂತರದ ತನಿಖೆಯಲ್ಲಿ ತಿಳಿದುಬರುತ್ತದೆ.
ಕೇವಲ ತಮ್ಮ ಹಣದ ಆಸೆಯಿಂದಾಗಿ ಒಂದು ಮುಗ್ಧ ಜೀವವನ್ನೇ ಮುಗಿಸಿಬಿಟ್ಟಿದ್ದರು. ಸಂತೋಷವಾಗಿ ಬಾಳಿ ಬದುಕ ಬೇಕಾಗಿದ್ದ ಆನಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತನ್ನ ಜೀವನವನ್ನು ಕಳೆದುಕೊಂಡಿದ್ದು ನಿಜಕ್ಕೂ ಕೂಡ ವಿಷಾದನೀಯ. ಶೇನಿ ಕೂಡ ತನ್ನ ಪ್ರೀತಿಯ ಪತ್ನಿಯನ್ನು ಕಳೆದುಕೊಂಡು ಜೀವನದಲ್ಲಿ ಒಂಟಿಯಾಗಿದ್ದ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.