ಕೊನೆಗೂ ಸಿಕ್ತು ಕಾರಣ, ಮಹೇಶ್ ಬಾಬು ಜೊತೆ ಕಾಣಿಸಿಕೊಂಡಿದ್ದಕ್ಕೆ ಕಾರಣವನ್ನು ತಿಳಿಸಿದ ಕಿರುತೆರೆಯ ಟಾಪ್ ನಟಿ ಮೇಘ ಶೆಟ್ಟಿ.

3,844

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಧಾರವಾಹಿ ಕ್ಷೇತ್ರದ ನಟಿಯರು ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಂಪಾದಿಸುತ್ತಿದ್ದಾರೆ. ಅವರಲ್ಲಿ ನಟಿ ಮೇಘ ಶೆಟ್ಟಿ ರವರು ಕೂಡ ಒಬ್ಬರು. ಜೀ ಕನ್ನಡ ವಾಹಿನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪ್ರತಿಯೊಬ್ಬ ಪ್ರೇಕ್ಷಕರ ಮನದಲ್ಲಿ ಕೂಡ ಸ್ಟಾರ್ ನಟಿಯಾಗಿ ಜನಪ್ರಿಯತೆ ಹೊಂದಿದ್ದಾರೆ. ಮೇಘ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೇಡಿಂಗ್ ಸಿನಿಮಾದಲ್ಲಿ ನಟಿಸುವ ಮೂಲಕ ಹೀರೋಯಿನ್ ಕೂಡ ಆಗಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಮೇಘ ಶೆಟ್ಟಿರವರಿಗೆ 9 ಲಕ್ಷಕ್ಕೂ ಅಧಿಕ ಅಭಿಮಾನಿಗಳಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇನ್ನು ನಟಿಯಾಗಿ ಕಾಣಿಸಿಕೊಂಡಿದ್ದ ಮೇಘ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಂಡಸಂಪಿಗೆಯನ್ನು ಧಾರವಾಹಿಯನ್ನು ಕೂಡ ಈಗ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ರವರೊಂದಿಗೆ ಮೇಘ ಶೆಟ್ಟಿ ರವರು ಫೋಟೋವನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

ಈ ಕುರಿತಂತೆ ಮೇಘಾ ಶೆಟ್ಟಿ ಅವರು ಮಹೇಶ್ ಬಾಬುರವರ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಪುಕಾರುಗಳು ಕೂಡ ಮನರಂಜನಾ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದವು. ಆದರೆ ಈ ಕುರಿತಂತೆ ಕೊನೆಗೂ ಕೂಡ ಮೇಘ ಶೆಟ್ಟಿ ರವರು ಕ್ಲಾರಿಫಿಕೇಶನ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಈ ಕುರಿತಂತೆ ಸ್ಪಷ್ಟೀಕರಣ ನೀಡುತ್ತಾ ಮೇಘ ಶೆಟ್ಟಿ ರವರು ಸಿನಿಮಾ ಎಲ್ಲ ಏನು ಇಲ್ಲ ಕೇವಲ ಜಾಹೀರಾತು ಚಿತ್ರೀಕರಣಕ್ಕಾಗಿ ಹೋಗಿದ್ದೆ ಎನ್ನುವುದಾಗಿ ಕೊನೆಗೂ ಕೂಡ ಈ ವಿಚಾರದ ಕುರಿತಂತೆ ಮೌನವನ್ನು ಮುರಿದಿದ್ದಾರೆ. ಸಿನಿಮಾ ಅಲ್ಲದೇ ಇರಬಹುದು ಆದರೆ ಇವರಿಬ್ಬರೂ ಈ ಫೋಟೋದಲ್ಲಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದಂತೂ ಸುಳ್ಳಲ್ಲ.